ನಿಮ್ಮದು ಬೇರೆ ಪಕ್ಷ – ಶರದ್ ಪವಾರ್ ಚಿತ್ರ, ಚಿಹ್ನೆ ಬಳಸುವುದೇಕೆ?; ಅಜಿತ್‌ ಬಣಕ್ಕೆ ಸುಪ್ರೀಂ ಪ್ರಶ್ನೆ

Date:

Advertisements

“ನಿಮ್ಮ ಪಕ್ಷವೇ ಈಗ ಬೇರೆಯಾಗಿದೆ. ಹೀಗಿರುವಾಗ ನೀವು ಶರದ್ ಪವಾರ್‌ರ ಚಿತ್ರ ಮತ್ತು ಚಿಹ್ನೆಗಳನ್ನು ಬಳಸುವುದೇಕೆ” ಎಂದು ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ ಬಣಕ್ಕೆ ಗುರುವಾರ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಹಾಗೆಯೇ ಎಲ್ಲ ಪೋಸ್ಟರ್‌ಗಳಿಂದ ಶರದ್ ಪವಾರ್ ಚಿತ್ರವನ್ನು ತೆಗೆಯುವಂತೆ ಸೂಚಿಸಿದೆ. ಮಾತ್ರವಲ್ಲದೆ, ಬೇರೆ ಚಿಹ್ನೆಯನ್ನು ಆಯ್ಕೆ ಮಾಡಿಕೊಳ್ಳಲು ತಿಳಿಸಿದೆ.

ಅಜಿತ್‌ ಪವಾರ್ ನೇತೃತ್ವದ ಎನ್‌ಸಿಪಿಯು ಹಿರಿಯ ಎನ್‌ಸಿಪಿ ನಾಯಕರುಗಳ ಚಿತ್ರ ಮತ್ತು ಚಿಹ್ನೆಯನ್ನು ಪೋಸ್ಟರ್‌ನಲ್ಲಿ ಬಳಸುವುದರ ವಿರುದ್ಧವಾಗಿ ಎನ್‌ಸಿಪಿ ನಾಯಕ ಶರದ್ ಪವಾರ್ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಶರದ್ ಈ ಅರ್ಜಿ ವಿಚಾರಣೆ ನಡೆಸಿದ ಪೀಠವು ಅಜಿತ್‌ ಪವಾರ್‌ರಿಗೆ ಪೋಸ್ಟರ್‌ಗಳ ತೆರವಿಗೆ ಸೂಚಿಸಿದೆ.

“ನೀವು (ಅಜಿತ್ ಪವಾರ್ ಬಣ) ಈಗ ಬೇರೆಯೇ ರಾಜಕೀಯ ಪಕ್ಷ. ಹಾಗಿರುವಾಗ ನೀವು ಶರದ್ ಪವಾರ್‌ ಚಿತ್ರಗಳನ್ನು, ಅವರ ಪಕ್ಷದ ಹಿರಿಯ ನಾಯಕರುಗಳ ಚಿತ್ರವನ್ನು ಬಳಸುವುದು ಏಕೆ?. ನೀವು ನಿಮ್ಮದೆ ಆದ ಗುರುತನ್ನು ರಚಿಸಿ, ನೀವು ಇತರೆ ಪಕ್ಷದ ಗುರುತನ್ನು ಬಳಸಿಕೊಳ್ಳುವಂತಿಲ್ಲ” ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ತಿಳಿಸಿದರು.

Advertisements

“ನಿಮ್ಮ ಪಕ್ಷದ ಕಾರ್ಯಕರ್ತರನ್ನು ನಿಯಂತ್ರಿಸುವುದು ನಿಮ್ಮ ಕೆಲಸ. ಚುನಾವಣೆ ಬರುವಾಗ ನಿಮಗೆ ಶರದ್ ಪವಾರ್ ಹೆಸರು ಬೇಕು, ಚುನಾವಣೆ ಇಲ್ಲದಾಗ ನಿಮಗೆ ಅವರು ಬೇಡ. ಈಗ ನೀವು ಬೇರೆಯೇ ಪಕ್ಷ ಕಟ್ಟಿ ಅದಕ್ಕೊಂದು ಅಸ್ಮಿತೆ ಇರುವಾಗ ಅದನ್ನು ಪಾಲಿಸಿ” ಎಂದು ತರಾಟೆಗೆ ತೆಗೆದುಕೊಂಡರು. ಮಾರ್ಚ್ 16ರ ಒಳಗಾಗಿ ಉತ್ತರಿಸಲು ಅಜಿತ್ ಪವಾರ್ ಬಣಕ್ಕೆ ಕೋರ್ಟ್ ಹೇಳಿದೆ.

ಶರದ್ ಪವಾರ್ ಬಣದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಸಿಂಗ್ವಿ ವಾದಿಸಿದ್ದು, “ನೀವು ಚುನಾವಣಾ ಕಣಕ್ಕೆ ಇಳಿಯುವುದಾದರೆ ನಮ್ಮ ಚಿಹ್ನೆ, ಚಿತ್ರಗಳನ್ನು ಬಳಸಬೇಡಿ. ಗಡಿಯಾರ ಚಿಹ್ನೆಯು ಶರದ್ ಪವಾರ್‌ ಅವರಿಗೆ ಸೇರಿದ್ದು” ಎಂದಿದ್ದಾರೆ.

“ಈ ಚಿಹ್ನೆಯ ಬದಲಾಗಿ ಬೇರೆ ಚಿಹ್ನೆ ಆಯ್ಕೆ ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸಿ” ಎಂದು ತಿಳಿಸಿದ ಕೋರ್ಟ್, “ಚುನಾವಣಾ ಆಯೋಗದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ನಾವು ಚುನಾವಣೆ ಸಂದರ್ಭದಲ್ಲಿ ಈ ಅರ್ಜಿ ವಿಚಾರಣೆ ನಡೆಸದಿದ್ದರೆ, ಮತ್ತೆ ನೀವೇನು ಮಾಡುತ್ತೀರಿ” ಎಂದು ಕೋರ್ಟ್ ಪ್ರಶ್ನಿಸಿದೆ.

ಫೆಬ್ರವರಿ 6ರಂದು ಚುನಾವಣಾ ಆಯೋಗವು ಅಜಿತ್ ಪವಾರ್ ಬಣವನ್ನು ನಿಜವಾದ ಎನ್‌ಸಿಪಿ ಎಂದು ಘೋಷಿಸಿದ್ದು, ಪಕ್ಷದ ಹೆಸರು ಮತ್ತು ಚಿಹ್ನೆ ಬಳಸಲು ಅವಕಾಶ ನೀಡಿದೆ. ಇದಾದ ಒಂದು ದಿನದ ಬಳಿಕ ಶರದ್ ಪವಾರ್ ಬಣವು “ರಾಷ್ಟ್ರೀಯ ಕಾಂಗ್ರೆಸ್ ಪಕ್ಷ – ಶರದ್‌ಚಂದ್ರ ಪವಾರ್” ಎಂದು ತಮ್ಮ ಪಕ್ಷಕ್ಕೆ ಹೆಸರಿರಿಸಿದೆ.

ಹಾಗೆಯೇ ಫೆಬ್ರವರಿ 13ರಂದು ಶರದ್ ಪವಾರ್ ಚುನಾವಣಾ ಆಯೋಗವು ಅಜಿತ್ ಪವಾರ್ ಬಣವನ್ನು ಎನ್‌ಸಿಪಿ ಎಂದು ಘೋಷಿಸಿದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಹಾಗೆಯೇ ಫೆಬ್ರವರಿ 24ರಂದು ಶರದ್ ಪವಾರ್ “ವ್ಯಕ್ತಿ ಕಹಳೆ ಊದುತ್ತಿರುವ ” ಚಿತ್ರವನ್ನು ತಮ್ಮ ಪಕ್ಷದ ಹೊಸ ಗುರುತು ಎಂದು ಘೋಷಿಸಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X