ಕಲಬುರಗಿ | ಆರ್‌ಎಸ್‌ಎಸ್‌ ಕೇಂದ್ರವಾಗುತ್ತಿರುವ ಕೇಂದ್ರೀಯ ವಿವಿ ಚೇತನ್‌ ಅಹಿಂಸಾ ಕಿಡಿ

Date:

Advertisements

ವಿಶ್ವವಿದ್ಯಾಲಯಗಳ ಅಧಿನಿಯಮದ ಪ್ರಕಾರ ಕಾನೂನಾತ್ಮಕವಾಗಿ ವಿದ್ಯಾರ್ಥಿಗಳಿಗೆ ಸಿಗಬೇಕಾದ ಮೂಲ ಸೌಕರ್ಯವನ್ನು ಒದಗಿಸದೆ ವಿದ್ಯಾರ್ಥಿಗಳಿಂದ ಹಣ ಸೂಲಿಗೆ ಮಾಡುವ ಮತ್ತು ಶಾಂತಿ ಕದಡುವ ಕೆಲಸ ಮಾಡುತ್ತಿದೆ. ಯುನಿವೆರಸಿಟಿ ಗ್ಯಾಂಟ್ ಕಮೀಷನ್ ಪ್ರಕಾರ ವಿಶ್ವವಿದ್ಯಾಲಯಗಳು ಸಂವಿಧಾನದ ಆಶಯದ ಮೇಲೆ ನಡೆಯಬೇಕೆ ಹೊರತು ಯಾವುದೇ ಧರ್ಮ ಅಥವಾ ಆಚರಣೆಯ ಕೇಂದ್ರವಾಗಬಾರದು ಎಂದು ಖ್ಯಾತ ಚಿತ್ರನಟ, ಪ್ರಗತಿಪರ ಚಿಂತಕರು ಹೋರಾಟಗಾರರು ಚೇತನ್ ಅಹಿಂಸಾ ಹೇಳಿದರು.

ಕಲಬುರಗಿಯಲ್ಲಿ ಯುವ ಕರ್ನಾಟಕ ಬೆಂಗಳೂರು ವತಿಯಿಂದ ಪತ್ರಿಕಾ ಭಾವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಹೀಗೆ ಮಾತನಾಡಿದರು.

ಕಲ್ಯಾಣಕರ್ನಾಟಕಭಾಗವು ಉದ್ಯೋಗದಿಂದ, ಶಿಕ್ಷಣದಿಂದ ಹಿಂದುಳಿದ ಪ್ರದೇಶವಾಗಿದ್ದು ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಕಲ್ಯಾಣ ಕರ್ನಾಟಕ ಭಾಗದ ಜನರ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸುವ ಉದ್ದೇಶದಿಂದ, ದೇಶದ ಅಭಿವೃದ್ಧಿಗೆ ಶಿಕ್ಷಣವು ಮೂಲ ಅಸ್ತ್ರ ಎಂಬ ಬಾಬಾಸಾಹೇಬರ ಮಾತಿನಂತೆ, ನಮ್ಮ ಕಲ್ಯಾಣ ಕರ್ನಾಟಕ ಭಾಗದ ಜನರ ಶೈಕ್ಷಣಿಕ ಪ್ರಗತಿಗಾಗಿ ಪ್ರೊ. ನಂಜುಡಪ್ಪ ವರದಿಯ ಆಧಾರದ ಮೇಲೆ, ಡಾ. ಮಲ್ಲಿಕಾರ್ಜುನ ಖರ್ಗೆಯವರ ಪರಿಶ್ರಮ ಮತ್ತು ಹಲವಾರು ಸಾಹಿತಿಗಳ, ರಾಜಕೀಯ ನಾಯಕರ, ಹೋರಾಟಗಾರರ ಸಾಮೂಹಿಕ ಹೋರಾಟದ ಫಲವಾಗಿ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯವು 2009ರಲ್ಲಿ ಸ್ಥಾಪನೆಯಾಯಿತು.

Advertisements

ಇಲ್ಲಿನ ವಿಶ್ವವಿದ್ಯಾಲಯಗಳಿಗೆ ಶೈಕ್ಷಣಿಕವಾಗಿ ಅನುಕೂಳವಾಗಲೆಂದು ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರ್ಮಾಣಗೊಂಡ ಕೇಂದ್ರೀಯ ವಿಶ್ವವಿದ್ಯಾಲಯವು ಸಮಾನತೆ, ಸಹೋದರತೆ ಮತ್ತು ಭಾತೃತ್ವ ಭಾವನೆಯನ್ನು ಬಿತ್ತಿ ಸಮಾನ ಶಿಕ್ಷಣ ನೀಡಬೇಕಾದ ವಿಶ್ವವಿದ್ಯಾಲಯವು ಆರಂಭದ ದಿನಗಳಲ್ಲಿ ಪ್ರಾಮಾಣಿಕವಾಗಿ ಪಾರದರ್ಶಕ ಆಡಳಿತ ನೀಡಿ ನಂತರದ ದಿನಗಳಲ್ಲಿ ಸರ್ವರಿಗೂ ಸಮಾನವಾಗಿ ಸಿಗಬೇಕಿದ್ದ ಶಿಕ್ಷಣವನ್ನು ವಿಶ್ವವಿದ್ಯಾಲಯದ ಆಡಳಿತ ವರ್ಗವು ದುರುಪಯೋಗಪಡಿಸಿಕೊಂಡು, ಏಕಮುಖಿಯಾಗಿ, ಏಕಪಕ್ಷಿಯವಾಗಿ ನಿರ್ಧರಿಸುತ್ತಿದೆ.

ವಿಶ್ವವಿದ್ಯಾಲಯಗಳ ಅಧಿನಿಯಮದ ಪ್ರಕಾರ ಕಾನೂನಾತ್ಮಕವಾಗಿ ವಿದ್ಯಾರ್ಥಿಗಳಿಗೆ ಸಿಗಬೇಕಾದ ಮೂಲ ಸೌಕರ್ಯವನ್ನು ಒದಗಿಸದೆ ವಿದ್ಯಾರ್ಥಿಗಳಿಂದ ಹಣ ಸೂಲಿಗೆ ಮಾಡುವ ಮತ್ತು ಶಾಂತಿ ಕದಡುವ ಕೆಲಸ ಮಾಡುತ್ತಿದೆ. ಯುನಿವರ್ಸಿಟಿ ಗ್ಯಾಂಟ್ ಕಮೀಷನ್ ಪ್ರಕಾರ, ವಿಶ್ವವಿದ್ಯಾಲಯಗಳು ಸಂವಿಧಾನದ ಆಶಯದ ಮೇಲೆ ನಡೆಯಬೇಕೆ ಹೊರತು ಯಾವುದೇ ಧರ್ಮ ಅಥವಾ ಆಚರಣೆಯ ಕೇಂದ್ರವಾಗಬಾರದು. ಭಾರತವು ವಿಶ್ವಕ್ಕೆ ಮಾದರಿಯಾಗುವಂತ ಮನುಷ್ಯ ಧರ್ಮವನ್ನು ಸಾರಿದ ನಾಡು.

ಕರ್ನಾಟಕವು ಬುದ್ಧ, ಶರಣ, ಸೂಫಿ, ಸಂತ ತತ್ವಪದಕಾರರಿಂದ ಪ್ರಸಿದ್ಧ ಪಡೆದ ಸೌಹಾರ್ದ ಪರಂಪರೆಯ ಬೀಡು. ಇಂತಹ ನಾಡಿನಲ್ಲಿ ನಿರ್ಮಾಣವಾದ ವಿಶ್ವವಿದ್ಯಾಲಯ ಈಗ ಕೇಶವಕೃಪಾದ ಆಜ್ಞೆಯ ಮೆರೆಗೆ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಸಾಕ್ಷಿ, ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಆರ್.ಎಸ್.ಎಸ್ ಗಣವೇಶದಾರಿಗಳಾಗಿದ್ದಾರೆ.

ವಿಶ್ವವಿದ್ಯಾಲಯದ ಆವರಣದಲ್ಲಿ ಪಥ ಸಂಚಲನ ಮಾಡಿರುವುದು ಮತ್ತು ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ, ವಿಶ್ವವಿದ್ಯಾಲಯದ ಲೆಟರ್ ಹೆಡ್ ಬಳಸಿ ಮೋಹನ ಭಾಗವತ್ ಅವರಿಗೆ ಪತ್ರ ಬರೆದದ್ದು ಪತ್ರಿಕೆಗಳಿಂದ ಬೆಳಕಿಗೆ ಬಂದಿದೆ. ಆರ್.ಎಸ್.ಎಸ್ ನ ಹಿನ್ನೆಲೆ ಇರುವ ಕುಲಪತಿಗಳು ಸಂವಿಧಾನ ವಿರೋಧಿ ಮತ್ತು ದಲಿತ ವಿರೋಧಿ ಎಂಬುದಕ್ಕೆ ಬಲವಾದ ಸಾಕ್ಷಿಗಳಿವೆ. ಜನವರಿ 26ರಂದು ಭಾರತ ಗಣರಾಜ್ಯೋತ್ಸ ದಿನ. ಆದರೆ, ಕೇಂದ್ರೀಯ ವಿಶ್ವವಿದ್ಯಾಲಯದ ಕಾನೂನು ವಿಭಾಗದಲ್ಲಿ ಸರಸ್ವತಿ ಪೂಜೆ ಮಾಡುವ ಮೂಲಕ ಭಾರತದ ಸಂವಿಧಾನ ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ ಅವರನ್ನು ಅಪಮಾನಿಸಿದ್ದಾರೆ.

ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಓದುತ್ತಿರುವ ಪಿ. ನಂದಪ್ಪ ಎನ್ನುವ ವಿದ್ಯಾರ್ಥಿಯು ಅಂಬೇಡ್ಕರ ವಿಚಾರಧಾರೆಯ ಮೇಲೆ ಕಾರ್ಯಕ್ರಮ ಮಾಡುವುದನ್ನು ಸಹಿಸದೆ ವಿನಾಕಾರಣ ಸುಳ್ಳು ಕೇಸುಗಳನ್ನು ಹಾಕಿಸಿ ಆತನ ಸಂಶೋಧನೆಗೆ ಅಡ್ಡಿಪಡಿಸುತ್ತಿದ್ದಾರೆ.

ವಿಶ್ವವಿದ್ಯಾಲಯದ ಆವರಣದಲ್ಲಿ ಏನೆ ಘಟನೆ ನಡೆದರೂ ನಂದಪ್ಪನೆ ಕಾರಣ ಎಂಬಂತೆ ಬಿಂಬಿಸಿ, ವಿಚಾರಣೆಯ ನೆಪದಲ್ಲಿ ನಮ್ಮ ಮೂಲ ಆಹಾರವನ್ನು ಅಪಮಾನಿಸಿ, ಜಾತಿ ನಿಂದನೆ ಮಾಡಿ, ಮಾನಸಿಕ ಕಿರುಕುಳ ನೀಡಿತು. ನ್ಯಾಯಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡಿದ ನಂದಪ್ಪನ ಪ್ರಾಣಕ್ಕೆ ಅಪಾಯ ತಂದ ವಿಶ್ವವಿದ್ಯಾಲಯದ ಕುಲಪತಿ ದಲಿತ ವಿರೋಧಿ ಎನ್ನುವುದಕ್ಕೆ ಹಲವು ಸಾಕ್ಷಿಗಳಿವೆ.

  • ಪ್ರೊ. ಬಟ್ಟುಸತ್ಯನಾರಾಯಣ ಅವರು ವಿಶ್ವವಿದ್ಯಾಲಯಕ್ಕೆ ಕುಲಪತಿಯಾಗಿ ನೇಮಕಗೊಂಡ ಮೇಲೆ ವಿಶ್ವವಿದ್ಯಾಲದ ಆವರಣದಲ್ಲಿ ಎ.ಬಿ.ವಿ.ಪಿ ಹಾಗೂ ಆರ್.ಎಸ್.ಎಸ್. ಚಟುವಟಿಕೆಗಳು ಪ್ರಾರಂಭವಾಗಿವೆ.
  • ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡಲಾಗುತ್ತಿದೆ. ಉದಾಹರಣೆಗೆ ನಂದಪ್ಪ ಎಂಬ ಸಂಶೋಧನಾ ವಿದ್ಯಾರ್ಥಿ ಸ್ವತಃ ವಿಶ್ವವಿದ್ಯಾಲಯವೇ ಸುಳ್ಳು. ಪೊಲೀಸ್ ಪ್ರಕರಣ ದಾಖಲಿಸಿದ್ದು. ಅಲ್ಲದೆ ಸುಳ್ಳು ಆರೋಪಿ ವಿಚಾರಣೆಯ ನೆಪದಲ್ಲಿ ಕಿರುಕುಳ ನೀಡಿದ್ದು. ಅದು ಮುಂದುವರಿದು ಉಪವಾಸ ಸತ್ಯಾಗ್ರಹ, ಅಲ್ಲದೆ ಆ ವಿದ್ಯಾರ್ಥಿಯೊಬ್ಬರ ಮೇಲೆ ಕಲ್ಲುತೂರಾಟ. ಜೀವಬೆದರಿಕೆ ಪೋಸ್ಟಗಳು ಅಂಟಿಸುವುದು.
  • ಉದ್ದೇಶಪೂರ್ವಕವಾಗಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಅವರಿಗೆ ಅವಮಾನವನ್ನು ಮಾಡಲಾಗುತ್ತಿದೆ.
  • 5 ವರ್ಷ ಪೂರೈಸಿದ ಪಿಎಚ್‌ಡಿ ವಿದ್ಯಾರ್ಥಿಗಳ ಪ್ರವೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
  • ನಂದಪ್ಪನು 2023ರಲ್ಲಿ 5ವರ್ಷಗಳನ್ನ ಪೂರ್ಣಗೊಳಿಸಿದ್ದೇನೆ. ಅವರು 2024ರಲ್ಲಿ ಏಕೆ ಪ್ರತಿಕ್ರಿಯಿಸುತ್ತಿದ್ದಾರೆ. 2023ರಲ್ಲಿ ಅವರು ಇದನ್ನ ಏಕೆ ಅನುಸರಿಸಲಿಲ್ಲ?
  • ವಿಶ್ವವಿದ್ಯಾಲಯದ ಪ್ರತಿಯೊಂದು ಶೈಕ್ಷಣಿಕ ನಿರ್ಧಾರವನ್ನು ಅಕಾಡೆಮಿಕ್ ಕೌನ್ಸಿಲ್‌ನಲ್ಲಿ ಅನುಮೋದಿಸಬೇಕು, ಅದನ್ನು ಅಕಾಡೆಮಿಕ್ ಕೌನ್ಸಿಲ್ ಅಥವಾ ಎಕ್ಸಿಕ್ಯೂಟಿವ್ ಕೌನ್ಸಿಲ್‌ನಲ್ಲಿ ಏಕೆ ಇರಿಸಲಾಗಿಲ್ಲ.
  • ಅವರು 5ವರ್ಷಗಳನ್ನು ಪೂರ್ಣಗೊಳಿಸಿದವರನ್ನು ರದ್ದುಗೊಳಿಸಿದರು, ಆದರೆ ಅವರು 6 ಅಥವಾ 7 ವರ್ಷಗಳ ಪಿ.ಎಚ್.ಡಿ ರ್ಣಗೊಳಿಸಿದವರನ್ನು ಏಕೆ ರದ್ದುಗೊಳಿಸಿಲ್ಲ.
  • ಇಂತಹ ಕಠಿಣ ಸುತ್ತೋಲೆ ಹೊರಡಿಸುವ ಮೊದಲು ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಕನಿಷ್ಠ ಒಂದು ತಿಂಗಳ ಮುಂಚಿತ ನೋಟಿಸ್ ಏಕೆ ನೀಡಿಲ್ಲ?
  • ಈ ಕ್ರಮವನ್ನು ತೆಗೆದುಕೊಳ್ಳಲು ಅವರು ವಿಶ್ವವಿದ್ಯಾಲಯದ ಸುಗ್ರೀವಾಜ್ಞೆಯನ್ನು ಬಳಸಿದ್ದಾರೆ, ಆದರೆ ಸುಗ್ರೀವಾಜ್ಞೆಯಲ್ಲಿ ರದ್ದತಿಯಂತಹ ಯಾವುದೇ ಪದವನ್ನು ನಾನು ಕಂಡುಕೊಂಡಿಲ್ಲ. ಇದು ಕೇವಲ ಸುಗ್ರೀವಾಜ್ಞೆ, ಆದರೆ ವಿಶ್ವವಿದ್ಯಾಲಯಗಳು ಕಾಲಕಾಲಕ್ಕೆ ಯುಜಿಸಿ ನಿಯಮಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಇತ್ತೀಚಿನ ಯುಜಿಸಿ ನಿಯಮಗಳು ಪಿಎಚ್ಚಿ ಕೋರ್ಸ್ 5 + 1 ವರ್ಷಗಳಾಗಿರಬೇಕು ಎಂದು ಸ್ಪಷ್ಟವಾಗಿ ಹೇಳುತ್ತದೆ. ತೀವ್ರ ಆರೋಗ್ಯ ಅಥವಾ ಕೋವಿಡ್ನಂತಹ ಯಾವುದೇ ವೈಯಕ್ತಿಕ / ರಾಜಕೀಯ ತುರ್ತು ಸಂದರ್ಭಗಳಲ್ಲಿ ಇದನ್ನು ವಿಸ್ತರಿಸಬಹುದು. ಇನ್ನೂ ಆಘಾತಕಾರಿ ಸಂಗತಿಯೆಂದರೆ, ನಮ್ಮದೇ ವಿಶ್ವವಿದ್ಯಾಲಯದ ಅನೇಕ ಪಿಎಚ್ಚೆ ವಿದ್ಯಾರ್ಥಿಗಳು ತಮ್ಮ ಪಿಎಚ್ಚಿ ಪೂರ್ಣಗೊಳಿಸಲು 8 ವರ್ಷಗಳನ್ನು ತೆಗೆದುಕೊಂಡಿದ್ದಾರೆ.
  • ಅವರ ಸ್ವಂತ ಹೇಳಿಕೆಯ ಪ್ರಕಾರ, ಅವರು 5 ವರ್ಷಗಳನ್ನು ಪೂರ್ಣಗೊಳಿಸಿದರೂ 2018 ರಲ್ಲಿ ಸೇರಿದ ಶ್ರೀ ಸಾಯಿ ನಾಗೇಂದ್ರ (ಪಿಎಚ್ ಮ್ಯಾನೇಜ್ಂಟ್), ಪ್ರಕಾಶ್ (ಪಿಎಚ್ – ಶಾಸ್ತ್ರೀಯ ಕನ್ನಡ), ಮಲ್ಲಿಕಾರ್ಜುನ್ (ರಸಾಯನಶಾಸ್ತ್ರ), ಚಿಪ್ಪಿ ಪುಷ್ಪಾ ನಾಗನಾಥನ್ (ಪಿಎಚ್ಚಿ – ಭೂವಿಜ್ಞಾನ), ಭೀಮಾ ಶಂಕರ್ (ಶಾಸ್ತ್ರೀಯ ಕನ್ನಡ)ರವರುಗಳ ಹೆಸರು ಯಾಕಿಲ್ಲ ಎಂದು ನಾನು ತಿಳಿಯಲು ಬಯಸುತ್ತೇನೆ?
  • ಪುಟ್ಟರಾಜ್ (7 ವರ್ಷ – ಪಿಎಚ್ಚಿ ಅರ್ಥಶಾಸ್ತ್ರ), ಸುನೀತ್ ಕುಮಾರ್ ಸಾಹು (7 ವರ್ಷ – ಪಿಎಚ್ ಅರ್ಥಶಾಸ್ತ್ರ), ಜಯಶ್ರೀ (7 ವರ್ಷ – ಪಿಎಚ್ಚಿ ಹಿಂದಿ), ಮೋಹನ್ (ಮ್ಯಾನೇಜೆಂಟ್ – ಪಿಎಚಿ) ಮುಂತಾದ 6 ರಿಂದ 7 ವರ್ಷಗಳ ಪಿಎಚ್ಚೆ ಮಾಡುತ್ತಿರುವ ವಿದ್ಯಾರ್ಥಿಗಳಿರದ್ದಾರೆ. ಈ ಎಲ್ಲಾ ಹೆಸರುಗಳು ವಿಶ್ವವಿದ್ಯಾಲಯದ ರದ್ದಾದ ಪಟ್ಟಿಯಲ್ಲಿಲ್ಲ, 5 ವರ್ಷ ಪೂರೈಸಿದ ವಿದ್ಯಾರ್ಥಿಗಳನ್ನು ರದ್ದು ಪಡಿಸಲಾಗುತ್ತದೆ, ಆದರೆ 5 ವರ್ಷಗಳಿಗಿಂತ ಹೆಚ್ಚು ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಎಸ್ಟಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿ ಮುಂದುವರಿಯುತ್ತಾರೆ ಎಂಬುದು ವಿಚಿತ್ರವಲ್ಲವೇ?
  • ಪ್ರವೇಶ ರದ್ದುಗೊಳಿಸಲ್ಪಟ್ಟ ಈ ವಿದ್ಯಾರ್ಥಿಗಳಲ್ಲಿ ಅನೇಕರು, ವಿಭಾಗ ಮಟ್ಟದಲ್ಲಿ ಸಿಎಎಸ್‌ಆರ್ ಮತ್ತು ಅರ್ಎಸಿಯಿಂದ ಪಿಎಚ್ ವಿಸ್ತರಣೆ ಆದೇಶವನ್ನು ಹೊಂದಿದ್ದಾರೆ. ಇದರ ಹೊರತಾಗಿಯೂ, ವಿಶ್ವವಿದ್ಯಾಲಯವು ನನ್ನ ಪ್ರವೇಶವನ್ನು ರದ್ದುಗೊಳಿಸಲು ಮುಂದಾಗಿದೆ. ಡೀನ್-ಎಸ್‌ಎಚ್‌ಎಲ್ ಮತ್ತು ಎಚ್‌ಒಡಿ-ವಿಭಾಗದ ಹೊರತಾಗಿಯೂ. ಕನ್ನಡದವರು ಹೋಗಿ ರಿಜಿಸ್ಟ್ರಾರ್ ಅವರನ್ನು ಭೇಟಿಯಾದರು, ಈ ರದ್ದತಿಗೆ ಆಡಳಿತದಿಂದ ಯಾವುದೇ ಸಮರ್ಥನೆ ಇರುವುದಿಲ್ಲ.

ವಿನಾಕಾರಣ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವುದು ಮತ್ತು ವಿದ್ಯಾರ್ಥಿಗಳ ಕೋಮುದ್ವೇಷ ಬಿತ್ತಿ ಧರ್ಮದ ದಂಗಲ್ ಸೃಷ್ಟಿಸುತ್ತಿರುವ ಕುಲಪತಿಗಳು ಮತ್ತು ಅಲ್ಲಿನ ಆರ್. ಎಸ್. ಎಸ್. ಹಾಗೂ ಎ.ಬಿ.ವಿ.ಪಿ ಹಿನ್ನೆಲೆಯಿರುವ ಅದ್ಯಾಪಕರು ವಿಶ್ವವಿದ್ಯಾಲಯದ ವಾತಾರಣವನ್ನು ಕಲುಷಿತಗೊಳಿಸುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ಸಂವಿಧಾನದ ಆಶಯವನ್ನು ಗಾಳಿಗೆ ತೂರಿ ಬಾಬಾಸಾಹೇಬರನ್ನು ಅಪಮಾನಿಸುತ್ತಿದ್ದಾರೆ.

ಇವರನ್ನು ಕಡಿವಾಣ ಹಾಕದೆ ಹೋದರೆ ನಮ್ಮ ಭಾಗದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆಯದ ಹಾಗೆ ಮತ್ತು ನಮ್ಮ ಭಾಗದ ಉಪನ್ಯಾಸಕರು ನೇಮಕವಾಗದೆ ಹಾಗೆ ಷಡ್ಯಂತ್ರ ರೂಪಿಸಿ ನಮ್ಮ ಕಣ್ಣ ಮುಂದೆನೆ ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಅಭಿವೃದ್ಧಿಯನ್ನು ಕುಂಟಿತಗೊಳಿಸುತ್ತಾರೆ. ಹಾಗಾಗಿ ಇಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಮೇಲಿನ ದಬ್ಬಾಳಿಕೆ ನಿಲ್ಲಬೇಕು. ಕೋಮುದ್ವೇಷಕ್ಕೆ ಕಡಿವಾಣ ಹಾಕಬೇಕು. ಸ್ಥಳೀಯರಿಗೆ ಉದ್ಯೋಗದ ಅವಕಾಶ ಸಿಗಬೇಕು ಮತ್ತು ವಿದ್ಯಾರ್ಥಿಗಳಿಗೆ ಸಮಾನ ಶಿಕ್ಷಣ ನೀಡಬೇಕು ಎಂದು ಯುವ ಕರ್ನಾಟಕವು ಆಗ್ರಹಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಲಕ್ಷ್ಮೀ ಬಾವಗೆ, ಅಶ್ವಿನಿ ಮದನಕರ, ಲಕ್ಷ್ಮೀಕಾಂತ್ ಹುಬಳಿ, ಮಾರುತಿ ಗಂಜಗಿರಿ, ಸಂತೋಷ ಮೇಲ್ಮನಿ ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ : ಗಾಂಜಾ ಮಾರಾಟ ಮಾಫಿಯಾ 9 ಮಂದಿ ಅರೆಸ್ಟ್ : ರೂ 30 ಲಕ್ಷ ಮೌಲ್ಯದ ಗಾಂಜಾ ವಶ

ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟ ಜಾಲ ಬಯಲಾಗಿದ್ದು, ಬೆಳಗಾವಿ ಪೊಲೀಸರು ದೊಡ್ಡ...

ಬಾಗಲಕೋಟೆ | ಬಿಜೆಪಿ ಮತಗಳ್ಳತನ ವಿರುದ್ಧ ವ್ಯಾಪಕ ಹೋರಾಟ: ಮಾಜಿ ಸಚಿವ ವಿನಿಯಕುಮಾರ್

ಬಿಜೆಪಿ ಮತಗಳ್ಳತನ ನಡೆಸಿ ಚುನಾವಣೆ ಅಕ್ರಮ ಎಸಗಿರುವ ಬಗ್ಗೆ ವ್ಯಾಪಕವಾಗಿ ಹೋರಾಟ...

ಶಿವಮೊಗ್ಗ | KSRTC ನಗರ ಸಾರಿಗೆ ಬಸ್ ಮಲವಗೊಪ್ಪದ, ಚೆನ್ನಬಸವೇಶ್ವರ ದೇವಸ್ಥಾನ ಬಳಿ ಕಡ್ಡಾಯ ನಿಲುಗಡೆಗೆ ಆದೇಶ

ಶಿವಮೊಗ್ಗ, ಸಾರ್ವಜಕನಿಕ ಪ್ರಯಾಣಿಕರು/ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ನಗರ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

Download Eedina App Android / iOS

X