ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಜಾರಿ ನಿರ್ದೇಶನಾಲಯ (ಇಡಿ) ವಿಪಕ್ಷ ನಾಯಕರ ಮನೆ, ಕಚೇರಿಗಳ ಮೇಲೆ ನಡೆಸುತ್ತಿರುವ ದಾಳಿ ಹೆಚ್ಚಾಗುತ್ತಿದೆ. ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿಪಕ್ಷಗಳು ಆರೋಪಿಸಿದೆ. ಈ ನಡುವೆ “ಇಡಿ ಈಗ ಜಪ್ತಿ ಮಾಡಿದ ಹಣವನ್ನು ಹೊಸ ಸರ್ಕಾರ ಬಂದಾಗ ಬಡವರಿಗೆ ನೀಡುತ್ತೇವೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಕೃಷ್ಣನಗರದ ಬಿಜೆಪಿ ಅಭ್ಯರ್ಥಿ ಅಮೃತಾ ರಾಯ್ ಜೊತೆ ದೂರವಾಣಿ ಸಂಭಾಷಣೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, “ಇಡಿ ವಶಕ್ಕೆ ಪಡೆದ 3,000 ಕೋಟಿ ರೂಪಾಯಿಯನ್ನು ಬಡವರಿಗೆ ಯೋಜನೆಗಳ ಮೂಲಕ ಹಂಚಲು ಕಾನೂನು ಆಯ್ಕೆಯನ್ನು ಅಧ್ಯಯನ ಮಾಡುತ್ತಿರುವುದಾಗಿ ಜನರಿಗೆ ತಿಳಿಸಿ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಬಿಜೆಪಿಯ ಲೋಕಸಭೆ ಟಿಕೆಟ್ ತಿರಸ್ಕರಿಸಿದ್ದಕ್ಕೆ ಇಡಿ ದಾಳಿ; ಕಾಂಗ್ರೆಸ್ ಶಾಸಕಿ ಆರೋಪ
ಕೃಷ್ಣನಗರ ಕ್ಷೇತ್ರದಲ್ಲಿ ಟಿಎಂಸಿ ನಾಯಕಿ ಮತ್ತು ಮಾಜಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಅಮೃತಾ ರಾಯ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಅಮೃತಾ ರಾಯ್ ಜೊತೆ ದೂರವಾಣಿ ಕರೆಯಲ್ಲಿ ಮಾತನಾಡಿದ ಪ್ರಧಾನಿ ಇಡಿ ವಶಕ್ಕೆ ಪಡೆದ ಹಣವನ್ನು ಬಡ ಜನರಿಗೆ ತಲುಪಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ವಿಪಕ್ಷಗಳು ನಿಮ್ಮ ಬಗ್ಗೆ ಏನು ಹೇಳಿದರೂ ಅದರಿಂದ ವಿಶ್ವಾಸ ಕಳೆದುಕೊಳ್ಳಬೇಡಿ. ಪ್ರಸ್ತುತ ರಾಜಕಾರಣವು ಎರಡು ಭಾಗಗಳಾಗಿ ವಿಂಗಡಿಸಬಹುದು. ಒಂದು ಭ್ರಷ್ಟಾಚಾರವನ್ನು ಬುಡಸಮೇತ ಕೀಳಲು ಬದ್ಧರಾಗಿರುವ ಬಿಜೆಪಿ ನೇತೃತ್ವದ ರಾಜಕಾರಣ, ಮತ್ತೊಂದು ಭ್ರಷ್ಟಾಚಾರಿಗಳ ಪರವಾಗಿ ನಿಲ್ಲುವ ಇಂಡಿ ಮೈತ್ರಿಕೂಟ ಮತ್ತು ಟಿಎಂಸಿ ರಾಜಕಾರಣ” ಎಂದು ಪ್ರಧಾನಿ ಮೋದಿ ಹೇಳಿದರು.
ಸ್ವಿಸ್ ಬ್ಯಾಂಕ್ ನಿಂದ ಕಪ್ಪು ಹಣ ತಂದು ದೇಶದ ಪ್ರತಿಯೊಬ್ಬರ ಖಾತೆಗೂ ₹ 15 ಲಕ್ಷ ಜಮಾ ಮಾಡಿದಂತೆ…?
ಇಡಿ ಜಪ್ತಿ ಮಾಡಿದ ಹಣವನ್ನೂ ಮತ್ತೆ ಅಧಿಕಾರಕ್ಕೆ ಬಂದೊಡನೆ ದೇಶದ ಜನರ ಖಾತೆಗೆ ಮೋದಿ ಜಮಾ ಮಾಡುತ್ತಾರಂತೆ !!!
😂 😄 😂