ವಿಶಾಖಪಟ್ಟಣದಲ್ಲಿ ಇಂದು ನಡೆದ ಐಪಿಎಲ್ ಪಂದ್ಯದಲ್ಲಿ ಕೆಕೆಆರ್ ನೀಡಿದ್ದ 273 ರನ್ಗಳ ಬೃಹತ್ ಮೊತ್ತದ ಗುರಿಯನ್ನು ತಲುಪುವಲ್ಲಿ ಎಡವಿದ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್, 106 ರನ್ಗಳಿಂದ ಸೋಲೊಪ್ಪಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ, 272 ರನ್ಗಳನ್ನು ದಾಖಲಿಸಿತ್ತು. ಈ ಗುರಿಯನ್ನು ತಲುಪುವಲ್ಲಿ ಎಡವಿದ ಡೆಲ್ಲಿ, 17.2 ಓವರ್ಗಳಲ್ಲಿ 166 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.
Thunderous batting display 👏
Comprehensive bowling & fielding display 👏A hat-trick of wins for @kkriders & they go to the 🔝 of the points table 💜
Scorecard ▶️ https://t.co/SUY68b95dG #TATAIPL | #DCvKKR pic.twitter.com/xq4plqLatQ
— IndianPremierLeague (@IPL) April 3, 2024
ಡೆಲ್ಲಿ ಪರ ಬ್ಯಾಟಿಂಗ್ನಲ್ಲಿ ನಾಯಕ ರಿಷಭ್ ಪಂತ್ 55 ರನ್ ಹಾಗೂ ಸ್ಟಬ್ಸ್ 54 ರನ್ ಗಳಿಸುವ ಮೂಲಕ ಗರಿಷ್ಠ ಸ್ಕೋರರ್ ಎನಿಸಿದರು. ಉಳಿದಂತೆ ವಾರ್ನರ್ 13 ಎಸೆತಗಳಲ್ಲಿ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
Narine 🔥
Raghuvanshi 💎
Chakravarthy, Arora and Starc among the wickets 👆KKR go three in three for the first time ever in the IPL 👏 pic.twitter.com/SUa1jHiUw2
— ESPNcricinfo (@ESPNcricinfo) April 3, 2024
ಕೊಲ್ಕತ್ತಾ ಪರ ಬೌಲಿಂಗ್ನಲ್ಲಿ ವರುಣ್ ಚಕ್ರವರ್ತಿ ಹಾಗೂ ವೈಭವ್ ಅರೋರಾ ಮೂರು ವಿಕೆಟ್, ಮಿಚೆಲ್ ಸ್ಟಾರ್ಕ್ 2 ಹಾಗೂ ಸುನಿಲ್ ನರೇನ್ ಹಾಗೂ ರಸ್ಸೆಲ್ ತಲಾ ಒಂದೊಂದು ವಿಕೆಟ್ ಗಳಿಸಿದರು.
