ಡೊನಾಲ್ಡ್‌ ಟ್ರಂಪ್‌ ಬಿಟ್ಟು ಅಮೆರಿಕ ಆಳಿದ ಅಧ್ಯಕ್ಷರೆಲ್ಲ ಗುಲಾಮಗಿರಿ ಪ್ರೋತ್ಸಾಹಿಸಿದ ವಂಶಕ್ಕೆ ಸೇರಿದವರು

Date:

ವಿಶ್ವದ ಬಹುತೇಕ ರಾಷ್ಟ್ರಗಳು ಕೂಡ ಜಾತಿ, ಧರ್ಮ ಸೇರಿದಂತೆ ವಿವಿಧ ರೀತಿಯಲ್ಲಿ ಗುಲಾಮಗಿರಿ ವ್ಯವಸ್ಥೆಗೆ ನಲುಗಿವೆ. ಹಲವು ಶತಮಾನಗಳ ಹಿಂದೆ ಉಳ್ಳವರು, ಪ್ರಬಲರು, ಅಧಿಕಾರಸ್ಥರು ಶಕ್ತಿ ಹೀನರನ್ನು ಗುಲಾಮರನ್ನಾಗಿ ಬಳಸಿಕೊಳ್ಳುತ್ತಿದ್ದರು. ಅಮೆರಿಕ ದೇಶದಲ್ಲೂ ಗುಲಾಮಗಿರಿ ವ್ಯವಸ್ಥೆ ಹೆಚ್ಚಾಗಿತ್ತು. ಕಪ್ಪು ವರ್ಣೀಯ ಜನರನ್ನು ಬಿಳಿಯ ಜನರು ಆಳುತ್ತಿದ್ದರು. ಈ ವ್ಯವಸ್ಥೆ 1865ರಲ್ಲಿ ಅಂತರ್‌ಯುದ್ಧದೊಂದಿಗೆ ಹೊಸ ಸಂವಿಧಾನ ರಚನೆಗೊಂಡು ಕೊನೆಗೊಂಡಿತು.

ಮಾಧ್ಯಮ ಸಂಸ್ಥೆಯೊಂದು ತನಿಖೆ ನಡೆಸಿರುವ ವರದಿಯಂತೆ ಅಮೆರಿಕವನ್ನು ಆಳ್ವಿಕೆ ನಡೆಸಿದ 46 ಅಧ್ಯಕ್ಷರಲ್ಲಿ ಕಳೆದ ಬಾರಿ ಅಧಿಕಾರ ನಡೆಸಿದ್ದ ಡೊನಾಲ್ಡ್‌ ಟ್ರಂಪ್‌ ಹೊರತು ಪಡಿಸಿ ಉಳಿದ ಮಾಜಿ ಅಧ್ಯಕ್ಷರೆಲ್ಲ ಕಪ್ಪು ವರ್ಣದ ಜನರನ್ನು ಗುಲಾಮರನ್ನಾಗಿ ಮಾಡಿದ ಅಥವಾ ಪ್ರೋತ್ಸಾಹಿಸಿದ ಪೂರ್ವಜರಿಗೆ ನೇರ ಸಂಬಂಧ ಹೊಂದಿದ್ದಾರೆ.

ಇವರಲ್ಲಿ ಹಾಲಿ ಅಧ್ಯಕ್ಷ ಜೋ ಬೈಡನ್‌ ಹಾಗೂ ಈಗ ಜೀವಂತವಿರುವ ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮ, ಜಾರ್ಜ್ ಬುಷ್, ಜಾರ್ಜ್ ಬುಷ್, ಜಿಮ್ಮಿ ಕಾರ್ಟರ್ ಹಾಗೂ ಬಿಲ್ ಕ್ಲಿಂಟನ್ ಕೂಡ ಕಪ್ಪು ಜನರನ್ನು ಗುಲಾಮರನ್ನಾಗಿ ಆಳಿದ ವಂಶಕ್ಕೆ ಸೇರಿದವರಾಗಿದ್ದಾರೆ. ಇವರಲ್ಲಿ ಕೆಲವು ಅಧ್ಯಕ್ಷರ ವಂಶಸ್ಥರು ಒಬ್ಬರನ್ನು ಗುಲಾಮರನ್ನಾಗಿ ಇಟ್ಟುಕೊಂಡಿದ್ದರೆ, ಮತ್ತು ಹಲವರು ಐವತ್ತಕ್ಕೂ ಹೆಚ್ಚು ಜನರನ್ನು ಗುಲಾಮರನ್ನಾಗಿ ಮಾಡಿಕೊಂಡಿದ್ದರು ಎಂದು ವರದಿ ತಿಳಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಸ್ಪ್ಯಾನರ್‌ ಹಿಡಿದು ಮೆಕ್ಯಾನಿಕ್‌ಗಳೊಂದಿಗೆ ಬೈಕ್‌ ರಿಪೇರಿ ಮಾಡಿದ ರಾಹುಲ್ ಗಾಂಧಿ

ಡೊನಾಲ್ಡ್‌ ಟ್ರಂಪ್‌ ವಂಶಸ್ಥರು ಏಕೆ ಗುಲಾಮಗಿರಿಗೆ ಪ್ರೋತ್ಸಾಹಿಸಲಿಲ್ಲ ಅಥವಾ ಗುಲಾಮರನ್ನಾಗಿ ಇಟ್ಟುಕೊಂಡಿಲ್ಲ ಎಂದು ಕಾರಣ ಹುಡುಕಿದರೆ, ಅವರ ಪೂರ್ವಜರು ಗುಲಾಮಗಿರಿ ವ್ಯವಸ್ಥೆ ಪೂರ್ಣಗೊಂಡ 1865ರ ನಂತರ ಅಮೆರಿಕಕ್ಕೆ ವಲಸೆ ಬಂದವರು. ಟ್ರಂಪ್‌ ಅವರ ಅಜ್ಜಿಯರು ಅಮೆರಿಕದಲ್ಲಿ ಜನಿಸಿದವರಲ್ಲ. ಅವರ ತಂದೆಯ ಅಜ್ಜಿಯರು ನೈಋತ್ಯ ಜರ್ಮನಿಯ ಸಣ್ಣ ಪಟ್ಟಣವಾದ ಕಾಲ್‌ಸ್ಟಾಡ್‌ನಲ್ಲಿ ಜನಿಸಿದರು ಮತ್ತು 1900ರ ದಶಕದ ಆರಂಭದಲ್ಲಿ ಅಮೆರಿಕಕ್ಕೆ ವಲಸೆ ಬಂದರು ಎಂದು ತನಿಖಾ ವರದಿ ತಿಳಿಸಿದೆ.

ಅಮೆರಿಕದ ಜನಗಣತಿ ದಾಖಲೆಗಳು, ತೆರಿಗೆ ದಾಖಲೆಗಳು, ವೃತ್ತಪತ್ರಿಕೆ ದಾಖಲೆಗಳು, ಎಸ್ಟೇಟ್ ದಾಖಲೆಗಳು ಮತ್ತು ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಪರಿಶೀಲಿಸುವುದರ ಮೂಲಕ ಮಾಧ್ಯಮ ಸಂಸ್ಥೆಯು ಸಂಶೋಧನೆ ನಡೆಸಿದೆ. ಸಂಶೋಧನೆಯ ನಂತರ ರಾಜಕಾರಣಿಗಳು ಮತ್ತು ಅವರ ಪೂರ್ವಜರ ಗುಲಾಮಗಿರಿಯ ಸಂಬಂಧಗಳನ್ನು ಪತ್ತೆಹಚ್ಚಲು ಮಂಡಳಿಯಿಂದ ಪ್ರಮಾಣೀಕರಿಸಿದ ವಂಶಾವಳಿಯ ತಜ್ಞರು ದಾಖಲೆಗಳನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಿದ್ದಾರೆ.

ಆರಂಭದಲ್ಲಿ ಅಮೆರಿಕದ ಉತ್ತರದ ರಾಜ್ಯಗಳಲ್ಲಿ ಬಿಳಿ ಜನರು ಕಪ್ಪು ಜನರನ್ನು ಗುಲಾಮರನ್ನಾಗಿ ಮಾಡಿದರು. ಪಿಡುಗು ಶುರುವಾದ ನಂತರ ಅಮೆರಿಕದ ದಕ್ಷಿಣ ರಾಜ್ಯಗಳಲ್ಲಿ ಗುಲಾಮಗಿರಿ ವ್ಯವಸ್ಥೆ ಪ್ರಬಲವಾಗುತ್ತಾ ಹೋಯಿತು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಪುಟಿನ್‌ ಬಾಣಸಿಗ ಪ್ರಿಗೋಷಿನ್ ಯಾರು? ಪುಟಿನ್ ವಿರುದ್ಧವೇ ಬಂಡಾಯವೆದ್ದಿದ್ದೇಕೆ?

ಇಬ್ಬರು ಹಾಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು

ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿರುವ ಇಬ್ಬರು ಕೂಡ ಗುಲಾಮಗಿರಿ ಪ್ರೋತ್ಸಾಹಿಸಿದ ಪೂರ್ವಜರನ್ನು ಹೊಂದಿದ್ದಾರೆ. ಯುಎಸ್‌ಎ ಸಂಸತ್ತನ್ನು ಪ್ರತಿನಿಧಿಸುವ ಸುಮಾರು ಶೇಕಡಾ 8ರಷ್ಟು ಡೆಮಾಕ್ರಾಟಿಕ್‌ಗಳು ಮತ್ತು ಶೇ 28 ರಷ್ಟು ರಿಪಬ್ಲಿಕನ್‌ ಸಂಸದರು ಕೂಡ ಗುಲಮಗಿರಿ ಪೂರ್ವಜರ ಸಂಬಂಧ ಹೊಂದಿದ್ದಾರೆ. ಇನ್ನುಳಿದಂತೆ ವಿವಿಧ ರಾಜ್ಯದ 11 ಗವರ್ನರ್‌ಗಳು, 11 ರಾಜ್ಯಗಳ ಎಂಟು ಮುಖ್ಯ ಕಾರ್ಯನಿರ್ವಾಹಕರು ಕಪ್ಪು ಜನರನ್ನು ಆಳಿದ ವಂಶಕ್ಕೆ ಸೇರಿದ್ದಾರೆ.

ಸೆನೆಟ್‌ನ ಅಲ್ಪಸಂಖ್ಯಾತ ನಾಯಕ ಮಿಚ್ ಮೆಕ್‌ಕಾನ್ನೆಲ್, ರಿಪಬ್ಲಿಕನ್ ಸೆನೆಟರ್‌ಗಳಾದ ಮಿಚ್ ಮೆಕ್‌ಕಾನ್ನೆಲ್, ಲಿಂಡ್ಸೆ ಗ್ರಹಾಂ, ಟಾಮ್ ಕಾಟನ್ ಮತ್ತು ಜೇಮ್ಸ್ ಲ್ಯಾಂಕ್‌ಫೋರ್ಡ್, ಡೆಮಾಕ್ರಾಟಿಕ್‌ಗಳಾದ ಎಲಿಜಬೆತ್ ವಾರೆನ್, ಟ್ಯಾಮಿ ಡಕ್‌ವರ್ತ್, ಜೀನ್ ಶಾಹೀನ್ ಮತ್ತು ಮ್ಯಾಗಿ ಹಸನ್ ಸೇರಿದಂತೆ ಅಮೆರಿಕದ ಕೆಲವು ಪ್ರಭಾವಶಾಲಿ ರಾಜಕಾರಣಿಗಳು ಗುಲಾಮಗಿರಿ ವ್ಯವಸ್ಥೆ ಪ್ರೋತ್ಸಾಹಿಸಿದ ಪೂರ್ವಜರ ನಂಟನ್ನು ಹೊಂದಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕುಮಾರಣ್ಣನ ಜೇಬಲ್ಲಿದ್ದ ‘ಪೆನ್‌ಡ್ರೈವ್‌’ನಲ್ಲಿ ಏನಿತ್ತು ಎಂಬುದು ಈಗ ಗೊತ್ತಾಯ್ತು: ಡಿ ಕೆ ಶಿವಕುಮಾರ್

ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಜೆಡಿಎಸ್ ಸಂಸದ ಹಾಗೂ ಹಾಸನ...

‘ಬರ ಪರಿಹಾರ ಸಾಕು’ ಎಂದಿರುವ ಕುಮಾರಸ್ವಾಮಿ ನಾಡದ್ರೋಹಿ: ಡಿಸಿಎಂ ಡಿಕೆಶಿ ವಾಗ್ದಾಳಿ

"ಕೇಂದ್ರ ಸರ್ಕಾರ ಕರ್ನಾಟಕದ ಬರಕ್ಕೆ ಅಲ್ಪ ಪರಿಹಾರ ಮೊತ್ತ ಘೋಷಿಸಿದ್ದು, ನಾವು...

ಹಿಂದುಳಿದ ಸಮುದಾಯಗಳೇ ಎಚ್ಚರ, ಮೋದಿ ನಿಮ್ಮ ಹಾದಿ ತಪ್ಪಿಸುತ್ತಿದ್ದಾರೆ: ಘರ್ಜಿಸಿದ ಸಿದ್ದರಾಮಯ್ಯ

ರಾಜ್ಯದ ಹಿಂದುಳಿದ ಸಮುದಾಯಗಳೇ ಎಚ್ಚರ. ಮೋದಿ ನಿಮ್ಮ ಹಾದಿ ತಪ್ಪಿಸಿ ಮುಸ್ಲಿಮರ...

ಪಿಎಂ ಮೋದಿ ಸೂಪರ್‌ ಮ್ಯಾನ್ ಅಲ್ಲ ದುಬಾರಿ ಮ್ಯಾನ್: ಪ್ರಿಯಾಂಕಾ ಗಾಂಧಿ ವ್ಯಂಗ್ಯ

ಪ್ರಧಾನಿ ನರೇಂದ್ರ ಮೋದಿ ಸೂಪರ್ ಮ್ಯಾನ್ ಅಲ್ಲ ಬದಲಾಗಿ ಅವರು ದುಬಾರಿ...