‘ಶಕ್ತಿ’ ವಿಷಯದ ಬಗ್ಗೆ ಹಿಂದೆ ನುಡಿದಿದ್ದ ತಮ್ಮ ಮಾತುಗಳನ್ನು ತಿರುಚಿರುವ ಪ್ರಧಾನಿ ನರೇಂದ್ರ ಮೋದಿ ನಡೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಂಡಿಸಿದ್ದಾರೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ರಾಹುಲ್ ಗಾಂಧಿ, “ಮೋದಿ ಅವರಿಗೆ ನನ್ನ ಮಾತು ಇಷ್ಟವಿಲ್ಲ. ನಾನು ಆಳವಾದ ಸತ್ಯವನ್ನು ಹೇಳುತ್ತೇನೆ ಎಂಬುದು ಅವರಿಗೆ ಗೊತ್ತಿರುವ ಕಾರಣ ಅವರು ಯಾವಾಗಲು ನನ್ನ ಮಾತುಗಳನ್ನು ಬೇರೆ ಬೇರೆ ರೀತಿಯಲ್ಲಿ ಬದಲಿಸಲು ಪ್ರಯತ್ನಿಸುತ್ತಾರೆ” ಎಂದು ತಿಳಿಸಿದ್ದಾರೆ.
‘ಶಕ್ತಿ’ಯನ್ನು ನಾನು ಉಲ್ಲೇಖಿಸಿದ್ದು,ಶಕ್ತಿಯ ಮುಖವಾಡ ಹಾಕಿಕೊಂಡಿರುವ ಮೋದಿ ಅವರ ವಿರುದ್ಧ ನಾವು ಹೋರಾಡುತ್ತೇವೆ ಎಂದು. ಇಂತಹ ಶಕ್ತಿಯು ಇಂದು ಭಾರತದ ತನಿಖಾ ಸಂಸ್ಥೆಗಳಾದ ಸಿಬಿಐ, ಐಟಿ, ಇಡಿ, ಚುನಾವಣಾ ಆಯೋಗ, ಮಾಧ್ಯಮ, ಭಾರತದ ಉದ್ಯಮ ಹಾಗೂ ಭಾರತದ ಸಾಂವಿಧಾನಿಕ ರಚನೆಯನ್ನು ತನ್ನ ಹಿಡಿತಗಳಿಂದ ಭಾರತದ ಧನಿಗಳನ್ನು ಸೆರೆ ಹಿಡಿದುಕೊಂಡಿದೆ ಎಂದು ರಾಹುಲ್ ಹೇಳಿದ್ದಾರೆ.
ಇದೇ ಶಕ್ತಿಯಾದ ನರೇಂದ್ರ ಮೋದಿ ಕೆಲವು ಸಾವಿರ ರೂ.ಗಳ ಸಾಲವನ್ನು ತೀರಿಸದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ ಶ್ರೀಮಂತರ ಸಾವಿರಾರು ಕೋಟಿ ರೂ. ಸಾಲವನ್ನು ತೀರಿಸುತ್ತದೆ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೇಳುವುದು ಹಬ್ಬ, ಮಾಡುವುದು ಯುದ್ಧ, ಸಾಯುವುದು ಸೈನಿಕರು
“ಇದೇ ಶಕ್ತಿಯು ಅಗ್ನಿವೀರ್ ಯೋಜನೆಯ ಮೂಲಕ ಭಾರತದ ಯುವಕರ ಧೈರ್ಯವನ್ನು ಕಸಿದು ಕೆಲವರಿಗೆ ಭಾರತದ ಬಂದರುಗಳು, ಭಾರತದ ವಿಮಾನ ನಿಲ್ದಾಣಗಳನ್ನು ಕೊಡುತ್ತದೆ. ಅದೇ ಶಕ್ತಿ ದಿನವಿಡಿ ಶ್ರೀಮಂತರ ಸೇವೆ ಮಾಡುತ್ತಿದ್ದರೆ, ಭಾರತದ ಮಾಧ್ಯಮಗಳು ಸತ್ಯವನ್ನು ತಿರುಚುತ್ತಿವೆ” ಎಂದು ಹೇಳಿದರು.
ನರೇಂದ್ರ ಮೋದಿ ಅವರು ಅದೇ ಶಕ್ತಿಯ ಗುಲಾಮರಾಗಿ ಬಡವರ ಮೇಲೆ ಜಿಎಸ್‌ಟಿ ವಿಧಿಸಿದ್ದಾರೆ. ಹಣದುಬ್ಬರದ ಮೇಲೆ ಅವರಿಗೆ ನಿಯಂತ್ರಣವಿಲ್ಲ. ಕೆಲವರ ಶಕ್ತಿ ಹೆಚ್ಚಿಸಲು ದೇಶದ ಸ್ವತ್ತನ್ನು ಹರಾಜುಗೊಳಿಸುತ್ತಿದ್ದಾರೆ ಎಂದು ಹೇಳಿದರು.
“ನಾನು ಆ ಶಕ್ತಿಯನ್ನು ಗುರುತಿಸಿದ್ದೇನೆ. ನರೇಂದ್ರ ಮೋದಿ ಕೂಡ ಆ ಶಕ್ತಿಯನ್ನು ಗುರುತ್ತಿಸಿದ್ದಾರೆ. ಅವರಿಗೆ ಯಾವುದೇ ರೀತಿಯ ಧಾರ್ಮಿಕ ಶಕ್ತಿಗಳಿಲ್ಲ. ಅವರದು ಅಧರ್ಮ, ಭ್ರಷ್ಟಾಚಾರ ಹಾಗೂ ಸುಳ್ಳು ಹೇಳುವ ಶಕ್ತಿ. ಆ ಕಾರಣಕ್ಕಾಗಿ ನಾನು ಯಾವಾಗಲು ಅವರ ವಿರುದ್ಧ ಧನಿ ಎತ್ತುತ್ತೇನೆ. ಇದರಿಂದ ಮೋದಿ ಹಾಗೂ ಅವರ ಯಂತ್ರ ಕೋಪಗೊಳ್ಳುತ್ತದೆ ಹಾಗೂ ಬೇಸರ ಮಾಡಿಕೊಳ್ಳುತ್ತದೆ” ಎಂದು ರಾಹುಲ್ ಗಾಂಧಿ ಹೇಳಿದರು.
ಇಂಡಿಯಾ ಒಕ್ಕೂಟ ಅವರ ಪ್ರಣಾಳಿಕೆಗಳು ‘ಹಿಂದು ಶಕ್ತಿ’ಯನ್ನು ನಾಶಗೊಳಿಸಲು ಪ್ರಯತ್ನಿಸುತ್ತಿವೆ. ಭಾರತೀಯರೆಲ್ಲರೂ ಶಕ್ತಿಯ ರೂಪ. ನಾನು ಭಾರತ ಮಾತೆಯ ಶಕ್ತಿಯ ಆರಾಧಕ ಎಂದು ತೆಲಂಗಾಣಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.
मोदी जी को मेरी बातें अच्छी नहीं लगतीं, किसी न किसी तरह उन्हें घुमाकर वह उनका अर्थ हमेशा बदलने की कोशिश करते हैं क्योंकि वह जानते हैं कि मैंने एक गहरी सच्चाई बोली है।
जिस शक्ति का मैंने उल्लेख किया, जिस शक्ति से हम लड़ रहे हैं, उस शक्ति का मुखौटा मोदी जी हैं।
वह एक ऐसी शक्ति…
— Rahul Gandhi (@RahulGandhi) March 18, 2024
