ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಇಂದಿನ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ನೀಡಿದ್ದ 208 ರನ್‌ಗಳ ಬೃಹತ್ ಗುರಿಯನ್ನು ಕೊನೆಯ ಕ್ಷಣದಲ್ಲಿ ಎಡವಿದ ಸನ್‌ರೈಸರ್ಸ್ ಹೈದರಾಬಾದ್, ಕೊನೆಯ ಓವರ್‌ನಲ್ಲಿ 4 ರನ್‌ಗಳಿಂದ ಸೋಲೊಪ್ಪಿಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್, ಫಿಲ್ ಸಾಲ್ಟ್ ಅವರ ಅರ್ಧಶತಕ (54 ರನ್) ಹಾಗೂ ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟರ್ ಆಂಡ್ಯ್ರೂ ರಸ್ಸೆಲ್ ಅವರ ಆಟದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 208 ರನ್ ದಾಖಲಿಸಿತ್ತು.
Harshit Rana conceded 1,W,1,W,0 in the last 5 balls against Klaasen, Shahbaz, Jansen and Cummins. 🤯
– The nerves of steel under pressure! 🫡👏 pic.twitter.com/SQwsDMueSZ
— Mufaddal Vohra (@mufaddal_vohra) March 23, 2024
ಈ ಗುರಿಯನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್, ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ 5 ರನ್‌ಗಳ ಅವಶ್ಯಕತೆ ಇದ್ದಾಗ ಸೋಲೊಪ್ಪಿಕೊಂಡಿದೆ. ಕೆಕೆಆರ್ ಪರ ಕೊನೆಯ ಓವರ್ ಎಸೆದ ಹರ್ಷಿತ್ ರಾಣಾ, ತಮ್ಮ ತಂಡಕ್ಕೆ ರೋಚಕ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಆ ಮೂಲಕ ತವರಿನಲ್ಲಿ ಹೀರೋ ಆಗಿದ್ದಾರೆ.
Starting the season with a win at home! ✅ pic.twitter.com/1cgaWWPrvH
— KolkataKnightRiders (@KKRiders) March 23, 2024
ಸನ್‌ರೈಸರ್ಸ್ ಹೈದರಾಬಾದ್‌ಗೆ ಕೊನೆಯ ಓವರ್‌ನಲ್ಲಿ ಕೇವಲ 13 ರನ್ ಬೇಕಾಗಿತ್ತು. ಆದರೆ ಹರ್ಷಿತ್ ರಾಣಾ ಕೇವಲ 8 ರನ್ ನೀಡಿ, ಎರಡು ವಿಕೆಟ್ ಪಡೆಯುವಲ್ಲಿ ಸಫಲರಾಗುವ ಮೂಲಕ ತಂಡಕ್ಕೆ ರೋಚಕ ಜಯ ತಂದುಕೊಟ್ಟರು. ಉತ್ತಮ ಬೌಲಿಂಗ್ ನಡೆಸಿದ ಹರ್ಷಿತ್ ರಾಣಾ, 4 ಓವರ್ ಎಸೆದು 33 ರನ್ ನೀಡಿ, ಮೂರು ವಿಕೆಟ್ ಪಡೆದು ಮಿಂಚಿದರು.
Plot Twist 🔁
Suyash Sharma’s 𝙎𝙥𝙚𝙣𝙙𝙞𝙙 𝙍𝙪𝙣𝙣𝙞𝙣𝙜 𝘾𝙖𝙩𝙘𝙝 dismisses Heinrich Klaasen 😮
Scorecard ▶️https://t.co/xjNjyPa8V4 #TATAIPL | #KKRvSRH pic.twitter.com/IX16oecZkd
— IndianPremierLeague (@IPL) March 23, 2024
ಸನ್‌ರೈಸರ್ಸ್ ಹೈದರಾಬಾದ್ ಪರ ಹೆನ್ರಿ ಕ್ಲಾಸೆನ್ ಕೊನೆಯವರೆಗೂ ಹೋರಾಟ ನಡೆಸಿದರೂ ಕೂಡ ‘ಲಕ್’ ಅವರ ಕೈ ಹಿಡಿಯಲಿಲ್ಲ. ಕ್ಲಾಸೆನ್ 29 ಎಸೆತಗಳಲ್ಲಿ 63 ರನ್(8 ಸಿಕ್ಸ್) ಗಳಿಸಿ ಮಿಂಚಿದರು.
