ತುಮಕೂರು | ವಿವಾದಾತ್ಮಕ ಹೇಳಿಕೆಯಲ್ಲಿ ಪ್ರಚಾರ ಗಿಟ್ಟಿಸುವ ಹುಚ್ಚು ವ್ಯಕ್ತಿ ಅನಂತಕುಮಾರ್ ಹೆಗಡೆ: ಶಾಸಕ ಶ್ರೀನಿವಾಸ್ ವಾಗ್ದಾಳಿ

Date:

ನಾಲ್ಕೂವರೆ ವರ್ಷ ಬೆಳಕಿಗೆ ಬಾರದ ಸಂಸದ ಅನಂತಕುಮಾರ್ ಹೆಗಡೆ ಚುನಾವಣೆ ಸಮಯದಲ್ಲಿ ಸಂವಿಧಾನ ಬದಲಾವಣೆಯ ಹುಚ್ಚು ಹೇಳಿಕೆ ನೀಡುತ್ತಾ ವಿಕೃತ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ. ಹಿಂದೂ ರಾಷ್ಟ್ರ, ಸಂವಿಧಾನ ಬದಲಾವಣೆ ಇವೆರಡೂ ಅವರ ಹುಚ್ಚು ಚಾಳಿ ಬಿಂಬಿಸುತ್ತವೆ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ನೇರ ವಾಗ್ದಾಳಿ ನಡೆಸಿದರು.

- Advertisement -

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕೋಣೆಮಾದೇನಹಳ್ಳಿ ಗ್ರಾಮದಲ್ಲಿ ₹69 ಲಕ್ಷ ವೆಚ್ಚದ ಜಲ ಜೀವನ್ ಮಿಷನ್ ಯೋಜನೆಯ ಮನೆ ಮನೆಗೆ ನೀರು ಒದಗಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

“ಸರ್ವ ಧರ್ಮ ಸಮನ್ವಯ ರೀತಿ ಬದುಕುವ ಹಕ್ಕು, ಸಮಾನತೆ ಒದಗಿಸಿದ ಸಂವಿಧಾನ ಬದಲಾವಣೆ ಮಾಡುವ ವಿಚಾರ ರಕ್ತಪಾತಕ್ಕೆ ನಾಂದಿ ಹಾಡುತ್ತದೆ. ಈ ರೀತಿ ಅಸಾಧ್ಯವಾದ ಮಾತುಗಳು ಹೇಳಿಕೊಂಡು ಅಧಿಕಾರಕ್ಕೆ ಬರಲು ಅವಣಿಸುವ ಬಿಜೆಪಿ ವಿವಾದಾತ್ಮಕ ಹೇಳಿಕೆ ನೀಡಲೆಂದು ಕೆಲವರನ್ನು ಸೃಷ್ಟಿಸಿಕೊಂಡಿದೆ” ಎಂದು ಕಿಡಿಕಾರಿದರು.

“ಕೆಎಸ್‌ಆರ್‌ಟಿಸಿ ನೂತನ ಬಸ್ಸುಗಳು ಜಿಲ್ಲೆಯಲ್ಲಿ ಈಗಾಗಲೇ ಸಂಚಾರ ಮಾಡುತ್ತಿವೆ. ತುಮಕೂರು ಡಿಪೋ 20 ಬಸ್ಸು ಪಡೆದಿದೆ. ಪಾವಗಡಕ್ಕೆ 7 ಬಸ್ಸು, ಮಧುಗಿರಿಗೆ 5 ಹಾಗೂ ತಿಪಟೂರು ಡಿಪೋಗೂ ಸಹ ಹೊಸ ಬಸ್ಸು ನೀಡಲಾಗಿದೆ. ಗುಬ್ಬಿಯಲ್ಲಿ ಶೀಘ್ರ ಡಿಪೋ ಕೆಲಸ ನಡೆಸಿ ಈ ತಾಲೂಕಿನಲ್ಲಿಯೂ ಹೊಸ ಬಸ್ಸು ಸಂಚರಿಸಲಿದೆ. ಶಾಲಾ ಕಾಲೇಜು ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಗ್ರಾಮೀಣ ಭಾಗಕ್ಕೆ ಬಸ್ಸು ಒದಗಿಸಲು ಡಿಪೋ ತುರ್ತಾಗಿ ನಿರ್ಮಾಣ ಕಾರ್ಯ ನಡೆಸಲಾಗುತ್ತದೆ” ಎಂದರು.

“ಲೋಕಸಭಾ ಚುನಾವಣೆ ವಿಚಾರದಲ್ಲಿ ಭವಿಷ್ಯ ನಾನು ಹೇಳುವುದಿಲ್ಲ. ಮತದಾರರ ತೀರ್ಮಾನದ ಮೇಲೆ ನಿರ್ಧಾರ ಆಗಲಿದೆ. ನಾಲ್ಕು ಲೋಕಸಭಾ ಚುನಾವಣೆಯಲ್ಲಿ ನಾನು ನನ್ನ ಅಭ್ಯರ್ಥಿಗೆ ಲೀಡ್ ನೀಡಲಾಗಿಲ್ಲ. ಈ ಬಾರಿ ಪ್ರಯತ್ನ ನಡೆಸಿ ನಮ್ಮ ಅಭ್ಯರ್ಥಿ ಗೆಲುವಿಗೆ ಶ್ರಮಿಸುವೆ” ಎಂದರು.

“ಗ್ರಾಮೀಣ ಭಾಗದ ಕೆರೆಗಳಲ್ಲಿ ಮಣ್ಣು ತೆಗೆಯುವ ಕೆಲಸಕ್ಕೆ ನಾನೇ ರೈತರಿಗೆ ಸೂಚಿಸಿದ್ದೆ. ಎರಡು ಅಡಿಗಳ ಹೂಳು ತೆಗೆಯಲು ತಿಳಿಸಿದ್ದು, ಅವರ ತೋಟಗಳಿಗೆ ಮಣ್ಣು ಹಾಕಿಕೊಂಡರೆ ನಮಗೆ ಕೆರೆಯ ಹೂಳು ಎತ್ತುವ ಕೆಲಸವಾಗುತ್ತದೆ. ಇದನ್ನು ದಂಧೆ ಎಂದು ಹೇಳಲಾಗದು. ತುಂಗಭದ್ರಾ ಡ್ಯಾಂ ನಲ್ಲಿರುವ ಹೂಳು ತೆಗೆಯಲು ತಗಲುವ ವೆಚ್ಚಕ್ಕೆ ಹೊಸ ಡ್ಯಾಂ ನಿರ್ಮಾಣ ಮಾಡುವ ಆಲೋಚನೆ ಮಾಡಿದ ಉದಾಹರಣೆ ಎಲ್ಲರೂ ಯೋಚಿಸಬೇಕು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ನೆಟ್‌ಬಾಲ್ ಚಾಂಪಿಯನ್‌ಶಿಪ್ ಪಂದ್ಯಾವಳಿ; ಗೃಹ ಸಚಿವ ಪರಮೇಶ್ವರ್ ಚಾಲನೆ

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಕಲಾವತಿ, ಸದಸ್ಯರುಗಳಾದ ರಮೇಶ್, ಮಹಮದ್ ಅಲಿ, ಪಾಂಡುರಂಗಪ್ಪ, ಮಹಾಲಕ್ಷ್ಮಮ್ಮ, ಮುಖಂಡರುಗಳಾದ ಪಣಗಾರ್ ವೆಂಕಟೇಶ್, ಆಲಂ, ಅಲಿಸಾಬ್, ರಾಮಣ್ಣ, ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಎಇಇ ನಟರಾಜ್, ಎಇ ಲಿಂಗರಾಜ್ ಶೆಟ್ಟಿ, ಪಿಡಿೊ ಮಂಜುಳಾದೇವಿ ಸೇರಿದಂತೆ ಇತರರು ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

​ಶಿಡ್ಲಘಟ್ಟ | ಒಂಬತ್ತನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ:ಪ್ರಾಂಶುಪಾಲ ಈಶ್ವರ್ ರೆಡ್ಡಿಗೆ ಕಠಿಣ ಶಿಕ್ಷೆಗೆ ಒತ್ತಾಯ

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಗುರ್ಲಗುಮ್ಮನಹಳ್ಳಿ(11ನೇ ಮೈಲಿ) ಬಳಿ ವಸತಿ ಶಾಲೆಯ...

ಬೆಂಗಳೂರು | 700 ಕೆ.ಜಿ ಪಿಒಪಿ ಗಣೇಶ ಮೂರ್ತಿ ತ್ಯಾಜ್ಯ ತೆರವುಗೊಳಿಸಿದ ‘ವಿ ಆರ್ ಆರಂಭ್’

ಬೆಂಗಳೂರಿನ ಸರ್ಜಾಪುರ ಸಮೀಪದ ಹಲನಾಯಕನಹಳ್ಳಿ ಕೆರೆಯಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟರ್ ಆಫ್ ಪ್ಯಾರಿಸ್...

ಭಟ್ಕಳ | ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಮಿನಿ ಬಸ್ ಕಳವು

ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಮಿನಿ...