WPL 2024 | ಆರ್‌ಸಿಬಿ ಕಪ್ ಗೆಲ್ಲುತ್ತಿದ್ದಂತೆಯೇ ಪ್ರತ್ಯಕ್ಷವಾದ ವಿಜಯ್ ಮಲ್ಯ

Date:

Advertisements

ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್)-2024ರ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಮಹಿಳಾ ತಂಡವು ಭರ್ಜರಿ ಗೆಲುವು ಸಾಧಿಸಿ, ಕಪ್‌ ಪಡೆದುಕೊಂಡಿದೆ. ಆರ್‌ಸಿಬಿ ಗೆಲುತ್ತಿದ್ದಂತೆ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಪರಾರಿಯಾಗಿರುವ ವಿಜಯ್ ಮಲ್ಯ ಪ್ರತ್ಯಕ್ಷವಾಗಿದ್ದಾರೆ. ಮಹಿಳಾ ತಂಡವನ್ನು ಅಭಿನಂದಿಸಿ ‘ಎಕ್ಸ್‌’ನಲ್ಲಿ ಟ್ವೀಟ್ ಮಾಡಿದ್ದಾರೆ.

ಆರ್‌ಸಿಬಿ ಪುರುಷ ತಂಡವು ಈವರೆಗೂ ಐಪಿಎಲ್‌ನಲ್ಲಿ ಕಪ್ ಗೆದ್ದಿಲ್ಲ. ಆದರೆ, ಮಹಿಳಾ ತಂಡವು ಎರಡನೇ ಸೀಸನ್‌ನಲ್ಲೇ ‘ಈ ಸಲ ಕಪ್‌ ನಮ್ದೇ’ ಎಂದಿದ್ದು, ಗೆದ್ದು ಬೀಗಿದ್ದಾರೆ. ಸ್ಮೃತಿ ಮಂದಣ್ಣ ನಾಯಕತ್ವದ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಎದುರು ಭರ್ಜರಿ ಜಯ ಸಾಧಿಸುತ್ತಿದ್ದಂತೆ ಆರ್‌ಸಿಬಿ ಪುರುಷ ತಂಡದ ಈ ಹಿಂದಿನ ಮಾಲೀಕ ವಿಜಯ್ ಮಲ್ಯ ಸಾಮಾಜಿಕ ಜಾಲತಾಣದಲ್ಲಿ ಮಹಿಳಾ ತಂಡಕ್ಕೆ ಅಭಿನಂದಿಸಿದ್ದಾರೆ.

“ಡಬ್ಲ್ಯೂಪಿಎಲ್‌ ಗೆದ್ದ ಆರ್‌ಸಿಬಿ ಮಹಿಳಾ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಐಪಿಎಲ್‌ನಲ್ಲಿ ಆರ್‌ಸಿಬಿ ಪುರುಷರ ತಂಡವೂ ಕೂಡಾ ಗೆಲುವು ಸಾಧಿಸಿದ್ದರೆ ಡಬಲ್ ಗೆಲುವಾಗುತ್ತಿತ್ತು. ಶುಭವಾಗಲಿ” ಎಂದು ಉದ್ಯಮಿ ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ.

Advertisements

ವಿಜಯ್ ಮಲ್ಯ ಟ್ವೀಟ್ ಮಾಡುತ್ತಿದ್ದಂತೆ ನೆಟ್ಟಿಗರು ಹಾಸ್ಯಾಸ್ಪದವಾಗಿ ಕಾಮೆಂಟ್ ಮಾಡಿದ್ದಾರೆ. “ಆರ್‌ಸಿಬಿ ಪುರುಷರ ತಂಡವು 2024ರ ಸೀಸನ್‌ನಲ್ಲಿ ಗೆಲುವು ಸಾಧಿಸಿದರೆ ನೀವು ಭಾರತಕ್ಕೆ ವಾಪಾಸ್ ಬರುವುದಾಗಿ ನಾವು ಒಪ್ಪಂದ ಮಾಡಿಕೊಳ್ಳೋಣ” ಎಂದು ನೆಟ್ಟಿಗರು ಛೇಡಿಸಿದ್ದಾರೆ.

ಇನ್ನೋರ್ವ ನೆಟ್ಟಿಗ, “ಮಲ್ಯ ಬರೀ ರಜಾದಿನಗಳಲ್ಲಿ ಟ್ವೀಟ್ ಮಾಡುತ್ತಾರೆ” ಎಂದು ಹೇಳಿದರೆ, ಅಧೀರ ಎಂಬವರು, “ಹಾಯ್ ಮಲ್ಯ ಅಂಕಲ್, ಇಂದು ಭಾನುವಾರ ‘ಬ್ಯಾಂಕ್‌’ ರಜೆ” ಎಂದು ಬ್ಯಾಂಕುಗಳಿಗೆ ಸಾಲ ಮರುಪಾವತಿ ಮಾಡದೆ ವಂಚಿಸಿ ದೇಶ ತೊರೆದು ಹೋದ ವಿಜಯ್ ಮಲ್ಯ ಕಾಳೆದಿದ್ದಾರೆ.

ತಾನು ಕಿಂಗ್‌ಫಿಷರ್‌ನ ಮಾಜಿ ಉದ್ಯೋಗಿ ಎಂದು ಹೇಳಿಕೊಂಡಿರುವ ನೆಟ್ಟಿಗರೊಬ್ಬರು, “ನಿಮಗೆ ಒಳ್ಳೆಯದಾಗಲಿ ಸರ್. ನನ್ನ ಬಾಕಿ ವೇತನಕ್ಕಾಗಿ ನಾನು ಈಗಲೂ ಕಾಯುತ್ತಿದ್ದೇನೆ. ಇಂತೀ ನಿಮ್ಮ ಕಿಂಗ್‌ಫಿಷರ್‌ ಏರ್‌ಲೈನ್ಸ್‌ನ ಮಾಜಿ ಉದ್ಯೋಗಿ” ಎಂದಿದ್ದಾರೆ.

ಭಾರತದಲ್ಲಿ ಆರ್ಥಿಕ ಅಪರಾಧಿಯಾಗಿರುವ ವಿಜಯ್ ಮಲ್ಯ ಭಾರತದಿಂದ ಪಲಾಯನವಾಗಿ ಯುಕೆಯಲ್ಲಿದ್ದಾರೆ. 2012 ರಿಂದ ಹಣಕಾಸಿನ ಹಗರಣಗಳನ್ನು ನಡೆಸಿರುವ ವಿಜಯ್ ಮಲ್ಯ ಸಾಲವಿದ್ದರೂ ಐಷಾರಾಮಿ ಜೀವನ ನಡೆಸುತ್ತಿದ್ದು, ಭಾರತದ ಬ್ಯಾಂಕ್‌ಗಳಿಗೆ ವಂಚಿಸಿ ಪರಾರಿಯಾಗಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

Download Eedina App Android / iOS

X