ಚಾಮರಾಜನಗರ ಲೋಕಸಭಾ ಕ್ಷೇತ್ರ | ಈ ಬಾರಿ ಯಾರಿಗೆ ವರವಾಗಲಿದೆ ಎಸ್‌ಸಿ ಮೀಸಲು ಕ್ಷೇತ್ರ?

Date:

ಚಾಮರಾಜನಗರ ಲೋಕಸಭಾ ಕ್ಷೇತ್ರ ಎಸ್‌ಸಿ ಮೀಸಲು ಕ್ಷೇತ್ರ. ಈ ಹಿಂದೆ ಮೈಸೂರು ಜಿಲ್ಲೆಗೆ ಸೇರಿತ್ತು. ಭಾರತದ 50ನೇಯ ಸ್ವಾತಂತ್ರ್ಯ ಮಹೋತ್ಸವದ ನೆನಪಿನಾರ್ಥ ಅಂದಿನ ಮುಖ್ಯ ಮಂತ್ರಿಗಳಾದ ಜೆ.ಎಚ್. ಪಟೇಲ್ ಆಗಸ್ಟ್ 15, 1997ರಂದು ಚಾಮರಾಜ ನಗರ ಜಿಲ್ಲೆಯಾಗಿ ಚಾಲನೆ ನೀಡಿದರು.

- Advertisement -

ಚಾಮರಾಜನಗರ ರಾಜಕಾರಣಿಗಳಿಗೆ ʼಶಾಪಗ್ರಸ್ತʼ ಜಿಲ್ಲೆ ಎಂಬ ಹಣೆಪಟ್ಟಿ ಹೊಂದಿದೆ. ಇಲ್ಲಿಗೆ ಕಾಲಿಟ್ಟರೆ ಅಧಿಕಾರ ಹೋಗುತ್ತದೆ ಅನ್ನುವ ನಂಬಿಕೆ ರಾಜಕೀಯ ವಲಯದಲ್ಲಿತ್ತು. ಆದರೆ ಮೌಢ್ಯಗಳ ಕಡು ವಿರೋಧಿ ಸಿದ್ದರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿ ಆಗಿದ್ದಾಗಲೂ ಜಿಲ್ಲೆಗೆ ಪದೇ ಪದೇ ಬಂದು ಹೋಗಿದ್ದಾರೆ. ಈ ಬಾರಿಯೂ ಮೊನ್ನೆಯಷ್ಟೇ ಧ್ರುವನಾರಾಯಾಣ್‌ ಪುಣ್ಯಸ್ಮರಣೆ ಕಾರ್ಯಕ್ಕೆ ಹೋಗಿ ಬಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಇದು ಬರದ ನಾಡು, ಮೂಲಭೂತ ಸೌಕರ್ಯ ವಂಚಿತ ನಗರ, ಜಿಲ್ಲೆಯಾದರು ಸಹ ಇದುವರೆಗೆ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳು ಆಗಿಲ್ಲ ಎಂಬ ನೋವು ಕ್ಷೇತ್ರದ ಜನರಲ್ಲಿದೆ.

ಜಿಲ್ಲೆಯಂತೆ ಕಂಗೊಳಿಸುವುದೆ ಇಲ್ಲ

ಚಾಮರಾಜ ನಗರ ವನಸಿರಿಯನ್ನೇ ಹೊದ್ದು ಮಲಗಿದೆ. ಒಂದು ಕಡೆ ಮಲೆ ಮಹದೇಶ್ವರ ಬೆಟ್ಟ. ಕಾವೇರಿ ಮೀಸಲು ಅರಣ್ಯ ಪ್ರದೇಶ, ಇನ್ನೊಂದು ಕಡೆ ಬಿಳಿಗಿರಿ ರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶ, ಮತ್ತೊಂದೆಡೆ ಬಂಡೀಪುರ ರಾಷ್ಟ್ರೀಯ ಉದ್ಯಾನವನ. ಎಲ್ಲಿ ನೋಡಿದರೂ ಬೆಟ್ಟ ಗುಡ್ಡಗಳು, ವನ್ಯ ಜೀವಿಗಳಿಗೆ ಆಶ್ರಯ ತಾಣ. ಹಿಮವದ್ ಗೋಪಾಲ ಸ್ವಾಮಿ, ಮಲೆ ಮಹದೇಶ್ವರ, ಬಿಳಿಗಿರಿ ರಂಗನಾಥ, ಚಾಮರಾಜೇಶ್ವರ ದೇವಾಲಯ, ಯಳಂದೂರಿನ ಬಳೆ ದೇವಾಲಯ, ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು.

ಸಾಂಸ್ಕೃತಿಕವಾಗಿ ವರನಟ ಡಾ. ರಾಜ್ ಕುಮಾರ್ ಹುಟ್ಟಿದ ಮಣ್ಣು ಸಿಂಗಾನಲ್ಲೂರು. ಜಾನಪದ ಸಾಹಿತ್ಯಕ್ಕೆ ಮೆರುಗು ತಂದ ಪುಣ್ಯಭೂಮಿ, ಚಿಕ್ಕಾನಲ್ಲೂರು ಸಿದ್ದಪ್ಪಾಜಿ, ರಾಜಪ್ಪಾಜಿ, ಚನ್ನಾಜಮ್ಮ, ಬೊಪ್ಪಣ್ಣಪುರದ ಮಂಟೆದ ಲಿಂಗಯ್ಯ ಜನರ ಜೀವನದಲ್ಲಿ ಹಾಸು ಹೊಕ್ಕಾಗಿದ್ದಾರೆ.

ಬದನವಾಳಿಗೆ 1927ರಲ್ಲಿ ಮಹಾತ್ಮ ಗಾಂಧಿ ಭೇಟಿ ಕೊಟ್ಟು ಮೂರು ದಿನಗಳ ಕಾಲ ವಾಸ್ತವ್ಯ ಮಾಡಿದ್ದರು. ಈಗಲು ಕೈಮಗ್ಗ, ನೂಲು ನೆಯ್ಯುವುದು, ಖಾದಿ ಬಟ್ಟೆ ಸಿದ್ಧವಾಗುತ್ತದೆ. ಹೋಗೇನಕಲ್ ಫಾಲ್ಸ್ ಪ್ರವಾಸಿಗರ ನೆಚ್ಚಿನ ಪ್ರವಾಸಿ ತಾಣ.

ಚಾಮರಾಜನಗರ ಎಷ್ಟು ಖ್ಯಾತಿಯೋ ಹೊಂದಿದಿಯೋ, ನರಹಂತಕ ಕಾಡುಗಳ್ಳ ವೀರಪ್ಪನ್ ನಿಂದಾಗಿ ಅಷ್ಟೇ ಕುಖ್ಯಾತಿ ಹೊಂದಿದ್ದನ್ನು ಮರೆಯುವಂತೆ ಇಲ್ಲ. ಡಾ. ರಾಜ್‌ಕುಮಾರ್‌ ಅವರನ್ನು ಹೊತ್ತೊಯ್ದ ಸಂದರ್ಭ ಇಡೀ ದೇಶವೇ ಚಾಮರಾಜನಗರದ ಕಡೆ ತಿರುಗಿ ನೋಡುವಂತೆ ಆಗಿತ್ತು. ಕೃಪಾಕರ ಸೇನಾನಿ, ಕಾಮಗೆರೆ ನಾಗಪ್ಪ ಅಪಹರಣ, ರಾಮಾಪುರ ಪೊಲೀಸ್ ಠಾಣೆ ಮೇಲಿನ ಗುಂಡಿನ ದಾಳಿ, ಪಾಲಾರ್ ಬಾಂಬ್ ಸ್ಫೋಟ ರಾಜ್ಯದ ಗಮನ ಸೆಳೆದಿದ್ದವು.

ಚಾಮರಾಜ ನಗರ ಲೋಕಸಭಾ ಕ್ಷೇತ್ರಕ್ಕೆ ಮೈಸೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳು ಸೇರುತ್ತವೆ. ಅದರಲ್ಲಿ ಹೆಗ್ಗಡದೇವನ ಕೋಟೆ, ಟಿ.ನರಸೀಪುರ, ನಂಜನಗೂಡು, ವರುಣಾ. ಇದರಲ್ಲಿ ಬಹುತೇಕ ಎಸ್‌ಸಿ ಹಾಗೂ ಎಸ್‌ಟಿ ಮೀಸಲು ವಿಧಾನಸಭಾ ಕ್ಷೇತ್ರಗಳು ಸೇರಿವೆ.

ಇದರಲ್ಲಿ ವಿಶೇಷ ಅಂದ್ರೆ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣಾ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತದೆ.

ಚಾಮರಾಜ ನಗರ ಲೋಕಸಭಾ ಕ್ಷೇತ್ರದಲ್ಲಿ 17 ಲಕ್ಷದ 57 ಸಾವಿರದ 616 ಮತದಾರರಿದ್ದಾರೆ. 8 ಲಕ್ಷದ 69 ಸಾವಿರದ 389 ಪುರುಷರು, 8 ಲಕ್ಷದ 88 ಸಾವಿರದ113 ಮಹಿಳೆಯರು, 114 ಲಿಂಗತ್ವ ಅಲ್ಪಸಂಖ್ಯಾತ ಮತದಾರರನ್ನು ಹೊಂದಿದೆ.

ಇದುವರೆಗೆ 17 ಸಂಸದರನ್ನು ಕಂಡಿದೆ

1952 ಎನ್. ರಾಚಯ್ಯ, ಕಾಂಗ್ರೆಸ್

1957, 1962, 1967 ಹಾಗೂ 1971 ಎಸ್.ಎಂ. ಸಿದ್ದಯ್ಯ, ಕಾಂಗ್ರೆಸ್

1977 ಬಿ. ರಾಚಯ್ಯ, ಕಾಂಗ್ರೆಸ್

1980, 1984, 1989 ಹಾಗೂ 1991 ವಿ. ಶ್ರೀನಿವಾಸ್ ಪ್ರಸಾದ್, ಕಾಂಗ್ರೆಸ್(ಐ) ಹಾಗೂ ಕಾಂಗ್ರೆಸ್

1996 ಮತ್ತು 1998 ಎ. ಸಿದ್ದರಾಜು, ಜನತಾದಳ

1999 ವಿ. ಶ್ರೀನಿವಾಸ್ ಪ್ರಸಾದ್, ಜನತಾದಳ (ಸಂಯುಕ್ತ)

2004 ಕಾಗಲವಾಡಿಶಿವಣ್ಣ, ಜಾತ್ಯತೀತ ಜನತಾದಳ

2009 ದ್ರುವ ನಾರಾಯಣ್, ಕಾಂಗ್ರೆಸ್

2019 ವಿ. ಶ್ರೀನಿವಾಸ್ ಪ್ರಸಾದ್, ಭಾರತೀಯ ಜನತಾ ಪಾರ್ಟಿ

ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಗಮನಿಸಿದಾಗ ವಿ. ಶ್ರೀನಿವಾಸ್ ಪ್ರಸಾದ್ ಹೆಚ್ಚು ಬಾರಿ ಹಲವು ಪಕ್ಷಗಳಿಂದ ಸಂಸದರಾಗಿ ಆಯ್ಕೆ ಆಗಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಹಿರಿತನಕ್ಕೆ ಗೌರವ ಕೊಡದೆ ಮಂತ್ರಿ ಸ್ಥಾನದಿಂದ ತೆಗೆದು ಅವಮಾನಿಸಿದೆ ಎಂದು ಜನರ ಮುಂದೆ ಹೋದಾಗ ಅನುಕಂಪದ ಅಲೆಯಲ್ಲಿ ಕೇವಲ 1,817 ಮತಗಳ ಅಂತರದಲ್ಲಿ ಧ್ರುವ ನಾರಾಯಣ್ ಅವರ ಎದುರು ಗೆದ್ದು ಮೊದಲ ಭಾರಿ ಬಿಜೆಪಿ ಖಾತೆ ತೆರೆಯಲು ಕಾರಣರಾದರು. ಈಗ ಧ್ರುವ ನಾರಾಯಣ್‌ ಇಲ್ಲ.

ಆದರೆ, ಈ ಭಾರಿ ಅಂತಹ ಸನ್ನಿವೇಶ ಕ್ಷೇತ್ರದಲ್ಲಿ ಇಲ್ಲ ಮೂಲಭೂತ ಸೌಲಭ್ಯಗಳು, ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಹಿಂದುಳಿದಿದ್ದು. ಈ ಭಾರಿ ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮತ ಹಾಕುವ ದಾಟಿಯಲ್ಲಿದೆ ಮತದಾರರ ಅಭಿಪ್ರಾಯ. ಅಲ್ಲದೇ ಧ್ರುವನಾರಾಯಣ್ ಅಕಾಲಿಕ ಅಗಲಿಕೆಯು ಸಹ ಜನರಿಗೆ ಮರೆಯಲು ಸಾಧ್ಯವಾಗಿಲ್ಲ. ಜನರ ಒಲವು ಯಾರ ಕಡೆಗೆ ಎಂಬುದು ಅಭ್ಯರ್ಥಿಗಳ ಘೋಷಣೆಯ ನಂತರ ಗೊತ್ತಾಗಲಿದೆ.

WhatsApp Image 2023 09 02 at 8.42.26 PM
ಮೋಹನ್ ಜಿ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ ನಂಬಿಕೆಯ ಬಿಕ್ಕಟ್ಟು

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ....

ನಮ್ಮ‌ ಪ್ರಸ್ತಾಪಗಳನ್ನು ರಾಷ್ಟ್ರಪತಿ ನಿರಾಕರಿಸಿದ್ದು ಅಚ್ಚರಿ ಮೂಡಿಸಿದೆ, ಸಾಕ್ಷ್ಯ ಕೇಳಿದ್ದಾರೆ – ಕೊಡುತ್ತೇವೆ: ರಾಹುಲ್ ಗಾಂಧಿ

ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಿರುವ ಕುರಿತು ನಾವು ಎತ್ತಿರುವ ವಿಷಯವನ್ನು...

ಪ್ರತಿಭಟನೆ ಹಿನ್ನೆಲೆ ಮೆಟ್ರೋ ಬಂದ್; ‘ನೊಣ ಕೊಲ್ಲೋಕೆ ಸುತ್ತಿಗೆ ಬೇಡ’ – ಮಾರ್ಮಿಕವಾಗಿ ನುಡಿದ ಸುಪ್ರೀಂ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಜಂತರ್ ಮಂತರ್‌ನಲ್ಲಿ ಆಯೋಜಿಸಿರುವ ಪ್ರತಿಭಟನೆಯನ್ನು ತಡೆಯಲು...

ಸಿಜೆಪಿ ಪ್ರತಿಭಟನೆ ತಡೆಯಲು ಮೆಟ್ರೋ, ರೈಲು ಬಂದ್: ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಸಿಪಿಐಎಂ ನಾಯಕ ಎಂ ಎ ಬೇಬಿ

ಅಕ್ಟೋಬರ್ 10ರಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮತ್ತು ವಿವಿಧ ಪ್ರತಿಪಕ್ಷಗಳು...