ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಿ ಬಿಜೆಪಿ ಪ್ರಸ್ತಾಪ ಇಟ್ಟಿತ್ತು. ಅದನ್ನು ತಿರಸ್ಕರಿಸಿದ ಕಾರಣಕ್ಕೆ ತಮ್ಮ ವಿರುದ್ಧ ಜಾರಿ ನಿರ್ದೇಶನಾಯ (ಇಡಿ) ದಾಳಿ ನಡೆಸಿದೆ ಎಂದು ಜಾರ್ಖಂಡ್‌ನ ಕಾಂಗ್ರೆಸ್ ಶಾಸಕಿ ಅಂಬಾ ಪ್ರಸಾದ್ ಆರೋಪಿಸಿದ್ದಾರೆ.
“ಅವರು (ಇಡಿ) ಮುಂಜಾನೆ ಬಂದರು, ಇಡೀ ದಿನ ಚಿತ್ರಹಿಂಸೆ ಕೊಟ್ಟರು. ನನ್ನನ್ನು ಗಂಟೆಗಟ್ಟಲೆ ಒಂದೇ ಕಡೆ ನಿಲ್ಲುವಂತೆ ಮಾಡಿದರು. ನನಗೆ ಬಿಜೆಪಿಯಿಂದ ಹಜಾರಿಬಾಗ್ ಲೋಕಸಭಾ ಟಿಕೆಟ್ ನೀಡುವುದಾಗಿ ಹೇಳಲಾಗಿತ್ತು. ಅದನ್ನು ನಾನು ನಿರ್ಲಕ್ಷಿಸಿದ್ದೇನೆ. ನಂತರ, ನನ್ನ ಮೇಲೆ ಒತ್ತಡ ಹೇರಲಾಯಿತು” ಎಂದು ಹೇಳಿದ್ದಾರೆ.
“ಆರ್‌ಎಸ್‌ಎಸ್‌ನ ಅನೇಕರು ಬಿಜೆಪಿಯಿಂದ ಸ್ಪರ್ಧಿಸುವಂತೆ ನನ್ನ ಮೇಲೆ ಒತ್ತಡ ಹೇರಿದ್ದರು. ನಾನು ಅದನ್ನೂ ಕಡೆಗಣಿಸಿದೆ. ಅವರು ನನ್ನನ್ನು ಹಜಾರಿಬಾಗ್‌ನಲ್ಲಿ ಪ್ರಬಲ ಅಭ್ಯರ್ಥಿ ಎಂದು ನೋಡುತ್ತಿದ್ದಾರೆ. ಏಕೆಂದರೆ, ನಾವು ನಿರಂತರವಾಗಿ ಬಾರ್ಕಗಾಂವ್ ಸ್ಥಾನಗಳನ್ನು ಗೆಲ್ಲುತ್ತೇವೆ. ನಾವು ಕಾಂಗ್ರೆಸ್‌ನವರು, ಬಿಜೆಪಿಯವರಲ್ಲ. ಆದ್ದರಿಂದ ನಾವು ಸುಲಭವಾಗಿ ದಾಳಿಗೆ ಗುರಿಯಾಗಿದ್ದೇವೆ” ಎಂದು ಅವರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ದೇಶ ವಿಭಜಿಸಲು, ಸೌಹಾರ್ದತೆ ಕದಡಲು ಸಿಎಎ ಜಾರಿ: ನಟ ಕಮಲ್ ಹಾಸನ್
ಮಂಗಳವಾರ ಮುಂಜಾನೆ, ಭೂ ಮತ್ತು ವರ್ಗಾವಣೆ-ಪೋಸ್ಟಿಂಗ್ ಹಗರಣಗಳಿಗೆ ಸಂಬಂಧಿಸ ಪ್ರಕರಣಗಳಲ್ಲಿ ಕಾಂಗ್ರೆಸ್ ಶಾಸಕಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಇಡಿ ದಾಳಿ ನಡೆಸಿದೆ. ಶಾಸಕಿಯ ರಾಂಚಿಯ ಮನೆ ಮತ್ತು ಹಜಾರಿಬಾಗ್‌ನಲ್ಲಿರುವ ಅವರ ಮನೆಗಳ ಮೇಲೆ ದಾಳಿ ನಡೆದಿದೆ. ಏಜೆನ್ಸಿ ಮೂಲಗಳ ಪ್ರಕಾರ, ಬೆಳಿಗ್ಗೆ ಪ್ರಾರಂಭವಾದ ದಾಳಿ ತಡರಾತ್ರಿಯವರೆಗೂ ನಡೆದಿದೆ.