ಮುಂಬೈ ವಿರುದ್ಧ ಕಳೆದ ಮಾರ್ಚ್ 27ರಂದು ನಡೆದಿದ್ದ ಐಪಿಎಲ್‌ನ 8ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 277 ರನ್‌ಗಳನ್ನು ದಾಖಲಿಸುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಕೀರ್ತಿ ಹೈದರಾಬಾದ್ ತಂಡದ ಹೆಸರಲ್ಲಿತ್ತು. ಈ ದಾಖಲೆಯನ್ನು ಕೇವಲ ಎಂಟೇ ದಿನಗಳೊಳಗೆ ಮುರಿಯಲು ಯತ್ನಿಸಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ, ಕೇವಲ ಐದು ರನ್‌ಗಳಿಂದ ದಾಖಲೆ ಸರಿಗಟ್ಟುವುದರಿಂದ ತಪ್ಪಿತು.
Innings Break!@KKRiders post 272/7 in the first innings 🤯
A mountain to climb for Delhi Capitals, can they chase this down?
Stay tuned for the mighty chase!
Scorecard ▶️ https://t.co/SUY68b95dG#TATAIPL | #DCvKKR pic.twitter.com/VGURZ5KbTZ
— IndianPremierLeague (@IPL) April 3, 2024
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಇಂದು ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 272 ರನ್‌ಗಳ ಬೃಹತ್ ಮೊತ್ತ ದಾಖಲಿಸಿದೆ. ಇದು ಐಪಿಎಲ್‌ನ ಇತಿಹಾಸದಲ್ಲೇ ಎರಡನೇ ಗರಿಷ್ಠ ಮೊತ್ತವಾಗಿದೆ.
ಟಾಸ್ ಗೆದ್ದ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ತಂಡಕ್ಕೆ ಸುನಿಲ್ ನರೇನ್ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಬಲಿಷ್ಠ ಆರಂಭ ನೀಡಿದರು. ಐದನೇ ಓವರ್‌ನಲ್ಲಿ ಕೆಕೆಆರ್ ಮೊದಲ ವಿಕೆಟ್ ಕಳೆದುಕೊಂಡಿತಾದರೂ, ಆ ವೇಳೆಗಾಗಲೇ 70 ರನ್ ಪೇರಿಸಿತ್ತು. ಸುನಿಲ್ ನರೇನ್ 39 ಎಸೆತಗಳಲ್ಲಿ 85 ರನ್(7 ಸಿಕ್ಸ್, 7 ಬೌಂಡರಿ), ಯುವ ಬ್ಯಾಟರ್ ರಘುವಂಶಿ 27 ಎಸೆತಗಳಲ್ಲಿ 54 ರನ್ ಗಳಿಸಿ ಮಿಂಚಿದರು.
Sunil Narine at it again 🔥🔥@KKRiders are off to some start in Vizag!
Head to @JioCinema and @StarSportsIndia to watch the match LIVE#TATAIPL | #DCvKKR pic.twitter.com/UipTFUHznQ
— IndianPremierLeague (@IPL) April 3, 2024
ಉಳಿದಂತೆ ಆಂಡ್ರೆ ರಸ್ಸೆಲ್ 19 ಎಸೆತಗಳಲ್ಲಿ 41, ರಿಂಕು ಸಿಂಗ್ 8 ಎಸೆತಗಳಲ್ಲಿ 26 ಹಾಗೂ ನಾಯಕ ಶ್ರೇಯಸ್ ಅಯ್ಯರ್ 18 ರನ್ ಗಳಿಸಿದರು. ಕೊನೆಯಲ್ಲಿ 7 ವಿಕೆಟ್ ಕಳೆದುಕೊಂಡು 272 ರನ್ ದಾಖಲಿಸುವ ಮೂಲಕ, ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್‌ಗೆ 273 ರನ್‌ಗಳ ಬೃಹತ್ ಗುರಿ ನೀಡಿದೆ.
YORKED! 🎯
Ishant Sharma with a beaut of a delivery to dismiss the dangerous Russell!
Head to @JioCinema and @StarSportsIndia to watch the match LIVE#TATAIPL | #DCvKKR | @ImIshant pic.twitter.com/6TjrXjgA6R
— IndianPremierLeague (@IPL) April 3, 2024
ಡೆಲ್ಲಿ ಪರ ಬೌಲಿಂಗ್‌ನಲ್ಲಿ ನೋರ್‌ಜೆ 3, ಇಶಾಂತ್ ಶರ್ಮಾ 2 ವಿಕೆಟ್ ಪಡೆದರೆ, ಖಲೀಲ್ ಹಾಗೂ ಮಾರ್ಷ್ ತಲಾ ಒಂದೊಂದು ವಿಕೆಟ್ ಪಡೆದರು.
