ಶರದ್ ಪವಾರ್ ಬಣದ ಎನ್‌ಸಿಪಿ ಪಕ್ಷಕ್ಕೆ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ಚಿಹ್ನೆಯಾಗಿ ‘ಮನುಷ್ಯ ಊದುತ್ತಿರುವ ರಣಕಹಳೆ’ ಬಳಸಲು ಸುಪ್ರೀಂ ಕೋರ್ಟ್ ಅನುಮತಿಸಿದೆ.
‘ಮನುಷ್ಯ ಊದುತ್ತಿರುವ ರಣಕಹಳೆ’ ಚಿಹ್ನೆಯನ್ನು ಬಳಸಲು ಶರದ್ ಪವಾರ್ ಬಣಕ್ಕೆ ನೀಡಬೇಕೆಂದು ಚುನಾವಣಾ ಆಯೋಗಕ್ಕೆ ಸೂಚಿಸಿತು. ಅಲ್ಲದೆ ಈ ಚಿಹ್ನೆಯನ್ನು ಬೇರೆ ಪಕ್ಷ ಅಥವಾ ಅಭ್ಯರ್ಥಿಗೆ ನೀಡದಂತೆ ಆಯೋಗಕ್ಕೆ ತಿಳಿಸಲಾಯಿತು.
ಇದೇ ಸಂದರ್ಭದಲ್ಲಿ ಅಜಿತ್ ಪವಾರ್ ಬಣದ ಎನ್‌ಸಿಪಿಗೆ ನಿರ್ದೇಶನ ನೀಡಿದ ಸುಪ್ರೀಂ ಕೋರ್ಟ್, ಎನ್‌ಸಿಪಿ ಪಕ್ಷವು ಇಂಗ್ಲಿಷ್, ಹಿಂದಿ ಹಾಗೂ ಮರಾಠಿ ಮಾಧ್ಯಮಗಳಲ್ಲಿ ತಮ್ಮ ಪಕ್ಷದ ಚಿಹ್ನೆಯಾಗಿ ಗಡಿಯಾರದ ಚಿಹ್ನೆಯನ್ನು ತಮ್ಮ ಪ್ರಚಾರದಲ್ಲಿ ಬಳಸುತ್ತಿರುವುದಾಗಿ ಬಳಸಬೇಕು. ಸುಪ್ರೀಂ ಕೋರ್ಟ್‌ನಲ್ಲಿ ನಿಜವಾದ ಎನ್‌ಸಿಪಿ ಬಣ ಯಾವುದೆಂದು ತೀರ್ಮಾನವಾಗುವವರೆಗೂ ಅದೇ ಚಿಹ್ನೆ ಬಳಸುವಂತೆ ಸೂಚಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೇಳುವುದು ಹಬ್ಬ, ಮಾಡುವುದು ಯುದ್ಧ, ಸಾಯುವುದು ಸೈನಿಕರು
2023ರ ಮಧ್ಯದಲ್ಲಿ, ಎನ್‌ಸಿಪಿಯು ಶರದ್ ಪವಾರ್ ಹಾಗೂ ಅವರ ಸಂಬಂಧಿ ಅಜಿತ್ ಪವಾರ್ ಬಣಗಳಾಗಿ ವಿಭಜಿತವಾಯಿತು. ಅಜಿತ್ ಪವಾರ್ ಎನ್‌ಸಿಪಿಯ ಬಹುತೇಕ ಶಾಸಕರನ್ನು ತಮ್ಮ ಜೊತೆ ಕರೆದುಕೊಂಡು ಆಡಳಿತರೂಢ ಶಿವಸೇನೆ ಹಾಗೂ ಬಿಜೆಪಿ ಪಕ್ಷದೊಂದಿಗೆ ಸೇರ್ಪಡೆಯಾದರು.
ಅಜಿತ್ ಪವಾರ್ ಸದ್ಯ ಪ್ರಸ್ತುತ ಏಕನಾಥ್ ಶಿಂಧೆ ಸರ್ಕಾರದಲ್ಲಿ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಉಪ ಮುಖ್ಯಮಂತ್ರಿಯಾಗಿದ್ದಾರೆ.
