ಚಿಕ್ಕಬಳ್ಳಾಪುರ ಲೋಕಸಭೆ | ಸುಮಲತಾ ಅಂಬರೀಷ್‌ಗೆ ಟಿಕೆಟ್ ಚರ್ಚೆ, ಸ್ಥಳೀಯ ನಾಯಕರಿಂದ ವಿರೋಧ

Date:

Advertisements

ಒಕ್ಕಲಿಗ ಮತಗಳೆ ನಿರ್ಣಾಯಕವಾಗಿರುವ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಸುಮಲತಾ ಅಂಬರೀಷ್‌ಗೆ ಟಿಕೆಟ್ ನೀಡಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿದ್ದು, ಸ್ಥಳೀಯ ನಾಯಕರನ್ನು ಕೆರಳುವಂತೆ ಮಾಡಿದೆ. ಈ ಹಿಂದಿನಿಂದ ಪಕ್ಷ ಸಂಘಟಿಸಿ ಪಕ್ಷಕ್ಕಾಗಿ ದುಡಿದ ಸ್ಥಳೀಯ ನಾಯಕರ ಅಸಮಾಧಾನಕ್ಕೂ ಕಾರಣವಾಗಿದೆ.

ಈ ಹಿಂದೆ ಮಂಡ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ವಿರುದ್ಧ ಶಕ್ತಿ ಪ್ರದರ್ಶಿಸಿ ಜಯಗಳಿಸಿದ್ದ ಮೊದಲ ಪಕ್ಷೇತರ ಮಹಿಳಾ ಸಂಸದೆ ಸುಮಲತಾ ಅಂಬರೀಷ್‌ ಅವರನ್ನು ದಿಲ್ಲಿಗೆ ಬುಲಾವ್ ಮಾಡಿರುವ ಬೆನ್ನಲ್ಲೇ ಸುಮಲತಾ ದಿಲ್ಲಿ ನಾಯಕರನ್ನು ಭೇಟಿ ಮಾಡಿದ್ದಾರೆ. ಬಹುತೇಕ ಸುಮಲತಾ ಅವರಿಗೆ ಬಿಜೆಪಿ ಟಿಕೆಟ್ ಖಚಿತ ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿವೆ.

ಒಕ್ಕಲಿಗ ಸಮುದಾಯದ ಪರಾಜಿತ ಅಭ್ಯರ್ಥಿ ಡಾ.ಕೆ.ಸುಧಾಕರ್ ಈ ಬಾರಿ ಟಿಕೆಟ್ ನನಗೆ ದೊರೆಯಲಿದೆ ಎಂದು ಈಗಾಗಲೇ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಕ್ಷೇತ್ರ ಪರ್ಯಟನೆಯನ್ನು ಶುರು ಮಾಡಿದ್ದಾರೆ. ಅದೇ ಸಮುದಾಯದ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಕೂಡ ತನ್ನ ಮಗನ ರಾಜಕೀಯ ಭವಿಷ್ಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಟೊಂಕಕಟ್ಟಿ ನಿಂತಿದ್ದಾರೆ.

Advertisements

ಮಾಜಿ ಸಚಿವ ಡಾ ಕೆ ಸುಧಾಕರ್‌ಗೆ ಪಕ್ಷದಲ್ಲಿ ಪ್ರಬಲ ಬೆಂಬಲ ಸಿಗದಾಗಿದೆ. ಅಧಿಕಾರದಲ್ಲಿದ್ದಾಗ ಸುಧಾಕರ್ ಅವರ ಹಿಟ್ಲರ್ ವರ್ತನೆ ಮುಖಂಡರ ಬೇಸರಕ್ಕೆ ಕಾರಣವಾಗಿದೆ. ಸ್ವಪಕ್ಷೀಯರಲ್ಲೆ ವಿರೋಧಿ ಅಲೆ ಎದ್ದಿದೆ. ಈ ಹಿಂದೆ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದಾಗ ಸುಮಾರು 25ಕೋಟಿ ರೂಪಾಯಿ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಹಗರಣ ನಡೆದಿದೆ ಎಂಬ ಆರೋಪಗಳು ಸಹ ಸುಧಾಕರ್ ಮೇಲಿವೆ. ರಾಜ್ಯಮಟ್ಟದ ಸುದ್ದಿಸಂಸ್ಥೆಗಳು ಸಚಿವರ ಹಗರಣ ಕುರಿತು ಸುದ್ದಿ ಬಿತ್ತರಿಸಿದ್ದವು.

ಇದೆಲ್ಲ ಗೊತ್ತಿದ್ದರೂ ಮತ ನೀಡುವಷ್ಟು ಜನ ದಡ್ಡರಲ್ಲ ಎಂಬುದನ್ನು ಮನಗಾಣಬೇಕಿದೆ. ಅದಲ್ಲದೆ ಸುಧಾಕರ್ ಮತ್ತು ಯಲಹಂಕ ಶಾಸಕ ಎಸ್.ಅರ್.ವಿಶ್ವನಾಥ್ ನಡುವಿನ ತಿಕ್ಕಾಟಕ್ಕೆ ಜನರು ರೋಸಿಹೋಗಿದ್ದಾರೆ. ಹಾಗಾಗಿಯೇ ವರಿಷ್ಠರು ಹೊರಗಿನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಇರಾದೆ ಹೊಂದಿದ್ದಾರೆ ಎಂದರು ತಪ್ಪಾಗಲಾರದು.

ಈಗಾಗಲೇ 20 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿರುವ ಬಿಜೆಪಿ ಅಳೆದು ತೂಗಿ ಅಭ್ಯರ್ಥಿ ಸೋಲು ಗೆಲುವಿನ ಲೆಕ್ಕಾಚಾರ ಹಾಕಿ ಟಿಕೆಟ್ ನೀಡಿದೆ. ಹಲವೆಡೆ ಬಿಜೆಪಿಯ ಬಹುನಿರೀಕ್ಷಿತ ಅಭ್ಯರ್ಥಿಗಳಿಗೆ ಟಿಕೆಟ್ ಕೈತಪ್ಪಿಸಿ ಅಚ್ಚರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 1.80ಲಕ್ಷ ಬಲಿಜ ಸಮುದಾಯದ ಮತಗಳನ್ನು ಹೊಂದಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಅದೇ ಸಮುದಾಯದ ಸುಮಲತಾ ಅವರನ್ನು ತಂದರೆ ಸಮುದಾಯದ ಬೆಂಬಲ ಸಿಗಬಹುದು. ಜತೆಗೆ ಒಕ್ಕಲಿಗ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳಬಹುದು ಎಂಬುದು ಬಿಜೆಪಿ ವರಿಷ್ಠರ ಗೆಲುವಿನ ಲೆಕ್ಕಾಚಾರ ಇದ್ದಂತಿದೆ.

ಆದರೆ, ಕಾಂಗ್ರೆಸ್ ನ ಪ್ರಬಲ ಆಕಾಂಕ್ಷಿ ರಕ್ಷಾ ರಾಮಯ್ಯ ಸಹ ಬಲಿಜ ಸಮುದಾಯದವರೆ ಆಗಿರುವುದರಿಂದ ಸಹಜವಾಗಿ ಸಮುದಾಯದ ಬೆಂಬಲ ಸಿಗಲಿದ್ದು, 8 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಇರುವ ಕಾರಣ ಎಲ್ಲಾ ಕ್ಷೇತ್ರಗಳಲ್ಲೂ ಪ್ರಬಲ ಬೆಂಬಲ ದೊರೆತರೆ ಗೆಲುವು ನಿಶ್ಚಿತ ಎಂದೇ ಹೇಳಬಹುದು.
ಆದರೆ, ಜಿಲ್ಲೆಯ ಜನರಲ್ಲಿ ಜಿಲ್ಲೆಯ ಅಭಿವೃದ್ಧಿ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ತರುವ, ರಾಜಕೀಯ ಮುಖಂಡರಿಗೆ, ಗುತ್ತಿಗೆದಾರರಿಗೆ ಉತ್ತಮ ಆರ್ಥಿಕ ಲಾಭ ಮಾಡಿಕೊಡುವ ಅಭ್ಯರ್ಥಿಯನ್ನು ನಿರೀಕ್ಷೆ ಇರುವುದು ಸಹಜ. ಆ ಲೆಕ್ಕಾಚಾರದಲ್ಲಿ ಹೊರಗಿನವರಾದ, ಕ್ಷೇತ್ರದ ಪರಿಚಯ ಇಲ್ಲದ ಸುಮಲತಾ ಅವರಿಗೆ ಕ್ಷೇತ್ರವನ್ನು ದಕ್ಕಿಸಿಕೊಳ್ಳುವುದು ತುಸು ಕಷ್ಟ ಆಗಬಹುದು.

ಬಿಜೆಪಿಯಲ್ಲಿ ಒಕ್ಕಲಿಗರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದು ಮುಂದುವರಿದರೆ ಸಮುದಾಯ ನಿಮ್ಮ ಬೆಂಬಲಕ್ಕೆ ನಿಲ್ಲುವುದಿಲ್ಲ. 28 ಕ್ಷೇತ್ರಗಳ ಪೈಕಿ ಮಿಕ್ಕುಳಿದಿರುವ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಾದರೂ ಸ್ಥಳಿಯವಾಗಿರುವ ಒಕ್ಕಲಿಗ ನಾಯಕರಿಗೆ ಟಿಕೆಟ್ ನೀಡಬೇಕು ಎಂದು ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಕೋನಪ್ಪ ರೆಡ್ಡಿ ಸಮುದಾಯದ ಒತ್ತಾಸೆಯನ್ನು ಈಗಾಗಲೇ ಬಿಚ್ಚಿಟ್ಟಿದ್ದಾರೆ. ಆದ್ದರಿಂದ ಸ್ಥಳೀಯರಿಗೆ ಆದ್ಯತೆ ನೀಡದಿದ್ದರೆ ಒಕ್ಕಲಿಗರ ವಿರೋಧ ಗ್ಯಾರಂಟಿ.

ಹೊರಗಿನವರಿಗೆ ನಾಯಕರ ವಿರೋಧ

ಸುಧಾಕರ್ ಅಥವಾ ನನ್ನ ಮಗ ಅಲೋಕ್ ಇಬ್ಬರಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಪರವಾಗಿಲ್ಲ. ಆದರೆ ಹೊರಗಿನವರಿಗೆ ಟಿಕೆಟ್ ಕೊಡಬೇಡಿ ಎಂದು ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಸುಮಲತಾ ಬರುವಿಕೆಗೆ ನೇರವಾಗಿಯೇ ವಿರೋಧ ವ್ಯಕ್ತಡಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡಿರುವ ಸುಧಾಕರ್ ಗೆ ಟಿಕೆಟ್ ಕೈ ತಪ್ಪಿದರೆ ಕಾಂಗ್ರೆಸ್ ನತ್ತ ಮುಖ ಮಾಡುವ ಸಾಧ್ಯತೆಗಳು ಇವೆ. ಇದರಿಂದ ಬಿಜೆಪಿ ಅಭ್ಯರ್ಥಿಗೆ ಕ್ಷೇತ್ರದ ಗೆಲುವು ಅಸಾಧ್ಯವಾಗಲಿದೆ.

?s=150&d=mp&r=g
ವಿಜಯ್ ಕುಮಾರ್ ಗಜ್ಜರಹಳ್ಳಿ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

ಬಿಹಾರದಲ್ಲಿ ಒಂದು ಮತವನ್ನೂ ಕದಿಯಲು ನಾವು ಬಿಡಲ್ಲ: ರಾಹುಲ್ ಗಾಂಧಿ

ಮತಗಳನ್ನು ಕದಿಯಲು ಚುನಾವಣಾ ಆಯೋಗ ಮತ್ತು ಬಿಜೆಪಿ ಪಾಲುದಾರಿಕೆ ಹೊಂದಿದೆ ಎಂದು...

Download Eedina App Android / iOS

X