ನಿಯಮ ಉಲ್ಲಂಘಿಸಿದ ಕಾರಣ ಜನವರಿ 31 ರಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಿರ್ಬಂಧ ವಿಧಿಸಿದ್ದು, ಆರ್‌ಬಿಐ ನಿರ್ದೇಶನದಂತೆ ಮಾರ್ಚ್ 15 ರಿಂದ ಡೆಪಾಸಿಟ್, ಕ್ರೆಡಿಟ್ ವಹಿವಾಟು ಸೇವೆಗಳನ್ನು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸ್ಥಗಿತಗೊಳಿಸಲಿದೆ.
ಇನ್ನು ಸ್ಟಾಕ್ ಟ್ರೇಡಿಂಗ್‌ಗಾಗಿ ಪ್ರತ್ಯೇಕವಾಗಿ ಬ್ಯಾಂಕ್ ಅನ್ನು ಬಳಸುವ ಹೂಡಿಕೆದಾರರಿಗೆ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಸಾವಿರಾರು ಖಾತೆಗಳನ್ನು ಸರಿಯಾದ ದಾಖಲೆಗಳಲ್ಲಿದೆ ತೆರೆಯಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನು ಮನಿ ಲಾಂಡರಿಂಗ್‌ನಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಬಳಸಿಕೊಳ್ಳುವ ಸಾಧ್ಯತೆಯಿದೆ. ಈ ಮಾಹಿತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಪ್ರಧಾನ ಮಂತ್ರಿ ಕಚೇರಿ ಸೇರಿದಂತೆ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ವರದಿ ಹೇಳುತ್ತದೆ.
“ಮಾರ್ಚ್ 15 ರೊಳಗೆ ತಾತ್ಕಾಲಿಕವಾಗಿ ಸೇವೆ ಸ್ಥಗಿತಗೊಳಿಸಲಿರುವ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಬಗ್ಗೆ ಇಡಿ ತನಿಖೆ ನಡೆಸಲಿದೆ” ಎಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ. ಇನ್ನು ಒಂದೇ ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡಲಾದ ಅನೇಕ ಖಾತೆಗಳು ಕೂಡಾ ಪೇಟಿಎಂ ಬ್ಯಾಂಕ್‌ನಲ್ಲಿರುವುದು ತಿಳಿದುಬಂದಿದೆ.
ಪೇಟಿಎಂ ಬ್ಯಾಂಕ್ ಸ್ಥಗಿತ: ಏನು ಬದಲಾವಣೆ?
– ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸ್ಥಗಿತವಾದ ಬಳಿಕ ಗ್ರಾಹಕರು ತಮ್ಮ ಪೇಟಿಎಂ ಖಾತೆಗೆ ಹಣ ಡೆಪಾಸಿಟ್ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಮಾರ್ಚ್ 15ರ ಬಳಿಕವೂ ತಮ್ಮ ಖಾತೆಯಿಂದ ಹಣವನ್ನು ವರ್ಗಾಯಿಸಬಹುದು ಅಥವಾ ವಿತ್‌ಡ್ರಾ ಮಾಡಬಹುದು.
– ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನಿಂದ ನೀಡಲಾದ ಫಾಸ್ಟ್‌ಟ್ಯಾಗ್‌ಗೆ ರೀಚಾರ್ಚ್ ಮಾಡಲು ಸಾಧ್ಯವಾಗುವುದಿಲ್ಲ.
– ಪೇಟಿಎಂ ಬ್ಯಾಂಕ್ ನೀಡಿದ ಎನ್‌ಸಿಎಂಸಿ ಕಾರ್ಡ್‌ಗಳಲ್ಲಿ ಹಣವನ್ನು ರೀಚಾರ್ಜ್ ಮಾಡಲು ಅಥವಾ ಟಾಪ್ ಅಪ್ ಮಾಡಲು ಇನ್ನು ಮುಂದೆ ಸಾಧ್ಯವಾಗುವುದಿಲ್ಲ.
– ಪೇಟಿಎಂ ಪಾವತಿಗಳ ಬ್ಯಾಂಕ್ ಖಾತೆಗಳಲ್ಲಿ ಸಂಬಳ ಜಮೆ, ಸಬ್ಸಿಡಿಗಳು ಲಭ್ಯವಿರುವುದಿಲ್ಲ. ಆದರೆ ನೀವು ಪಾಲುದಾರ ಬ್ಯಾಂಕ್‌ಗಳಿಂದ ಮರುಪಾವತಿಗಳು, ಕ್ಯಾಶ್‌ಬ್ಯಾಕ್‌ಗಳನ್ನು ಪಡೆದುಕೊಳ್ಳಬಹುದು.
