ಸುಪ್ರೀಂ ಕೋರ್ಟ್ ಆದೇಶದಂತೆ ಎಸ್‌ಬಿಐ ಚುನಾವಣಾ ಬಾಂಡ್‌ಗಳನ್ನು ಬಿಡುಗಡೆ ಮಾಡುವವರೆಗೂ ಕೇಂದ್ರ ಚುನಾವಣಾ ಆಯೋಗವು ಲೋಕಸಭಾ ಚುನಾವಣಾ ದಿನಾಂಕಗಳನ್ನು ಘೋಷಿಸಬಾರದು ಎಂದು 79ಕ್ಕೂ ಮಾಜಿ ನಾಗರಿಕ ಸೇವಾ ಅಧಿಕಾರಿಗಳು ಮುಕ್ತ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಲೋಕಸಭಾ ಚುನಾವಣೆಗೂ ಮುನ್ನ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ಎಂಬ ಎಸ್‌ಬಿಐನ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಮಾಜಿ ಅಧಿಕಾರಿಗಳು ತಿಳಿಸಿದ್ದಾರೆ.
“ಬಾಂಡ್‌ಗಳ ಮೂಲಕ ಕೊಟ್ಟು ತೆಗೆದುಕೊಂಡಿರುವುದು ಹಾಗೂ ಕೆಲವು ಕಾರ್ಪೊರೇಟ್ ಸಂಸ್ಥೆಗಳು ದಾಳಿಯನ್ನು ತಡೆಯುವ ಸಲುವಾಗಿ ಕೊಡುಗೆಯನ್ನು ನೀಡಿರುವ ಸಂಶಯಸ್ಪದ ವ್ಯವಹಾರಗಳಿಂದ ಮರೆ ಮಾಚಲು ಹಾಗೂ ಸರ್ಕಾರ ಟೀಕೆಗಳಿಂದ ರಕ್ಷಣೆ ಪಡೆಯಲು ಪ್ರಯತ್ನಿಸುತ್ತಿದೆ” ಎಂದು ಅಧಿಕಾರಿಗಳು ಪತ್ರದಲ್ಲಿ ತಿಳಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹಾಗೂ ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರಿಗೆ ಸಾಂವಿಧಾನಿಕ ನಡವಳಿಕೆ ಗುಂಪಿನ ಹೆಸರಿನ 79 ಮಾಜಿ ಅಧಿಕಾರಿಗಳ ಗುಂಪು ಬಹಿರಂಗ ಪತ್ರ ಬರೆದಿದ್ದಾರೆ.
“ಎಸ್‌ಬಿಐ ಈ ಮಾಹಿತಿಯನ್ನು ಬಿಡುಗಡೆ ಮಾಡುವವರೆಗೂ 2014ರ ಲೋಕಸಭಾ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗವು ಘೋಷಣೆ ಮಾಡಬಾರದು. ಒಂದು ವೇಳೆ ಆಯೋಗವು ತಟಸ್ಥ ನೀತಿ ಅನುಸರಿಸಿದರೆ ಭಾರತೀಯ ಮತದಾರರ ಮಾಹಿತಿ ಹಕ್ಕಿಗೆ ಗೌರವ ನೀಡುವ ಸಾಂವಿಧಾನಿಕ ನಿಯಮ ಅಳಿದು ಹೋಗುತ್ತದೆ ಹಾಗೂ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಯನ್ನು ನಡೆಸುವುದು ಸಾಧ್ಯವಾಗುವುದಿಲ್ಲ. ಇದರಿಂದ ಭಾರತದಲ್ಲಿ ಪ್ರಜಾಸತ್ತಾತ್ಮಕತೆಗೆ ಮರಣದ ಪೆಟ್ಟಾಗುತ್ತದೆ ಎಂದು ನಮಗೆ ತಿಳಿದಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಯ ಬಾಂಡ್ ಬಹಿರಂಗಗೊಳಿಸಲು ಎಸ್‌ಬಿಐ ಏಕೆ ಹಿಂಜರಿಯುತ್ತಿದೆ?
ಮುಕ್ತ ಪತ್ರ ಬರೆದು ಸಹಿ ಹಾಕಿದವರಲ್ಲಿ ಶಿವಶಂಕರ್ ಮೆನನ್, ಜಿ ಕೆ ಪಿಳ್ಳೈ, ಮೀರನ್ ಸಿ ಬೋರ್ವಾಂಕರ್, ವಜಾಹತ್ ಹಿಬಿಬುಲ್ಲಾ, ಕೆ ಪಿ ಫೈಬನ್, ಜುಲಿಯೊ ರಿಬಾರಿಯೊ ಹಾಗೂ ಕೆ ಸುಜಾತಾ ರಾವ್ ಒಳಗೊಂಡ ಅಧಿಕಾರಿಗಳು ಸೇರಿದ್ದಾರೆ.
ಪ್ರಸ್ತುತ ಲೋಕಸಭಾ ಅವಧಿಯು ಜೂನ್ 16 ಕ್ಕೆ ಕೊನೆಗೊಳ್ಳಲಿದ್ದು, ಚುನಾವಣೆ ಪ್ರಕ್ರಿಯೆ ಕೂಡ ಕೊನೆಗೊಳ್ಳಬೇಕಿದೆ.ಆಯೋಗವು ಮಾರ್ಚ್ 27ರೊಳಗೆ ಅಥವಾ ಮುಂಚೆ ವೇಳಾಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
“ಎಸ್‌ಬಿಐ ಚುನಾವಣಾ ಘೋಷಣೆಗೂ ಮುನ್ನ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಒದಗಿಸಬೇಕು. ಚುನಾವಣಾ ಆಯೋಗವು ಸಂವಿಧಾನದ 324ನೇ ವಿಧಿಯಡಿಯ ಅಧಿಕಾರ ಬಳಸಿಕೊಂಡು ತಮ್ಮ ಘನತೆಯನ್ನು ಮರಳಿ ಪಡೆಯುವ ಸದಾವಕಾಶ ಇದಾಗಿದೆ” ಎಂದು ತಿಳಿಸಲಾಗಿದೆ.
“48 ಕೋಟಿ ಖಾತೆದಾರರೊಂದಿಗೆ ಉನ್ನತ ಮಟ್ಟದ ಡಿಜಿಟಲೀಕರಣ ಹೊಂದಿರುವ ಭಾರತದ ಅತ್ಯಂತ ದೊಡ್ಡ ಬ್ಯಾಂಕ್ ದಾಖಲೆಗಳನ್ನು ಹಸ್ತಚಾಲಿತವಾಗಿ ಇರಿಸಲಾಗಿದೆ ಹಾಗೂ ಮಾಹಿತಿ ಬಿಡುಗಡೆ ಮಾಡಲು ಜೂನ್ 30ರ ವರೆಗೂ ವಿಸ್ತರಣೆ ಸಮಯ ಕೇಳಿರುವುದು ದುಃಖದಾಯಕವಾಗಿದೆ” ಎಂದು ಮಾಜಿ ಅಧಿಕಾರಿಗಳು ಹೇಳಿದ್ದಾರೆ.
ಕೋರ್ಟ್‌ಗೆ ಮಾಹಿತಿ ನೀಡಲು ಹತ್ತು ನಿಮಿಷಗಳಿಗಿಂತ ಹೆಚ್ಚು ಅವಧಿ ಬೇಕಾಗಿಲ್ಲ ಎಂದು ಮಾಜಿ ಹಣಕಾಸು ಕಾರ್ಯ ಸುಭಾಷ್ ಚಂದ್ರ ಗಾರ್ಗ್ ಅವರ ಹೇಳಿಕೆಗಳನ್ನು ಅಧಿಕಾರಿಗಳು ಇಲ್ಲಿ ಉಲ್ಲೇಖಿಸಿದ್ದಾರೆ.
