ಇಂದು ಮುಂಬೈನ ವಾಂಖೆಡೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಐಪಿಎಲ್‌ನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡ ಭರ್ಜರಿ ಜಯ ದಾಖಲಿಸಿದೆ. ಗೆಲ್ಲಲು ಕೇವಲ 126 ರನ್‌ಗಳ ಗುರಿ ಪಡೆದಿದ್ದ ರಾಜಸ್ಥಾನ, 15.3 ಓವರ್‌ಗಳಲ್ಲಿ ಗುರಿಯನ್ನು ತಲುಪಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ನೂತನ ನಾಯಕ ಹಾರ್ದಿಕ್ ಪಾಂಡ್ಯಾ ನೇತೃತ್ವ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 125 ರನ್ ಗಳಿಸಿತ್ತು. ಇಂದಿನ ಸೋಲಿನೊಂದಿಗೆ ಈವರೆಗೆ ಆಡಿರುವ ಮೂರೂ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಸೋತಿದೆ. ಆ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಸತತ ಮೂರು ಪಂದ್ಯಗಳನ್ನು ಗೆದ್ದಿರುವ ರಾಜಸ್ಥಾನ ರಾಯಲ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.
THE ARRIVAL OF RIYAN PARAG:
43 (29) Vs LSG.
84* (45) Vs DC.
54* (39) Vs MI.– Parag has finally cracked the IPL, what a start to the season. 🔥 pic.twitter.com/pIh7D447gn
— Mufaddal Vohra (@mufaddal_vohra) April 1, 2024
ಸತತ ಮೊದಲ ಎರಡು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್, ಇಂದು ತವರಲ್ಲಿ ಹೇಗಾದ್ರೂ ಮಾಡಿ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿತ್ತು. ಆದರೆ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ದೊಡ್ಡ ಸ್ಕೋರ್ ಕಲೆ ಹಾಕುವ ಭರದಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಮುಂಬೈ ಇಂಡಿಯನ್ಸ್ ಪರ ಓಪನರ್ ಆಗಿ ಬಂದ ರೋಹಿತ್ ಶರ್ಮಾ ಟ್ರೆಂಟ್ ಬೌಲ್ಟ್ ಮೊದಲನೇ ಓವರ್ನಲ್ಲೇ ಫಸ್ಟ್ ಬಾಲ್ಗೆ ಕ್ಯಾಚ್ ನೀಡಿ ಡಕೌಟ್ ಆದರು. ನಮನ್, ಬ್ರೆವೀಸ್ ಕೂಡ ಡಕೌಟ್ ಆಗಿ, ಔಟಾದರು. ಇಶಾನ್ ಕಿಶನ್ 1 ಸಿಕ್ಸರ್, 2 ಫೋರ್ ಸಮೇತ 16 ರನ್ ಸಿಡಿಸಿ ಕ್ಯಾಚ್ ಕೊಟ್ಟರು.
𝙄𝙣 𝙎𝙩𝙮𝙡𝙚 😎
Riyan Parag’s innings help @rajasthanroyals reach 🔝 of the table 💪#RR are the 2️⃣nd team to win an away fixture this season 👏👏
Scorecard ▶️ https://t.co/XL2RWMFLbE#TATAIPL | #MIvRR pic.twitter.com/ZsVk9rvam1
— IndianPremierLeague (@IPL) April 1, 2024
ಒಂದಷ್ಟು ಓವರ್ಗಳು ಕ್ರೀಸ್ನಲ್ಲಿ ನಿಂತು ಆಡಿದ ತಿಲಕ್ ವರ್ಮಾ 2 ಫೋರ್ ಸಮೇತ 32 ರನ್ ಗಳಿಸಿದ್ದರು. ಬಳಿಕ ನಾಯಕ ಹಾರ್ದಿಕ್ ಪಾಂಡ್ಯ 6 ಫೋರ್ ಸಮೇತ 34 ರನ್ ಬಾರಿಸಿದ್ದರು. ಟೀಮ್ ಡೇವಿಡ್ 17 ರನ್ ಗಳಿಸಲಷ್ಟೇ ಶಕ್ತವಾದರು.
Hardik’s Mumbai start with three consecutive losses ❌ pic.twitter.com/H53tnrlRvc
— ESPNcricinfo (@ESPNcricinfo) April 1, 2024
ರಾಜಸ್ಥಾನದ ಸಂಘಟಿತ ಬೌಲಿಂಗ್ ನಡುವೆ ವಿಫಲರಾದ ಮುಂಬೈ ಬ್ಯಾಟರ್‌ಗಳು, 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 125 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ, ರಿಯಾನ್ ಪರಾಗ್ ಅವರ ಭರ್ಜರಿ ಅರ್ಧಶಕದ ನೆರವಿನಿಂದ 15.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿಯನ್ನು ತಲುಪಿತು.
ರಿಯಾನ್ ಪರಾಗ್ 39 ಎಸೆತಗಳಲ್ಲಿ 54 ರನ್ ಗಳಿಸಿ ಮಿಂಚಿದರು. ಜೈಸ್ವಾಲ್ 10, ಸಂಜು ಸ್ಯಾಮ್ಸನ್ 12, ಜೋಸ್ ಬಟ್ಲರ್ 13 ರನ್, ರವಿಚಂದ್ರನ್ ಅಶ್ವಿನ್ 16 ರನ್ ಗಳಿಸಿದರು.
IPL 2024 Points Table.
– Rajasthan Royals the only undefeated team.
– MI the only team to not register a win. pic.twitter.com/pz0b2GJOuA— Mufaddal Vohra (@mufaddal_vohra) April 1, 2024
ಮುಂಬೈ ಪರ ಆಕಾಶ್ ಮದ್ವಾಲ್ 3 ವಿಕೆಟ್ ಪಡೆದರೆ, ಮಪಾಕಾ 1 ವಿಕೆಟ್ ಪಡೆದರು. ರಾಜಸ್ಥಾನ ಪರ ಬೌಲಿಂಗ್‌ನಲ್ಲಿ ಚಾಹಲ್ ಹಾಗೂ ಟ್ರೆಂಟ್ ಬೌಲ್ಟ್ 3 ವಿಕೆಟ್ ಪಡೆದರೆ, ಬರ್ಗರ್ 2 ಹಾಗೂ ಆವೇಶ್ ಖಾನ್ 1 ವಿಕೆಟ್ ಪಡೆದಿದ್ದರು.
