ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದಕ್ಷಿಣ ಮುಂಬೈನ ಮಹಾತ್ಮ ಗಾಂಧಿ ಅವರ ನಿವಾಸವಾದ ಮಣಿ ಭವನದಿಂದ ಇಂದು ಬೆಳಿಗ್ಗೆ “ನ್ಯಾಯ ಸಂಕಲ್ಪ ಪಾದಯಾತ್ರೆ”ಯನ್ನು ಕೈಗೊಂಡರು.
ಆಂಗ್ಲರ ಆಡಳಿತವನ್ನು ಕೊನೆಗಾಣಿಸಲು ಸ್ವತಂತ್ರ ಹೋರಾಟದ ಸಂದರ್ಭ 1942ರಲ್ಲಿ ಮುಂಬೈನ ಕ್ರಾಂತಿ ಮೈದಾನದಲ್ಲಿ ಆರಂಭವಾದ ‘ಭಾರತ ಬಿಟ್ಟು ತೊಲಗಿ’ ಸ್ಮರಣಾರ್ಥ “ನ್ಯಾಯ ಸಂಕಲ್ಪ ಯಾತ್ರೆ” ಕೈಗೊಳ್ಳಲಾಗಿದೆ. ಸಂಕಲ್ಪ ಯಾತ್ರೆಯು ಆಗಸ್ಟ್‌ವರೆಗೂ ನಡೆಯಲಿದೆ.
ಇಂದು ನಡೆದ ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗ ತುಷಾರ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡರು.
ಸಂಕಲ್ಪ ಯಾತ್ರೆಯಲ್ಲಿ ವಿಪಕ್ಷಗಳ ಇಂಡಿಯಾ ಒಕ್ಕೂಟದ ಸದಸ್ಯರು ಪಾಲ್ಗೊಳ್ಳಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಡೊನಾಲ್ಡ್ ಟ್ರಂಪ್ ಬಿಟ್ಟು ಅಮೆರಿಕ ಆಳಿದ ಅಧ್ಯಕ್ಷರೆಲ್ಲ ಗುಲಾಮಗಿರಿ ಪ್ರೋತ್ಸಾಹಿಸಿದ ವಂಶಕ್ಕೆ ಸೇರಿದವರು
63 ದಿನಗಳಿಂದ ಹಮ್ಮಿಕೊಳ್ಳಲಾಗಿದ್ದ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ಮಾ.16 ರಂದು ಕೇಂದ್ರ ಮುಂಬೈನ ಡಾ. ಬಿ ಆರ್ ಅಂಬೇಡ್ಕರ್ ಅವರ ಸ್ಮಾರಕ ಕೇಂದ್ರ ‘ಚೈತನ್ಯ ಭೂಮಿ’ಯಲ್ಲಿ ನುಡಿನಮನ ಹಾಗೂ ಸಂವಿಧಾನದ ಪ್ರಸ್ತಾವನೆ ಓದುವುದರೊಂದಿಗೆ ಮುಕ್ತಾಯಗೊಳಿಸಲಾಗಿತ್ತು.
ಲೋಕಸಭಾ ಚುನಾವಣಾ ಹಿನ್ನೆಲೆ ನ್ಯಾಯ ಯಾತ್ರೆಯನ್ನು ಜನವರಿ 14ರಂದು ಮಣಿಪುರದಿಂದ ಆರಂಭಿಸಲಾಗಿತ್ತು.
ವಿಪಕ್ಷಗಳ ಇಂಡಿಯಾ ಒಕ್ಕೂಟವು ತಮ್ಮ ಬಲ ಪ್ರದರ್ಶಿಸಲು ಇಂದು ಸಂಜೆ ರ್‍ಯಾಲಿ ಹಮ್ಮಿಕೊಳ್ಳಲಿದೆ. ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
