ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ 2024ರ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ. ಈ ಸೀಸನ್(2024)ನ ಮೊದಲ ಶತಕ ಬಾರಿಸಿದ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿಯವರ ಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು 183 ರನ್ಗಳನ್ನು ದಾಖಲಿಸಿತು. ಆ ಮೂಲಕ 184 ರನ್ಗಳ ಸವಾಲಿನ ಗುರಿ ನೀಡಿದೆ.
The pitch is not a belter and we think we’ve got a very competitive total. 🙌
Over to the bowling department. 👊#PlayBold #ನಮ್ಮRCB #IPL2024 #RRvRCB pic.twitter.com/sS7CJ9oFDr
— Royal Challengers Bengaluru (@RCBTweets) April 6, 2024
ನಾಯಕ ಫಾಫ್ ಡು ಪ್ಲೆಸಿ ಜೊತೆ ಆರಂಭಿಕರಾಗಿ ಆಗಮಿಸಿದ್ದ ವಿರಾಟ್ ಕೊಹ್ಲಿ, 72 ಎಸೆತಗಳಲ್ಲಿ 12 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ನ ನೆರವಿನಿಂದ 113 ರನ್ ಗಳಿಸಿ, ಔಟಾಗದೆ ಉಳಿದರು.
ಐಪಿಎಲ್ನಲ್ಲಿ ವಿರಾಟ್ ಕೊಹ್ಲಿಗೆ ಇದು 8ನೇ ಶತಕವಾಗಿದ್ದು, ಈ ಶತಕ ಸಿಡಿಸುವ ಮೂಲಕ ಕೊಹ್ಲಿ, ಐಪಿಎಲ್ನ ಅಧಿಕ ಶತಕ ಸಿಡಿಸಿದವರ ಪಟ್ಟಿಯಲ್ಲಿ ತಮ್ಮ ಪಾರುಪತ್ಯ ಮುಂದುವರೆಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಕ್ರಿಸ್ ಗೇಲ್ 6 ಶತಕ ಬಾರಿಸಿದ್ದಾರೆ.
For the second time this season, the run machine remains unbeaten, and true to his name 🙌#PlayBold #ನಮ್ಮRCB #IPL2024 #RRvRCB @imVkohli pic.twitter.com/gQaOnlcttc
— Royal Challengers Bengaluru (@RCBTweets) April 6, 2024
ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿ ಜೋಡಿಯು ಮೊದಲ ವಿಕೆಟ್ಗೆ 125 ರನ್ಗಳ ಬೃಹತ್ ಜೊತೆಯಾಟ ನಡೆಸುವ ಮೂಲಕ ಉತ್ತಮ ಅಡಿಪಾಯ ಹಾಕಿದರು. ಫಾಫ್ ಡು ಪ್ಲೆಸಿ, ಚಾಹಲ್ ಎಸೆತದಲ್ಲಿ ಬಟ್ಲರ್ಗೆ ಕ್ಯಾಚ್ ನೀಡಿ ಔಟಾಗುವುದಕ್ಕೂ ಮುನ್ನ 33 ಎಸೆತಗಳಲ್ಲಿ 44 ರನ್(2 ಬೌಂಡರಿ, 2 ಸಿಕ್ಸರ್) ಬಾರಿಸಿದರು.
ಬಳಿಕ ಕ್ರೀಸ್ಗೆ ಬಂದ ಗ್ಲೆನ್ ಮ್ಯಾಕ್ಸ್ವೆಲ್ ಈ ಪಂದ್ಯದಲ್ಲೂ ರನ್ ಗಳಿಸಲು ವಿಫಲರಾದರು. ಮೂರು ಎಸೆತದಲ್ಲಿ 1 ರನ್ ಗಳಿಸಿದ್ದಾಗ, ಬರ್ಗರ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಫಲರಾಗಿ, ಕ್ಲೀನ್ ಬೌಲ್ಡ್ ಆದರು.
Time to bat for our #PinkPromise. 💪 pic.twitter.com/j6ErMdRHNS
— Rajasthan Royals (@rajasthanroyals) April 6, 2024
ಮೊದಲ ಬಾರಿಗೆ ಆರ್ಸಿಬಿಯಲ್ಲಿ ಅವಕಾಶ ಪಡೆದಿದ್ದ ಯುವ ಬ್ಯಾಟರ್ ಸೌರವ್ ಚೌಹಾನ್ ಸಿಕ್ಕ ಅವಕಾಶ ಬಳಸುವಲ್ಲಿ ವಿಫಲರಾದರು. 6 ಎಸೆತಗಳಲ್ಲಿ 1 ಸಿಕ್ಸರ್ ಇರುವ 9 ರನ್ ಗಳಿಸಿ, ಚಾಹಲ್ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ವಿರಾಟ್ ಕೊಹ್ಲಿಯೊಂದಿಗೆ ಇನ್ನಿಂಗ್ಸ್ ಕಟ್ಟಿದ ಕ್ಯಾಮರೂನ್ ಗ್ರೀನ್, ಕೇವಲ 5 ರನ್ ಗಳಿಸಿ ಔಟಾಗದೆ ಉಳಿದರು.
ರಾಜಸ್ಥಾನ ಪರ ಬೌಲಿಂಗ್ನಲ್ಲಿ ಯಜುವೇಂದ್ರ ಚಾಹಲ್ 2 ವಿಕೆಟ್ ಪಡೆದರೆ, ಬರ್ಗರ್ ಒಂದು ವಿಕೆಟ್ ಗಳಿಸಿದರು.
ಐಪಿಎಲ್ನಲ್ಲಿ 7500 ರನ್ಗಳ ಮೈಲುಗಲ್ಲು ತಲುಪಿದ ಕೊಹ್ಲಿ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ 7500 ರನ್ಗಳ ಮೈಲುಗಲ್ಲನ್ನು ತಲುಪಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾದರು. ರಾಜಸ್ಥಾನ್ ರಾಯಲ್ಸ್ 34 ರನ್ ಗಳಿಸುತ್ತಿದ್ದಂತೆಯೇ ಬೃಹತ್ ದಾಖಲೆ ನಿರ್ಮಿಸಿದರು.
Make that 7500 runs and counting in the #TATAIPL for @imVkohli 👏👏
Live – https://t.co/lAXHxeYCjV #TATAIPL #IPL2024 #RRvRCB pic.twitter.com/M5CS7PUW2Q
— IndianPremierLeague (@IPL) April 6, 2024
ಇದೇ ವೇಳೆ ಐಪಿಎಲ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಎಂಎಸ್ ಧೋನಿ ಅವರನ್ನು ವಿರಾಟ್ ಕೊಹ್ಲಿ ಹಿಂದಿಕ್ಕಿದ್ದಾರೆ. ಕೊಹ್ಲಿ ಪ್ರಸ್ತುತ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಹೊಂದಿದ್ದರೆ, ಎಂಎಸ್ ಧೋನಿ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ.
ಆರ್ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಇದುವರೆಗಿನ ಆಡಿದ 242 ಪಂದ್ಯಗಳಲ್ಲಿ 37ರ ಸರಾಸರಿಯಲ್ಲಿ 113 ರನ್ಗಳ ಅತ್ಯುತ್ತಮ ಸ್ಕೋರ್ನೊಂದಿಗೆ, ಭಾರತೀಯ ಬ್ಯಾಟಿಂಗ್ ಮಾಂತ್ರಿಕ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿದ್ದಾರೆ.
