ನಮ್ಮಿಂದಲೇ ಓಟು ಬರುತ್ತವೆ ಎಂಬುದು ಅಪ್ಪ-ಮಕ್ಕಳ ಬರೀ ಕಲ್ಪನೆ: ಯತ್ನಾಳ್‌ ವ್ಯಂಗ್ಯ

Date:

Advertisements

ಲೋಕಸಭೆ ಚುನಾವಣೆಯಲ್ಲಿ ಹೊತ್ತಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮತ್ತೆ ಯಡಿಯೂರಪ್ಪ ಕುಟುಂಬದ ವಿರುದ್ಧ ಕಿಡಿಕಾರಿದ್ದಾರೆ. ಯಾದಗಿರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಯಡಿಯೂರಪ್ಪ ಮತ್ತು ವಿಜಯೇಂದ್ರ ಮುಖ ನೋಡಿ ಜನರು ಓಟು ಹಾಕುವುದಿಲ್ಲ”ಎಂದಿದ್ದಾರೆ.

“ನಮ್ಮಿಂದೇ ಓಟು ಬರುತ್ತವೆ ಎಂಬುದು ಅಪ್ಪ-ಮಕ್ಕಳದ್ದು ಬರೀ ಕಲ್ಪನೆ. ನರೇಂದ್ರ ಮೋದಿ ಅವರ ಮುಖ ನೋಡಿ ಓಟು ಹಾಕುತ್ತಾರೆ. ನರೇಂದ್ರ ಮೋದಿ, ಭಾರತ, ಹಿಂದೂತ್ವ, ಅಯೋಧ್ಯೆ ರಾಮ ಮಂದಿರ ಮೇಲೆಯೇ ಚುನಾವಣೆ ನಡೆಯಲಿದೆ” ಎಂದರು.

“ಕುತಂತ್ರಿಗಳು ಮಾಡಿಸುತ್ತಿರುವ ಗೋಬ್ಯಾಕ್‌ ಹಾಗೂ ಕಮ್‌ ಇನ್‌ ನಡೆಯಲ್ಲ. ತಮ್ಮ ಕುಟುಂಬದವರೇ ಕೇಂದ್ರದಲ್ಲಿ ಮಂತ್ರಿಯಾಗಬೇಕು. ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಬೇಕೆಂದು ಕಲ್ಪನೆಯಿಟ್ಟುಕೊಂಡು ಹೋಗುತ್ತಾರಲ್ಲ. ಇದು ಸಾಧ್ಯವಿಲ್ಲ. 2024ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ವಂಶವಾದ, ಭ್ರಷ್ಟಾಚಾರ, ಅಡ್ಜೆಸ್ಟ್‌ಮೆಂಟ್‌ ಮೂರನ್ನೂ ಕಿತ್ತಿಹಾಕಲಿದ್ದಾರೆ” ಎಂದು ಹೇಳಿದರು.

Advertisements

“ಅವರಿಗೆ ಒಮ್ಮೆಯಾದರೂ 120 ಬಂದಿವೆಯೇ, ಅಪ್ಪ-ಮಕ್ಕಳು ಎಲ್ಲರನ್ನೂ ಮುಗಿಸಬೇಕೆಂದು ಪ್ರಯತ್ನಿಸುತ್ತಿದ್ದಾರೆ. ನನಗೂ ಲೋಕಸಭೆ ಚುನಾವಣೆಗೆ ನಿಲ್ಲಿ ಎಂದರು. ಬಾಗಲಕೋಟೆ, ಬೆಳಗಾವಿ, ಕೊಪ್ಪಳ ಎಲ್ಲಿಯಾದರೂ ನಿಲ್ಲಿ ಎಂದು ಚಾಯಸ್‌ ಕೊಟ್ಟರು. ನಾನು ಕೇಂದ್ರದಲ್ಲಿ ಮಂತ್ರಿ ಮಾಡ್ತೀವಿ ಅಂದರೂ ನಿಲ್ಲೋದಿಲ್ಲ ಎಂದು ಹೇಳಿದ್ದೇನೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾರ್ಯಕರ್ತರನ್ನು ಕಡೆಗಣಿಸಿದ ಬಿಜೆಪಿ ‘ಗೋ ಬ್ಯಾಕ್’ ಘೋಷಣೆಗೆ ಬೆಚ್ಚಿತೇ?

“ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ ಯಾರು ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ನಾನು ವಿಧಾನಸಭೆಯಲ್ಲೇ ಹೇಳಿದ್ದೇನೆ. ಕದ್ದು ಮುಚ್ಚಿ ಹೇಳಿಲ್ಲ. ಅವರೆಲ್ಲರ ಅಂತ್ಯ ಲೋಕಸಭೆ ಚುನಾವಣೆ ನಂತರ ಆಗಲಿದೆ. ಅಂತಹವರಿಗೆ ಗೇಟ್‌ ಪಾಸ್‌ ನೀಡಲಾಗುತ್ತದೆ” ಎಂದು ಹೇಳಿದರು.

ಸಿಎಎ ಬಿಜೆಪಿಯ ಸಂಕಲ್ಪ

“ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಲ್ಲಿ ಹಿಂದೂಗಳು ಅಸುರಕ್ಷಿತವಾಗಿದ್ದಾರೆ. ಆದ್ದರಿಂದ, ಜಗತ್ತಿನೆಲ್ಲೆಡೆ ಅಸುರಕ್ಷಿತವಾಗಿರುವ ಹಿಂದೂಗಳಿಗೆ ನಾಗರಿಕತ್ವ ಕೊಡಬೇಕೆಂಬುದು ಮೊದಲಿನಿಂದಲೂ ಬಿಜೆಪಿಯ ಸಂಕಲ್ಪ ಇತ್ತು. ಸಿಎಎ ಜಾರಿಯಿಂದ ಜಗತ್ತಿನ ವಿವಿಧ ದೇಶದಲ್ಲಿ ಅಸುರಕ್ಷಿತವಾಗಿರುವ ಹಿಂದೂಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರು ಭಾರತೀಯ ನಾಗರಿಕತ್ವ ಕೊಡುವ ಒಳ್ಳೆಯ ಅವಕಾಶವನ್ನು ಕೊಟ್ಟಿದ್ದಾರೆ” ಎಂದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ, ಬೆಂಕಿ ಹಚ್ಚಿ ಸುಟ್ಟ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಎಸ್ ಎಫ್ ಐ ಆಗ್ರಹ

ಚಿತ್ರದುರ್ಗದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಹಿರಿಯೂರು ತಾಲೂಕಿನ 19 ವರ್ಷದ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಆಹ್ವಾನ ಸಂಪೂರ್ಣ ಸುಳ್ಳು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಈ ಬಾರಿಯ ದಸರಾ ಉದ್ಘಾಟನೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಆಹ್ವಾನಿಸಲಾಗಿದೆ...

Download Eedina App Android / iOS

X