ಐಪಿಎಲ್ 2024 | ಗುಜರಾತ್‌ಗೆ 163 ರನ್ ಗುರಿ ನೀಡಿದ ಎಸ್ಆರ್‌ಹೆಚ್

Date:

ಮುಂಬೈ ತಂಡದ ವಿರುದ್ಧದ ಹಿಂದಿನ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸಿದ್ದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡ ಇಂದಿನ ಐಪಿಎಲ್‌ ಆವೃತ್ತಿಯ 12ನೇ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ತಂಡದ ವಿರುದ್ಧ 163 ರನ್‌ಗಳ ಸಾಧಾರಣ ಗುರಿ ನೀಡಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್‌ 17ನೇ ಆವೃತ್ತಿಯ 12ನೇ ಪಂದ್ಯದಲ್ಲಿ ಟಾಸ್‌ ಗೆದ್ದ ಹೈದರಾಬಾದ್‌ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಬ್ಯಾಟಿಂಗ್‌ ಆಯ್ದುಕೊಂಡರು.

ಎರಡು ಬೌಂಡರಿಗಳೊಂದಿಗೆ 16 ರನ್‌ ಬಾರಿಸಿದ್ದ ಮಾಯಾಂಕ್ ಅಗರವಾಲ್ 5ನೇ ಓವರ್‌ನಲ್ಲಿ ಒಮರ್‌ಜಾಯಿ ಬೌಲಿಂಗ್‌ನಲ್ಲಿ ಔಟಾದರು. ಹಿಂದಿನ ಪಂದ್ಯದಲ್ಲಿ ಭರ್ಜರಿ ಆಟವಾಡಿದ ಟ್ರಾವಿಸ್ ಹೆಡ್ 7ನೇ ಓವರ್‌ನಲ್ಲಿ 3 ರನ್‌ ಗಳಿಸಿ 19 ರನ್‌ ಗಳಿಸಿ ಪೆವಿಲಿಯನ್‌ಗೆ ತೆರಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣೆ – ಐಪಿಎಲ್‌ ಕ್ರಿಕೆಟ್‌ನಲ್ಲಿ ಅಪ್ಪ-ಮಗನ ಆಟ

ಕಳೆದ ಪಂದ್ಯದಲ್ಲಿ ಸ್ಪೋಟಕ ಆಟವಾಡಿದ್ದ ಅಭಿಷೇಕ್‌ ಶರ್ಮಾ ಇಂದು ಕೂಡ ಬ್ಯಾಟ್ ಬೀಸುತ್ತಾ ಲಯ ಕಂಡುಕೊಳ್ಳಲು ಶುರು ಮಾಡಿದರು. ಆದರೆ 10ನೇ ಓವರ್‌ನ ಕಡೆಯ ಚೆಂಡಿನಲ್ಲಿ ಮೋಹಿತ್‌ ಶರ್ಮಾ ಮಾಡಿದ ಬೌಲಿಂಗ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ತಂಡದ ನಾಯಕ ಶುಭಮನ್‌ ಗಿಲ್‌ಗೆ ಕ್ಯಾಚ್‌ ನೀಡಿ ಔಟಾದರು. ಅಭಿಷೇಕ್‌ನ 20 ಎಸೆತಗಳ 29 ರನ್‌ಗಳ ಆಟದಲ್ಲಿ 2 ಬೌಂಡರಿ, ಎರಡು ಸಿಕ್ಸರ್‌ಗಳಿದ್ದವು.

ಮುಂಬೈ ತಂಡದ ವಿರುದ್ಧ ಸಿಕ್ಸರ್‌ಗಳ ಸುರಿಮಳೆ ಸುರಿದಿದ್ದ ಹೆನ್‌ರಿಚ್‌ ಕ್ಲಾಸೆನ್ ಸ್ಪೋಟಕವಾಗಿ ಆಟವಾಡಲು ಶುರು ಮಾಡಿದರು. ಆದರೆ 14 ನೇ ಓವರ್‌ನಲ್ಲಿ ರಶೀದ್‌ ಖಾನ್‌ ಬೌಲಿಂಗ್‌ ದಾಳಿಗೆ ಸಿಲುಕಿ 24(13 ಎಸೆತ, 2 ಸಿಕ್ಸರ್, 1 ಬೌಂಡರಿ) ರನ್‌ಗಳಿಗೆ ಬೌಲ್ಡ್‌ ಆದರು.

ಮಾರ್ಕಾಮ್‌ 17 ರನ್‌ ಗಳಿಸಿ ಉಮೇಶ್ ಯಾದವ್‌ ಬೌಲಿಂಗ್‌ನಲ್ಲಿ ಔಟಾದರು. ಅಂತಿಮವಾಗಿ ಕೊನೆಯಲ್ಲಿ ಬ್ಯಾಟ್‌ ಬೀಸಿದ ಅಬ್ದುಲ್‌ ಸಮದ್(29) ಹಾಗೂ ಶಹಬಾಜ್‌ ಅಹಮದ್‌(22) ಅವರ ಆಟದೊಂದಿಗೆ ಎಸ್‌ಆರ್‌ಹೆಚ್‌ ತಂಡ 20 ಓವರ್‌ಗಳಲ್ಲಿ  8 ವಿಕೆಟ್ ನಷ್ಟಕ್ಕೆ 162 ರನ್‌ ಗಳಿಸಿತು.

ಗುಜರಾತ್‌ ಪರ ಮೋಹಿತ್ ಶರ್ಮಾ  25/3,ಒಮರ್ಜಾಯ್,ಉಮೇಶ್ ಯಾದವ್,ರಶೀದ್ ಖಾನ್, ನೂರ್‌ ಅಹ್ಮದ್ ಹಾಗೂ ತಲಾ ಒಂದೊಂದು ವಿಕೆಟ್ ಕಬಳಿಸಿದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಪಿಎಲ್ | ‘ಪವರ್ ಪ್ಲೇ’ಯಲ್ಲಿ 125 ರನ್ ಚಚ್ಚಿದ ಹೈದರಾಬಾದ್: T20 ಇತಿಹಾಸದಲ್ಲೇ ಹೊಸ ದಾಖಲೆ

ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್‌)ನ...

ಮಹಿಳೆಯರ ಕುಸ್ತಿ | ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿಕೊಂಡ ವಿನೇಶ್ ಫೋಗಟ್

ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ಕಿರುಕುಳದ ಆರೋಪ ಹೊತ್ತಿದ್ದ ಬಿಜೆಪಿ ಸಂಸದ...

ಪ್ಯಾರಿಸ್ ಒಲಿಂಪಿಕ್ಸ್‌ | ಮಹಿಳೆಯರ ಕುಸ್ತಿ: ಅರ್ಹತೆಯ ಹಾದಿಯಲ್ಲಿ ವಿನೇಶ್ ಪೊಗಾಟ್, ರೀತಿಕಾ, ಅಂಶು ಮಲಿಕ್, ಮಾನ್ಸಿ

ಮುಂದಿನ ಜುಲೈ 26ರಿಂದ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಕಿರ್ಗಿಸ್ತಾನದ ಬಿಷ್ಕೆಕ್‌ನಲ್ಲಿ ಏಷ್ಯನ್...

ಐಪಿಎಲ್ | ಕೆ ಎಲ್ ರಾಹುಲ್-ಡಿ ಕಾಕ್ ಶತಕದ ಜೊತೆಯಾಟ: ಚೆನ್ನೈ ವಿರುದ್ಧ ಲಕ್ನೋಗೆ ಭರ್ಜರಿ ಗೆಲುವು

ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ನಡೆದ...