ಬಳ್ಳಾರಿ ಯ ಬ್ರೂಸ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ದಾಖಲೆ ಇಲ್ಲದ 5.60 ಕೋ ಟಿ ರೂ. ಹಣ ಪತ್ತೆಯಾಗಿದೆ. ಜತೆಗೆ, ಚಿನ್ನ–ಬೆಳ್ಳಿಯ ಆಭರಣಗಳೂ ಸಿಕ್ಕಿವೆ. ಇದೆಲ್ಲದರ ಒಟ್ಟು ಮೌಲ್ಯ 7.5 ಕೋಟಿ ಎಂದು ಪೊಲೀಸರು ತಿಳಿಸಿದ್ದಾರೆ.
ಬಳ್ಳಾರಿ ಡಿವೈಎಸ್ಪಿ ಮತ್ತು ಬ್ರೂಸ್‌ಪೇಟೆಯ ಪೊಲೀಸರು ಖಚಿತ ಮಾಹಿತಿ ಆಧರಿಸಿ ನಗರದ ಕಂಬಳಿ ಬಜಾರ್‌ನ ಆಭರಣದಂಗಡಿಯ ಮಾಲೀಕರ ಮನೆಯ ಮೇಲೆ ಭಾನುವಾರ ಮಧ್ಯಾಹ್ನ ದಾಳಿ ನಡೆದಿದೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರೂ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮರೆಯಲಾರದ, ಮರೆಯಬಾರದ ಮನಮೋಹನ ಈ ಸಿಂಗ್
ಹೇಮಾ ಜ್ಯುವೆಲರ್ಸ್ ಮಾಲೀಕ ನರೇಶ್ ಸೋನಿಗೆ ಎಂಬುವರಿಗೆ ಸೇರಿದ ಹಣ ದಾಖಲೆ ಇಲ್ಲದೆ ಸಾಗಿಸುಲಾಗಿತ್ತು ಎಂದು ಪೊಲಿಸರು ತಿಳಿಸಿದ್ದಾರೆ.
ರಾಜ್ಯದಲ್ಲಿ ಮಾ.16 ರಿಂದ ಶನಿವಾರ (ಏ.06)ರ ವರೆಗೆ 30.19 ಕೋಟಿ ನಗದು, 9.43 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ, 132.92 ಲಕ್ಷ ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ. ಚುನಾವಣೆ ಘೋಷಣೆ ಬಳಿಕ ರಾಜ್ಯದಲ್ಲಿ ಈವರೆಗೆ 1,240 ಎಫ್ಐಆರ್ ದಾಖಲಾಗಿವೆ.
