ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಾಥಮಿಕ ಮತ್ತು ಪ್ರೌಢ ವಿಭಾಗದ 5, 8 ಮತ್ತು 9ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಕುರಿತಂತೆ ಸರ್ವೋಚ್ಛ ಹಾಗೂ ಉಚ್ಛ ನ್ಯಾಯಾಲಗಳು ನೀಡಿರುವ ಆದೇಶ, ತೀರ್ಪು, ಆಜ್ಞೆಗಳನ್ನು ನಾವುಗಳು ಗೌರವಿಸುತ್ತೇವೆ. ಆದರೆ ಶಾಲಾ ವಿದ್ಯಾರ್ಥಿಗಳ ಮತ್ತು ಶಿಕ್ಷಕರೊಂದಿಗೆ ರುಪ್ಸಾ, ಸರ್ಕಾರ ಮತ್ತು ಇಲಾಖೆ ಚೆಲ್ಲಾಟವಾಡುತ್ತಿರುವುದು ಮಕ್ಕಳು ಮತ್ತು ಶಿಕ್ಷಕರ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂದು ಅಶೋಕ್ ಎಂ ಸಜ್ಜನ್ ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ಶಾಲೆಗಳ ಶಾಲೆಗಳ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ್ ಎಂ ಸಜ್ಜನ್ ಅವರು ಧಾರವಾಡ ನಗರದಲ್ಲಿ ಪತ್ರಿಕೆ ಹೇಳಿಕೆ ನೀಡಿದ್ದಾರೆ.
ಪ್ರಸ್ತುತ ವಿದ್ಯಮಾನಗಳಲ್ಲಿ ಈ ರೀತಿ ತಮ್ಮ ತಮ್ಮ ಸ್ವಪ್ರತಿಷ್ಠೆಗಾಗಿ ಮಕ್ಕಳ ಹಾಗೂ ಶಿಕ್ಷಕರ ಮನಸ್ಸಿಗೆ ಅಡ್ಡ ಪರಿಣಾಮ ಬೀರಬೇಡಿ. ಶೈಕ್ಷಣಿಕ ವ್ಯವಸ್ಥೆಯ ದಿಢೀರ್ ಕುಸಿತಕ್ಕೆ ಕಾರಣವಾಗಬೇಡಿ. ಉನ್ನತ ಹಂತದಲ್ಲಿ ತಜ್ಞರ ಸಭೆ ನಡೆಸಿ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ವಿವಾದಾತ್ಮಕ ಹೇಳಿಕೆಯಲ್ಲಿ ಪ್ರಚಾರ ಗಿಟ್ಟಿಸುವ ಹುಚ್ಚು ವ್ಯಕ್ತಿ ಅನಂತಕುಮಾರ್ ಹೆಗಡೆ: ಶಾಸಕ ಶ್ರೀನಿವಾಸ್ ವಾಗ್ದಾಳಿ
“ಸೂಕ್ತ ಪರಿಹಾರ ಕಂಡುಕೊಳ್ಳದೆ ಇದೇ ರೀತಿ ಮುಂದುವರೆದಲ್ಲಿ ಶಾಲಾ ಮಕ್ಕಳ ಪಾಲಕರು ಮತ್ತು ಎಸ್‌ಡಿಎಂಸಿಯವರೊಡಗೂಡಿ ಬೀದಿಗಿಳಿದು ಹೋರಾಡಬೇಕಾದೀತು” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.