ಮುಂಬೈ ತಂಡದ ವಿರುದ್ಧದ ಹಿಂದಿನ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಇಂದಿನ ಐಪಿಎಲ್ ಆವೃತ್ತಿಯ 12ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ 163 ರನ್‌ಗಳ ಸಾಧಾರಣ ಗುರಿ ನೀಡಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 17ನೇ ಆವೃತ್ತಿಯ 12ನೇ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡರು.
ಎರಡು ಬೌಂಡರಿಗಳೊಂದಿಗೆ 16 ರನ್ ಬಾರಿಸಿದ್ದ ಮಾಯಾಂಕ್ ಅಗರವಾಲ್ 5ನೇ ಓವರ್‌ನಲ್ಲಿ ಒಮರ್‌ಜಾಯಿ ಬೌಲಿಂಗ್‌ನಲ್ಲಿ ಔಟಾದರು. ಹಿಂದಿನ ಪಂದ್ಯದಲ್ಲಿ ಭರ್ಜರಿ ಆಟವಾಡಿದ ಟ್ರಾವಿಸ್ ಹೆಡ್ 7ನೇ ಓವರ್‌ನಲ್ಲಿ 3 ರನ್ ಗಳಿಸಿ 19 ರನ್ ಗಳಿಸಿ ಪೆವಿಲಿಯನ್‌ಗೆ ತೆರಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣೆ – ಐಪಿಎಲ್ ಕ್ರಿಕೆಟ್‌ನಲ್ಲಿ ಅಪ್ಪ-ಮಗನ ಆಟ
ಕಳೆದ ಪಂದ್ಯದಲ್ಲಿ ಸ್ಪೋಟಕ ಆಟವಾಡಿದ್ದ ಅಭಿಷೇಕ್ ಶರ್ಮಾ ಇಂದು ಕೂಡ ಬ್ಯಾಟ್ ಬೀಸುತ್ತಾ ಲಯ ಕಂಡುಕೊಳ್ಳಲು ಶುರು ಮಾಡಿದರು. ಆದರೆ 10ನೇ ಓವರ್‌ನ ಕಡೆಯ ಚೆಂಡಿನಲ್ಲಿ ಮೋಹಿತ್ ಶರ್ಮಾ ಮಾಡಿದ ಬೌಲಿಂಗ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್ ಗಿಲ್‌ಗೆ ಕ್ಯಾಚ್ ನೀಡಿ ಔಟಾದರು. ಅಭಿಷೇಕ್‌ನ 20 ಎಸೆತಗಳ 29 ರನ್‌ಗಳ ಆಟದಲ್ಲಿ 2 ಬೌಂಡರಿ, ಎರಡು ಸಿಕ್ಸರ್‌ಗಳಿದ್ದವು.
ಮುಂಬೈ ತಂಡದ ವಿರುದ್ಧ ಸಿಕ್ಸರ್‌ಗಳ ಸುರಿಮಳೆ ಸುರಿದಿದ್ದ ಹೆನ್‌ರಿಚ್ ಕ್ಲಾಸೆನ್ ಸ್ಪೋಟಕವಾಗಿ ಆಟವಾಡಲು ಶುರು ಮಾಡಿದರು. ಆದರೆ 14 ನೇ ಓವರ್‌ನಲ್ಲಿ ರಶೀದ್ ಖಾನ್ ಬೌಲಿಂಗ್ ದಾಳಿಗೆ ಸಿಲುಕಿ 24(13 ಎಸೆತ, 2 ಸಿಕ್ಸರ್, 1 ಬೌಂಡರಿ) ರನ್‌ಗಳಿಗೆ ಬೌಲ್ಡ್ ಆದರು.
ಮಾರ್ಕಾಮ್ 17 ರನ್ ಗಳಿಸಿ ಉಮೇಶ್ ಯಾದವ್ ಬೌಲಿಂಗ್‌ನಲ್ಲಿ ಔಟಾದರು. ಅಂತಿಮವಾಗಿ ಕೊನೆಯಲ್ಲಿ ಬ್ಯಾಟ್ ಬೀಸಿದ ಅಬ್ದುಲ್ ಸಮದ್(29) ಹಾಗೂ ಶಹಬಾಜ್ ಅಹಮದ್(22) ಅವರ ಆಟದೊಂದಿಗೆ ಎಸ್‌ಆರ್‌ಹೆಚ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು.
ಗುಜರಾತ್ ಪರ ಮೋಹಿತ್ ಶರ್ಮಾ 25/3,ಒಮರ್ಜಾಯ್,ಉಮೇಶ್ ಯಾದವ್,ರಶೀದ್ ಖಾನ್, ನೂರ್ ಅಹ್ಮದ್ ಹಾಗೂ ತಲಾ ಒಂದೊಂದು ವಿಕೆಟ್ ಕಬಳಿಸಿದರು.
