ಚಂಡೀಗಢ ಮೇಯರ್ | ಬಿಜೆಪಿಗೆ ಮತ್ತೆ ಠಕ್ಕರ್ ನೀಡಿದ ಆಪ್: ಪಕ್ಷ ಬಿಟ್ಟಿದ್ದ ಮೂವರ ಪೈಕಿ ಇಬ್ಬರಿಂದ ‘ಘರ್ ವಾಪ್ಸಿ’

0
479

ಸುಪ್ರೀಂ ಕೋರ್ಟ್‌ನಿಂದ ಹಿಡಿದು ದೇಶಾದ್ಯಂತ ಸುದ್ದಿಯಾಗಿದ್ದ ಚಂಡೀಗಢ ಮೇಯರ್ ಚುನಾವಣೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಬಿಜೆಪಿಗೆ ಮತ್ತೆ ಠಕ್ಕರ್ ನೀಡಿರುವ ಆಮ್ ಆದ್ಮಿ ಪಕ್ಷ, ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದ ಮೂವರು ಕೌನ್ಸಿಲರ್‌ಗಳ ಪೈಕಿ ಇಬ್ಬರನ್ನು ಇಂದು ಘರ್ ವಾಪ್ಸಿ ಮಾಡಿದೆ.

ಚಂಡೀಗಢದ ಆಪ್ ಕೌನ್ಸಿಲರ್‌ಗಳಾಗಿದ್ದ ಪೂನಂ ದೇವಿ, ನೇಹಾ ಮುಸಾವತ್ ಮತ್ತು ಗುರುಚರಣ್ ಕಲಾ ಅವರು ಮೇಯರ್ ಚುನಾವಣೆಯ ಅಕ್ರಮದ ನಡುವೆಯೇ ಬಿಜೆಪಿ ಸೇರಿದ್ದರು. ಆ ಬಳಿಕ ಇಂದು ದಿಡೀರ್ ಬೆಳವಣಿಗೆಯಲ್ಲಿ ಕೌನ್ಸಿಲರ್‌ಗಳಾಗಿದ್ದ ಪೂನಂ ದೇವಿ, ನೇಹಾ ಮುಸಾವತ್ ಅವರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆಗೊಳಿಸುವ ಮೂಲಕ ಬಿಜೆಪಿಗೆ ಠಕ್ಕರ್ ನೀಡಿದೆ.

ಮತ್ತೆ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಹೇಳಿಕೆ ನೀಡಿರುವ ನೇಹಾ ಮುಸಾವತ್, “ಮತ್ತೆ ಆಮ್ ಆದ್ಮಿ ಪಕ್ಷಕ್ಕೆ ಸೇರುವ ಮೂಲಕ ಘರ್ ವಾಪ್ಸಿ ಆಗಿದ್ದೇನೆ. ಮನೆ ಎಂದ ಮೇಲೆ ಜಗಳ ಇದ್ದೇ ಇರುತ್ತದೆ. ಈಗ ಅದು ಶಮನಗೊಂಡಿದೆ. ಹಾಗಾಗಿ, ಮತ್ತೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇವೆ” ಎಂದು ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಳೆದ ಸೋಮವಾರ(ಮಾ.4) ಚಂಡೀಗಢ ಮಹಾನಗರ ಪಾಲಿಕೆಯ ಹಿರಿಯ ಉಪ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಈ ಬೆಳವಣಿಗೆ ಬಳಿಕ ಬಿಜೆಪಿ ಸೇರಿದ್ದ ಮೂವರ ಪೈಕಿ ಇಬ್ಬರು ಪಕ್ಷ ಸೇರ್ಪಡೆಗೊಂಡಿದ್ದಾರೆ.

35 ಮಂದಿ ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 17 ಕೌನ್ಸಿಲರ್ ಗಳನ್ನು ಹೊಂದಿತ್ತು. ಇದಕ್ಕೂ ಮುನ್ನ ಕೇವಲ 14 ಸದಸ್ಯರನ್ನು ಹೊಂದಿದ್ದ ಬಿಜೆಪಿಯ ಸಂಖ್ಯಾಬಲವು ಆಪ್ ಪಕ್ಷದ ಮೂವರು ಸಸದಸ್ಯರು ಬಿಜೆಪಿಗೆ ಪಕ್ಷಾಂತರ ಮಾಡುವ ಮೂಲಕ 17ಕ್ಕೆ ಏರಿಕೆಯಾಗಿತ್ತು. ಅವರೆಲ್ಲ ಫೆಬ್ರವರಿ 19ರಂದು ಬಿಜೆಪಿಗೆ ಸೇರ್ಪಡೆಯಾಗಿದ್ದರು.

LEAVE A REPLY

Please enter your comment!
Please enter your name here