ಸಂಸದ ಅನಂತ್ ಕುಮಾರ್ ಹೆಗಡೆ ಮಿನಿ ನಾಗರ, ಆರ್‌ಎಸ್‌ಎಸ್ ಘಟ ಸರ್ಪವಾಗಿದೆ. ಅನಂತ್ ಕುಮಾರ್ ಹೇಳಿಕೆ ಆರ್‌ಎಸ್‌ಎಸ್ ಹರಡಿದ ವಿಷ. ಅದನ್ನು ಇವರು ನಾಚಿಕೆಯಿಲ್ಲದೆ ಇಲ್ಲಿ ಹರಡುತ್ತಿದ್ದಾರೆ. 400 ಸೀಟು ಕೊಡಿ ಸಂವಿಧಾನ ಬದಲಾಯಿಸುತ್ತೇವೆಂದು ನಾಚಿಕೆಯಿಲ್ಲದೆ ಹೇಳುತ್ತಿದ್ದಾರೆ. ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ, ಬಿಜೆಪಿಗೆ ಕೊಡುವ ಒಂದೊಂದು ವೋಟು ಆರ್‌ಎಸ್‌ಎಸ್‌ಗೆ ಬಲ ಬಂದಂತಾಗುತ್ತದೆ ಎಂದು ಪ್ರೊ ಫಣಿರಾಜ್ ಹೇಳಿದರು.
ಉಡುಪಿ ಜಿಲ್ಲೆಯ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳಿಂದ ಸಂಸದ ಅನಂತ್ ಕುಮಾರ್ ಹೆಗಡೆಯ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಅಜ್ಜರಕಾಡಿನ ಹುತಾತ್ಮಸ್ಮಾರಕ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
“ಸಿಟಿ ರವಿ ʼಭಾರತವನ್ನು ಗಣರಾಜ್ಯ ಎನ್ನುವವರು ದೇಶದ್ರೋಹಿʼಗಳೆಂದು ಹೇಳಿ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾನೆ. ಮೊದಲು ಸಿಟಿ ರವಿಗೆ ಧಿಕ್ಕಾರ ಹೇಳಬೇಕು. ಅಂಬೇಡ್ಕರ್ ಪ್ರತಿಮೆ ಮುನ್ನವೇ “ಮನು ಪ್ರತಿಮೆ” ಸ್ಥಾಪಿಸಿ ಅವರು ಅವಮಾನ ಮಾಡಿದ್ದಾರೆ. ಬಿಜೆಪಿಗೆ ಹಾಕುವ ಒಂದೊಂದು ವೋಟು ಮಿನಿ ಸರ್ಪಗಳು ಬೀದಿಯಲ್ಲಿ ಹರಿದಾಡುವಂತೆ ಮಾಡುತ್ತವೆ” ಎಂದು ಹೇಳಿದರು.
ಸುಂದರ್ ಮಾಸ್ತರ್, ಮಂಜುನಾಥ್ ಗಿಳಿಯಾರ್, ಸಂವರ್ತ್ ಸಾಹಿಲ್, ಬಾಲಕೃಷ್ಣ ಶೆಟ್ಟಿ, ವೆರೋನಿಕಾ ಕರ್ನೆಲಿಯೋ ಸೇರಿದಂತೆ ಹಲವು ಮಂದಿ ಮಾತನಾಡಿದರು.
ಪ್ರತಿಭಟನೆಯ ಕೊನೆಯಲ್ಲಿ ಅನಂತ್ ಕುಮಾರ್ ಹೆಗಡೆ ಪ್ರತಿಕೃತಿಗೆ ಚಪ್ಪಲಿ ಏಟು ನೀಡಿ ಬೆಂಕಿ ನೀಡಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರಾಜಧನ ಆಧಾರಿತ ಮರಳು ಸಾಗಾಣಿಕೆಗೆ ಅವಕಾಶ ಕಲ್ಪಿಸುವಂತೆ ಆಗ್ರಹ
ಉಡುಪಿ ಕ್ಯಾಥಲಿಕ್ ಸಭಾ ಮಾಜಿ ಅಧ್ಯಕ್ಷೆ ಮೇರಿ, ಮುಸ್ಲಿಂ ಒಕ್ಕೂಟದ ತಾಲೂಕು ಅಧ್ಯಕ್ಷ ಇರ್ಷಾದ್ ನೇಜಾರ್, ವೆರೋನಿಕಾ ಕರ್ನೆಲಿಯೋ, ಶ್ಯಾಮರಾಜ್ ಬಿರ್ತಿ, ಸುಂದರ್ ಮಾಸ್ತರ್, ಬಾಲಕೃಷ್ಣ ಶೆಟ್ಟಿ, ಕವಿರಾಜ್, ಸಾಲಿಡಾರಿಟಿ ಯೂತ್ ಮೂಲ್ಕೆಂಟ್’ನ ನಬೀಲ್ ಗುಜ್ಜರ್ ಬೆಟ್ಟು, ಅಝೀಝ್ ಉದ್ಯಾವರ, ಜಿ ಎಂ ಶರೀಫ್, ಮಂಜುನಾಥ್ ಬಾಳ್ಳುದ್ರು, ನಾಗೇಶ್ ಉದ್ಯಾವರ, ಎಸ್ನೊ ಆಯಾನ್ ಮಲ್ಪೆ, ಬರಹಗಾರ ಸಂವರ್ತ್ ಸಾಹಿಲ್ ಇದ್ದರು.