ಧಾರವಾಡ | ಮಾ.28ರಂದು ಹುಬ್ಬಳ್ಳಿಯಲ್ಲಿ ಹಲಗಿ ಹಬ್ಬ ಆಚರಣೆ

Date:

ಹೋಳಿ ಹುಣ್ಣಿಮೆಯ ಪ್ರಯುಕ್ತ ಹುಬ್ಬಳ್ಳಿಯಲ್ಲಿ ಪ್ರತಿವರ್ಷದಂತೆ ಹಲಗಿ ಹಬ್ಬ ಆಚರಣೆಯ ಪೂರ್ವಭಾವಿಯಾಗಿ ಹುಬ್ಬಳ್ಳಿ ಮೂರುಸಾವಿರಮಠದಲ್ಲಿ ಬುಧವಾರ (ಮಾ.27) ಬೆಳಿಗ್ಗೆ ಡಾ.ಗುಈರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ನೇತೃತ್ವದಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ್ ತೆಂಗಿನಕಾಯಿ ಪತ್ರಿಕಾಗೋಷ್ಠಿನಡೆಸಿದರು.

ಹಲಗಿ ಹಬ್ಬ ಅರ್ಥಾತ್ ಜಗ್ಗಲಗಿ ಹಬ್ಬವನ್ನು ಗುರುವಾರ ಮದ್ಯಾಹ್ನ 3 ಗಂಟೆಯಿಂದ ಮೂರುಸಾವಿರ ಮಠದಿಂದ ಪ್ರಾರಂಭವಾಗಿ ದಾಜಿಬಾನಪೇಟ್, ಕೊಪ್ಪಿಕರ್ ರಸ್ತೆ ಮಾರ್ಗವಾಗಿ ಚಲಿಸಿ ಹುಬ್ಬಳ್ಳಿಯ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ನೆರವೇರಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೂರುಸಾವಿರ ಮಠದ ಡಾ. ಗುರುಸಿದ್ದ ರಾಜಯೋಗಿಂದ್ರ ಸ್ವಾಮಿಜಿ ಮಾತನಾಡಿ, ಹೋಳಿ ಹಬ್ಬ ಪೌರಾಣಿಕ ಇತಿಹಾಸವನ್ನು ನೆನಪಿಸುವ ವಿಶೇಷ ಹಬ್ಬವಾಗಿದೆ. ಹೋಳಿ ನಮ್ಮ ಭಾರತ ದೇಶದಲ್ಲಿ ಶ್ರೇಷ್ಠವಾದ ಹಬ್ಬವಾಗಿದೆ. ಹೋಳಿ ಹಬ್ಬವು ದೇಶದ ಭಾವೈಕ್ಯತೆಗೆ ಪೂರಕವಾಗಿದೆ. ಮತ್ತು ಹಲಗಿ ಹಬ್ಬದಲ್ಲಿ ಎಲ್ಲ ಜಾನಪದ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವಾಗುತ್ತಿದೆ. ಕಳೆದ ಹದಿನೈದು ವರ್ಷಗಳಿಂದ ಈ ಜಗ್ಗಲಗಿ ಹಬ್ಬದ ಆಚರಣೆ ನಡೆದಿದೆ. ಈಗಾಗಿ ಈ ಸಲವೂ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮಾದ್ಯಮದ ಮೂಲಕ ವಿನಂತಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮಹೇಶ್ ತೆಂಗಿನಕಾಯಿ ಮಾತನಾಡಿ, ನಶಿಸಿ ಹೋಗುತ್ತಿರುವ ಹಿಂದೂ ಸಂಸ್ಕೃತಿ ಹಬ್ಬವನ್ನು ಮುಂದಿನ‌ ಪೀಳಿಗೆಗೂ ಉಳಿಸುವ ಕೆಲಸವಾಗಬೇಕು. ಸಾಂಪ್ರಾದಯಿಕ ಮೆರಗನ್ನು ತಂದುಕೊಡುವ ಕೆಲಸ ಮತ್ತು ಜಗ್ಗಲಗಿ ಹಬ್ಬವನ್ನು ಇಡೀ ರಾಜ್ಯಕ್ಕೆ ಪ್ರಸ್ತುತಪಡಿಸುವ ಕಾರ್ಯವಾಗಬೇಕಿದೆ. ಮೂರುಸಾವಿರಮಠ ಸ್ವಾಮಿಜಿ ನೇತೃತ್ವದಲ್ಲಿ ಈ ಹಲಗಿ ಹಬ್ಬ ನೆರವೇರುತ್ತದೆ. ಈ ಆಚರಣೆಯ ಮೂಲಕ ಎಲ್ಲ ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸವಾಗುತ್ತಿದೆ. ಮೈಸೂರಿನಲ್ಲಿ ನಾಡಹಬ್ಬ ದಸರಾ ಮಾಡುವಂತೆ ಜಗ್ಗಲಗಿ ಹಬ್ಬವನ್ನೂ ಅನ್ಯ ರಾಜ್ಯದಲ್ಲೂ ಆಚರಿಸುವ ರೂಢಿಗೆ ತರಬೇಕು ಎಂದರು.

ವಿವಿಧ ಜಿಲ್ಲೆಗಳಿಂದ ಸುಮಾರು 47 ಕ್ಕೂ ಹೆಚ್ಚು ಜಗ್ಗಲಗೆ ತಂಡಗಳು ಬರಲಿದ್ದಾವೆ. ಮತ್ತು ಜಗ್ಗಲಗಿ ಮೆರವಣಿಯಲ್ಲಿ ನೀರು, ಮಜ್ಜಿಗೆ ವ್ಯವಸ್ಥೆ ಇರುತ್ತದೆ. ಪುರುಷರಿಗಷ್ಟೇ ಅಲ್ಲದೆ ಈ ಜಗ್ಗಲಗೆ ಹಬ್ಬದಲ್ಲಿ ಐದು ಮಹಿಳಾ ತಂಡಗಳು ಭಾಗವಹಿಸುತ್ತವೆ. ಒಟ್ಟಾರೆಯಾಗಿ ಹಿಂದೂ ಪರಂಪರೆಯನ್ನು ಉಳಿಸುವ ಉದ್ದೇಶವಾಗಿದೆ ಎಂದು ತಿಳಿಸಿದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಸ ಸುರಿಯುವ ಜಾಗವಾಗಿ ಮಾರ್ಪಟ್ಟ ಬೆಂಗಳೂರಿನ ಮೇಲ್ಸೇತುವೆಗಳು!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ವಾಹನ ಸವಾರರಿಗೆ ಸಂಚಾರ ದಟ್ಟಣೆ ತಲೆನೋವಾಗಿ ಪರಿಣಮಿಸಿದೆ....

ರಾಯಚೂರು | ಅಬಕಾರಿ ಇಲಾಖೆ ದಾಳಿ; ₹500 ಮುಖಬೆಲೆಯ ನೋಟಿನ 62 ಬಂಡಲ್ ಪತ್ತೆ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೌಳಿಗಲ್ಲಿಯ ಗೌಳಿಯೊಬ್ಬರ ಮನೆಯಲ್ಲಿ ಗೋಣಿ ಚೀಲದ...

ಬೆಂಗಳೂರು | ಆ್ಯಂಬುಲೆನ್ಸ್ ಚಾಲಕನ ಅಚಾತುರ್ಯ: ಸರಣಿ ಅಪಘಾತ

ಆ್ಯಂಬುಲೆನ್ಸ್ ಚಾಲಕನ ಅಚಾತುರ್ಯದಿಂದ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡದಹಳ್ಳಿ...

ಕೋಲಾರ | ಇವಿಎಂ ಮೆಷಿನ್ ಸಾಗಿಸುತ್ತಿದ್ದ ವಾಹನದ ಟೈರ್ ಬ್ಲಾಸ್ಟ್: ಪೊಲೀಸ್ ಬಂದೋಬಸ್ತ್

ಮುಳಬಾಗಿಲಿನಿಂದ ಕೋಲಾರದ ಸ್ಟ್ರಾಂಗ್‌ ರೂಮ್‌ಗೆ ಇವಿಎಂ ಮೆಷಿನ್‌ಗಳನ್ನು ಸಾಗಾಟ ಮಾಡುತ್ತಿದ್ದ ಕ್ಯಾಂಟರ್...