ಉಡುಪಿ | ತನ್ನದೇ ಬಸ್ಸಿನಡಿ ಸಿಲುಕಿ ಮಾಲೀಕ ಸಾವು

Date:

ತನ್ನದೇ ಮಾಲೀಕತ್ವದ ಬಸ್‌ ಕೆಳಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಡೆದಿದೆ.

- Advertisement -

ಮಣಿಪಾಲದ ಮಾಂಡವಿ ಖಾಸಗಿ ಬಸ್ ಮಾಲೀಕ ದಯಾನಂದ ಶೆಟ್ಟಿ(65) ಮೃತ ದುರ್ದೈವಿ ಎಂದು ತಿಳಿದುಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಟ್ರಂಪ್‌ ತಿರಸ್ಕರಿಸಿದ ಯುವಜನರು; 2029ರಲ್ಲಿ ಭಾರತದ ಯುವ ಮತದಾರರ...

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ 18–29 ವರ್ಷದ ಯುವ ಮತದಾರರು ರಿಪಬ್ಲಿಕನ್ ಪಕ್ಷದಿಂದ ದೊಡ್ಡ ಪ್ರಮಾಣದಲ್ಲಿ ದೂರ ಸರಿದಿದ್ದಾರೆ. ಉದ್ಯೋಗದ ಅನಿಶ್ಚಿತತೆ, ದುಬಾರಿ ಜೀವನ, ಭವಿಷ್ಯದ ಆತಂಕ ಹಾಗೂ ಸರ್ಕಾರದ ನೀತಿಗಳ ಕುರಿತ ಅಸಮಾಧಾನ...

ಸಾಮಾಜಿಕ ನ್ಯಾಯ | ಕಾಂಗ್ರೆಸ್ ಸರ್ಕಾರದ ಭರವಸೆಗಳು ಮತ್ತು...

ಅಲ್ಪಸಂಖ್ಯಾತರ ಕಲ್ಯಾಣ ಎಂದರೆ ಕೇವಲ ಮುಸ್ಲಿಂ ಸಮುದಾಯದ ಅಭಿವೃದ್ಧಿಯಲ್ಲ. ಕ್ರೈಸ್ತರು, ಜೈನರು, ಸಿಖ್ಖರು, ಬೌದ್ಧರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರ ಶಿಕ್ಷಣ, ಉದ್ಯೋಗ, ವಸತಿ ಮತ್ತು ಆರ್ಥಿಕ ಅಭಿವೃದ್ಧಿಯ ಅಗತ್ಯಗಳನ್ನೂ ಸಮಾನವಾಗಿ ಪರಿಗಣಿಸಬೇಕು....

ನುಡಿ ನಮನ | ಪಿರಿಯಾಪಟ್ಟಣದ ಮಣ್ಣಿನಿಂದ ಕನ್ನಡ ಜ್ಞಾನಲೋಕದ...

ಕೆಲವರು ಹುಟ್ಟಿದ ಊರಿನ ಹೆಸರನ್ನು ತಮ್ಮೊಂದಿಗೆ ಹೊತ್ತುಕೊಂಡು ಬದುಕುತ್ತಾರೆ. ಇನ್ನು ಕೆಲವರು ತಾವು ಹುಟ್ಟಿದ ನೆಲದ ಹೆಸರನ್ನೇ ತಮ್ಮ ಸಾಧನೆಯ ಮೂಲಕ ನಾಡಿನಾದ್ಯಂತ ಪರಿಚಯಿಸುತ್ತಾರೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರದಲ್ಲಿ ಹುಟ್ಟಿ,...

ಉಡುಪಿ ಜಿಲ್ಲೆಯಲ್ಲಿ ಮಾಂಡವಿ ಸಂಸ್ಥೆ ಸುಮಾರು ವರ್ಷಗಳಿಂದ ಬಸ್‌ ಸೇವೆ ನೀಡುತ್ತಿದ್ದು, ಇತ್ತೀಚಿಗೆ ಒಂದು ಬಸ್‌ ಕೆಟ್ಟು ನಿಂತಿತ್ತು. ಈ ಹಿನ್ನೆಲೆಯಲ್ಲಿ ದಯಾನಂದ ಶೆಟ್ಟಿ ಬಸ್‌ವೊಂದನ್ನು ಮಣಿಪಾಲದ ಬಡಗಬೆಟ್ಟುವಿನ ಗ್ಯಾರೇಜ್‌ವೊಂದಕ್ಕೆ ರಿಪೇರಿಗೆ ಬಿಟ್ಟಿದ್ದರು. ಬಸ್‌ ರಿಪೇರಿಗೆ ನೀಡಿ ದಿನ ಕಳೆದ ಹಿನ್ನೆಲೆಯಲ್ಲಿ ದಯಾನಂದ ಶೆಟ್ಟಿ ಮಾರ್ಚ್ 13ರಂದು ಬಸ್‌ ನೋಡಲೆಂದು ಗ್ಯಾರೇಜ್‌ಗೆ ತೆರಳಿದ್ದರು. ಈ ವೇಳೆ ಚಾಲಕ ಏಕಾಏಕಿ ಬಸ್‌ ಚಲಾಯಿಸಿದ್ದರಿಂದ ಬಸ್‌ ಎದುರು ನಿಂತಿದ್ದ ದಯಾನಂದ ಶೆಟ್ಟಿ ಬಸ್ ಚಕ್ರದಡಿಗೆ ಸಿಲುಕಿದ್ದಾರೆಂಬ ಆರೋಪ ವ್ಯಕ್ತವಾಗಿದೆ.

ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಬಿರು ಬೇಸಿಗೆಗೆ ಜನ ಕಂಗಾಲು; ಕೊಡಗಿನಲ್ಲಿ ಮಳೆಯ ಸಿಂಚನ

ದುರ್ಘಟನೆ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿದ್ದವರು ಕೂಡಲೇ ಬಸ್‌ ಚಕ್ರದ ಕೆಳಗೆ ಸಿಲುಕಿದ್ದ, ದಯಾನಂದ ಶೆಟ್ಟಿ ಅವರನ್ನು ಹೊರ ತೆಗೆದಿದ್ದಾರೆ. ಬಳಿಕ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಯಾನಂದ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ.  ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದ ಕಾರಣ ದಯಾನಂದ ಶೆಟ್ಟಿ ಮಣಿಪಾಲ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ಘಟನೆ ಸಂಬಂಧ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ: ಕಾವಡಿ ಸರ್ಕಾರಿ ಪ್ರೌಢಶಾಲೆಗೆ ಪ್ರಥಮ ಬಹುಮಾನ

ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾದ ಉಡುಪಿ ಜಿಲ್ಲಾ ಮಟ್ಟದ...

ಮತಗಳ್ಳತನದ ವಿರುದ್ಧ ಜಾಗೃತಿ ಮೂಡಿಸಿದ ಗೂಡುದೀಪ: ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ವಿನೂತನ ಪ್ರಯೋಗ

ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಮತದಾರರಲ್ಲಿ ಪ್ರಜಾಪ್ರಭುತ್ವದ ಹಕ್ಕುಗಳ ಬಗ್ಗೆ ಜಾಗೃತಿ...

ಹಿಪ್ಪರಗಿ ಬ್ಯಾರೇಜ್‌ಗೆ ಕೊಯ್ನ್ ಜಲಾಶಯದಿಂದ 2 ಟಿಎಂಸಿ ನೀರು ಹರಿಸಿ: ಶಾಸಕ ಸಿದ್ದು ಸವದಿ ಆಗ್ರಹ

ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾ ನದಿಯಲ್ಲಿ ಚಳಿಗಾಲದಲ್ಲೇ ನೀರಿನ ಹರಿವು ಕುಸಿಯುತ್ತಿರುವುದು...

ಉಡುಪಿ | ಗುಂಡ್ಮಿ ಜುಮ್ಮಾ ಮಸೀದಿ ಸಾಸ್ತಾನದಲ್ಲಿ ಮಾದಕ ದ್ರವ್ಯ ಜಾಗೃತಿ ಕಾರ್ಯಕ್ರಮ, ಗಾಲಿಕುರ್ಚಿ ವಿತರಣೆ

ಗುಂಡ್ಮಿ ಜುಮ್ಮಾ ಮಸೀದಿ ಕಮಿಟಿ ಸಾಸ್ತಾನದ ವತಿಯಿಂದ ನವೆಂಬರ್ 6ರಂದು ಶುಕ್ರವಾರ...