ಬೀದರ್‌ | ಸ್ವಪಕ್ಷೀಯರ ಚಕ್ರವ್ಯೂಹ ಭೇದಿಸಿ ಟಿಕೆಟ್‌ ಗಿಟ್ಟಿಸಿಕೊಂಡ ಭಗವಂತ ಖೂಬಾ

Date:

2024ರ ಲೋಕಸಭಾ ಚುನಾವಣೆಗೆ ಬಿಜೆಪಿಯು ಇಂದು (ಮಾ.13) ಎರಡನೇ ಪಟ್ಟಿ ಪ್ರಕಟಿಸಿದ್ದು, ಬೊಮ್ಮಾಯಿ, ಕೋಟಾ, ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಿದೆ. ಪ್ರತಾಪ್ ಸಿಂಹ, ನಳಿನ್‌ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನೀಡಿಲ್ಲ. ಕರ್ನಾಟಕದ 20 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದೆ.

20ರಲ್ಲಿ ಕಲ್ಯಾಣ ಕರ್ನಾಟಕ ಲೋಕಸಭಾ ಕ್ಷೇತ್ರಗಳಾದ ಕಲಬುರಗಿ (ಡಾ. ಉಮೇಶ್ ಜಾಧವ್‌), ಬೀದರ್ (ಭಗವಂತ ಖೂಬಾ) ಕೊಪ್ಪಳ (ಬಸವರಾಜ ಕ್ಯಾವತ್ತೂರ) ಹಾಗೂ ಬಳ್ಳಾರಿ (ಶ್ರೀರಾಮುಲು) ಅವರಿಗೆ ಟಿಕೆಟ್‌ ಅಂತಿಮಗೊಳಿಸಲಾಗಿದೆ.

ಸ್ವಪಕ್ಷದಲ್ಲೇ ಟಿಕೆಟ್‌ ಕೈತಪ್ಪಿಸುವ ತಂತ್ರ :

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

2014 ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಘಟನಾಘಟಿ ನಾಯಕರಿಗೆ ಸೋಲಿಸಿ ಸತತವಾಗಿ ಎರಡು ಬಾರಿ ಜಯ ಸಾಧಿಸಿದ ಭಗವಂತ ಖೂಬಾ ಅದೃಷ್ಟದಿಂದ ಕೇಂದ್ರದಲ್ಲಿ ಮಂತ್ರಿ ಪಟ್ಟವೂ ದಕ್ಕಿತು. ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದ ಭಗವಂತ ಖುಬಾ ಅವರಿಗೆ ಸ್ವಪಕ್ಷದಲ್ಲೇ ವಿರೋಧಿ ಅಲೆ ಬೀಸತೊಡಗಿತು.

ಬಿಜೆಪಿಯ ಔರಾದ ಶಾಸಕ ಪ್ರಭು ಚವ್ಹಾಣ ಹಾಗೂ ಬಸವಕಲ್ಯಾಣ ಶಾಸಕ ಶರಣು ಸಲಗರ ಸೇರಿದಂತೆ ಸ್ವಪಕ್ಷದ ಕೆಲ ಮುಖಂಡರು ಭಗವಂತ ಖೂಬಾ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು. ಈ ಬಾರಿ ಖೂಬಾ ಅವರಿಗೆ ಟಿಕೆಟ್‌ ತಪ್ಪಿಸಬೇಕೆಂದು ತೆರೆಮೆರೆಯಲಿ ಇನ್ನಿಲ್ಲದ ಕಸರತ್ತು ನಡೆಸಿದರು. ಶಾಸಕ ಶರಣು ಸಲಗರ ಅವರು ಜಿಲ್ಲೆಯ ಮರಾಠ ಸಮುದಾಯಕ್ಕೆ ಬೀದರ್‌ ಎಂಪಿ ಟಿಕೆಟ್‌ ನೀಡಬೇಕೆಂದು ಒತ್ತಾಯಿಸಿದರು. ಇನ್ನು ಮಾಜಿ ಸಚಿವ, ಶಾಸಕ ಪ್ರಭು ಚವ್ಹಾಣ ಅವರು ಖೂಬಾ ವಿರುದ್ಧ ಆರೋಪ ಮಾಡುತ್ತಲೇ ಟಿಕೆಟ್‌ ಕಟ್‌ ಮಾಡಿಸಲು ಹರಸಾಹಸಪಟ್ಟಿದ್ದರು.

ಕಳೆದ ಜನವರಿ ತಿಂಗಳಲ್ಲಿ ಬೀದರ್‌ನಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದ ವೇದಿಕೆ ಮೇಲೆ ಸಾವಿರಾರು ಜನರ ಮುಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ವಿಜಯೇಂದ್ರ ಕಾಲಿಗೆ ಬಿದ್ದ ಮಾಜಿ ಸಚಿವ, ಹಾಲಿ ಬಿಜೆಪಿ ಶಾಸಕ ಪ್ರಭು ಚವ್ಹಾಣ್ ಅವರು ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಅನ್ನು ʼಭಗವಂತ ಖೂಬಾಗೆ ನೀಡಬಾರದು, ಒಳ್ಳೆಯ ವ್ಯಕ್ತಿಗೆ ನೀಡಬೇಕುʼ ಎಂದು ಮನವಿ ಮಾಡುವ ಮೂಲಕ ಅದೇ ವೇದಿಕೆಯಲ್ಲಿದ್ದ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಮುಜುಗರಕ್ಕೆ ಸಿಲುಕಿಸಿದರು.

ಎರಡು ಬಾರಿ ಗೆದ್ದು ಕೇಂದ್ರದಲ್ಲಿ ರಾಜ್ಯ ಖಾತೆ ಸಚಿವರಾಗಿದ್ದ ಮೇಲೂ ಬೀದರ್‌ ಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇತ್ತು. ಸಚಿವರಾಗಿರುವ ಭಗವಂತ ಖೂಬಾ ಅವರು ಪಕ್ಷದ ಕಾರ್ಯಕರ್ತರನ್ನು ಸರಿಯಾಗಿ ನಡೆಸಿಕೊಂಡಿಲ್ಲ, ಖೂಬಾ ಅವರು ‌ಸ್ವಪಕ್ಷದವರನ್ನೇ ಸೋಲಿಸಲು ತಂತ್ರ ರೂಪಿಸಿದ್ದರು ಎನ್ನುವ ಆರೋಪಗಳು ಅವರ ಮೇಲಿರುವ ಕಾರಣಕ್ಕೆ ಅವರಿಗೆ ಸುತಾರಾಂ ಟಿಕೆಟ್‌ ನೀಡಬೇಡಿ ಎಂಬುದು ಸ್ವಪಕ್ಷದ ಕೆಲವರ ಅಭಿಪ್ರಾಯ ಇತ್ತು. ಭಗವಂತ ಖೂಬಾ ಅವರಿಗೆ ಟಿಕೆಟ್‌ ತಪ್ಪಿಸಲು ಕೊನೆಯವರೆಗೂ ರಣತಂತ್ರ ರೂಪಿಸಿದ ನಾಯಕರ ಪ್ರಯತ್ನ ಅಂತಿಮವಾಗಿ ವಿಫಲವಾಗಿದೆ.

ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿ ಖೂಬಾ :

ಈ ಎಲ್ಲ ಆರೋಪ, ಸ್ವಪಕ್ಷದವರ ಮುಸುಕಿನ ಗುದ್ದಾಟದ ಕಾರಣದಿಂದ ಈ ಬಾರಿ ಸಂಸದ ಭಗವಂತ ಖೂಬಾ ಅವರಿಗೆ ಟಿಕೆಟ್‌ ಕೈತಪ್ಪಬಹುದು ಎಂಬ ಸುದ್ದಿ ಕ್ಷೇತ್ರದಲ್ಲಿ ವ್ಯಾಪಕವಾಗಿ ಹರಿದಾಡಿತು. ಈ ಬಾರಿ ಬೀದರ್‌ ಕ್ಷೇತ್ರಕ್ಕೆ ʼಅಚ್ಚರಿಯ ಅಭ್ಯರ್ಥಿʼ ಬರಲಿದ್ದಾರೆ ಎಂಬ ಗಾಳಿ ಸುದ್ದಿ ವರದಿಯಾಗಿತ್ತು. ಆದರೆ, ಮೊದಲಿನಿಂದಲೂ ಖೂಬಾ ಅವರು ʼಯಾರು ಏನಾದರೂ ಹೇಳಲಿ, ನನಗೆ ಟಿಕೆಟ್‌ ಫಿಕ್ಷ್‌ ಇದೆʼ ಎಂದು ಖಚಿತವಾಗಿ ಹೇಳುತ್ತಲೇ ಕ್ಷೇತ್ರದಲ್ಲಿ ಸಕ್ರೀಯವಾಗಿ ಓಡಾಡಿ ಕಾರ್ಯಕ್ರಮ ಆಯೋಜಿಸುವುದು ಮುಂದುವರೆಸಿದರು. ಕೊನೆಗೂ ಪಕ್ಷದೊಳಗೆ ಹೊಗೆಯಾಡುತ್ತಿದ್ದ ಅಸಮಾಧಾನಕ್ಕೆ ಬಿಜೆಪಿ ವರಿಷ್ಠರು ಭಗವಂತ ಖೂಬಾ ಅವರಿಗೆ ಟಿಕೆಟ್‌ ಅಂತಿಮಗೊಳಿಸಿ ತೆರೆ ಎಳೆದಿದ್ದಾರೆ.

ಬೀದರ್‌ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೇಸ್‌ ಪಕ್ಷಗಳಿಂದ ಯಾರಿಗೆ ಟಿಕೆಟ್‌ ಸಿಗುತ್ತದೆ ಎಂಬ ಕುತೂಹಲ ಸಹಜವಾಗಿ ತೀವ್ರವಾಗಿತ್ತು. ಇದೀಗ ಬಿಜೆಪಿ ಟಿಕೆಟ್‌ ಅಂತಿಗೊಂಡಿದೆ.  ಸಿಎಂ ಸಿದ್ದರಾಮಯ್ಯನವರು ಮಾ.7ರಂದು ಬಸವಕಲ್ಯಾಣದ ಅಭಿನಂದನಾ ಸಮಾರಂಭಕ್ಕೆ ಆಗಮಿಸಿದ ವೇಳೆ 2-3 ದಿನಗಳಲ್ಲಿ ಕಾಂಗ್ರೇಸ್‌ ಟಿಕೆಟ್‌ ಹಂಚಿಕೆ ಮಾಡಲಾಗುವುದು ಎಂದು ಮಾಧ್ಯಮಗಳಿಗೆ ತಿಳಿಸಿದರು. ಆದರೂ ಇನ್ನೂ ಟಿಕೆಟ್‌ ಫೈನಲ್‌ ಆಗದ ಕಾರಣ ಬೀದರ್‌ಗೆ ಕಾಂಗ್ರೇಸ್ಸಿನಿಂದ ಅಭ್ಯರ್ಥಿ ಯಾರಾಗಬಹುದು ಎಂಬ ಕುತೂಹಲ ದಿನೇ ದಿನೇ ಹೆಚ್ಚುತ್ತಿದೆ. ಇದು ಹೈಕಮಾಂಡ್‌ಗೂ ಕಗ್ಗಂಟಾಗಿದೆ ಎನ್ನಲಾಗುತ್ತಿದೆ.

ಈ ಸುದ್ದಿ ಓದಿದ್ದೀರಾ? ಈದಿನ ಸಮೀಕ್ಷೆ– ಭಾಗ 1 | ಬೆಲೆಏರಿಕೆ, ನಿರುದ್ಯೋಗ, ಭ್ರಷ್ಟಾಚಾರ ಹೆಚ್ಚಾಗಿದೆ; ಗ್ಯಾರಂಟಿಗಳಿಗೆ ನಮ್ಮ ಓಟು – ಆದರೆ ಮೋದಿ ಸರ್ಕಾರ ಚೆಂದ ಎಂದ ಜನ

‌ಬಿಜೆಪಿ-ಕಾಂಗ್ರೇಸ್‌ ಮಧ್ಯೆ ನೇರ ಹಣಾಹಣಿ ಏರ್ಪಡುವ ಬಹುತೇಕ ನಿಚ್ಚಳವಾದ ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಕಾಂಗೇಸ್ ಟಿಕೆಟ್‌ ಹಂಚಿಕೆಯಾದ ಬಳಿಕವೇ ಚುನಾವಣೆಯ ಇನ್ನಷ್ಟು ಕಾವು ರಂಗೇರಲಿದೆ. ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಿಂದ ಚುನಾವಣಾ ಅಖಾಡಕ್ಕಿಳಿದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ನೇರ ಎದುರಾಳಿ ಯಾರಾಗಬಹುದು ಎಂಬ ಕುತೂಹಲಕ್ಕೆ ಇನ್ನೂ ಒಂದೆರಡು ದಿನ ಕಾಯಲೇಬೇಕು.

ಬಾಲಾಜಿ ಕುಂಬಾರ್
+ posts

ಕವಿ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಕವಿ, ಪತ್ರಕರ್ತ

1 COMMENT

  1. ಬೀದರ್ನಲ್ಲಿ (BJP/JDS) ಮೈತ್ರಿ ಅಭ್ಯರ್ಥಿಯಾಗಿ ಬಂಡೆಪ್ಪ ಕಾಶಂಪುರವರನ್ನು ಕಣಕ್ಕಿಳಿಸಿದರೆ, ಸರಳ ಬಹುಮತದಿಂದ ಗೆದ್ದು ಬರಬಹುದಿತ್ತು. ಆದರೆ ಖೂಬಾ ಕೂಡ ಸಾಮಾನ್ಯನಲ್ಲ. ಬಿಜೆಪಿಯ ಭದ್ರಕೋಟೆ ಕಾಂಗ್ರೆಸ್ ಭೇದಿಸಬೇಕಾದರೆ, ಪ್ರಬಲ್ಯವಾದ ಅಭ್ಯರ್ಥಿಯನ್ನು ಕಣಕ್ಕಿಳಿಸಲೇಬೇಕು. ಖೂಬಾನ ಮುಂದೆ ಪಾಟೀಲನ ಆಟ ನಡೆಯುವುದು ಅನುಮಾನ.

    ಖಂಡ್ರೆಯೆ ಸರಿಯಾದ ಅಭ್ಯರ್ಥಿ.
    ಯಾವುದಕ್ಕೂ ಕಾದು ನೋಡೋಣ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಜ್ವಲ್ ಪ್ರಕರಣ | ಉಪ್ಪು ತಿಂದವನು ನೀರು ಕುಡಿಯಲೇಬೇಕು: ಎಚ್ ಡಿ ಕುಮಾರಸ್ವಾಮಿ

ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್ ಪ್ರಕರಣ...

ಖಾಸಗಿ ಸಂಪತ್ತಿನ ಬಗ್ಗೆ ರಾಹುಲ್ ಮಾತನಾಡಿಲ್ಲ; ಬಿಜೆಪಿ ಗೊಂದಲ ಸೃಷ್ಟಿಸುತ್ತಿದೆ: ಸಿಎಂ ರೇವಂತ್ ರೆಡ್ಡಿ

ತೆಲಂಗಾಣದಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿ, ಅಧಿಕಾರ ಹಿಡಿದ ಕೆಲ ತಿಂಗಳುಗಳಲ್ಲೇ...

ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣ | ಕೆಲವೇ ಹೊತ್ತಲ್ಲಿ ಎಸ್‌ಐಟಿ ರಚನೆ: ಡಾ. ಜಿ ಪರಮೇಶ್ವರ್‌

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ...

ಕರ್ನಾಟಕಕ್ಕೆ ಇಂದು ಮೋದಿ; ಹಾಸನ ಪೆನ್‌ಡ್ರೈವ್ ಪ್ರಕರಣದ ಬಗ್ಗೆ ಮಾತಾಡ್ತಾರಾ ಪ್ರಧಾನಿ?

ಮಹಿಳೆಯರ ರಕ್ಷಣೆಗಾಗಿ 'ಬೇಟಿ ಬಚೋವೋ - ಬೇಟಿ ಪಡಾವೋ' ಎಂಬ ಘೋಷಣೆಯನ್ನು...