ಬಿಜೆಪಿ ಪರ ಸಂದೇಶ ಹೊಂದಿದ ಮೆಸೇಜ್ ಹಂಚಿಕೊಂಡ ಆರೋಪದಡಿ ಹಾಸನದ ಡಿಡಿಪಿಐ ಕಚೇರಿಯ ಪ್ರಥಮ ದರ್ಜೆ ಸಹಾಯಕ ಬಿ ಎಚ್ ಮಂಜುನಾಥ್ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಸಿ ಸತ್ಯಭಾಮಾ ಆದೇಶ ಹೊರಡಿಸಿದ್ದಾರೆ.
‘ಪ್ರೀತಂ ಜೆ ಗೌಡ ಹಾಸನ ಎಂಎಲ್‌ಎ’ ಎಂಬ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಚುನಾವಣೆ ಪ್ರಚಾರದ ಸಂದೇಶ ಕಳುಹಿಸಿದ್ದ ಬಗ್ಗೆ, ಮಂಜುನಾಥ್ ಅವರ ವಿರುದ್ಧ ನಾಗೇಂದ್ರ ರಾಮ ಎಂಬುವವರು ದೂರು ಸಲ್ಲಿಸಿದ್ದರು.
ದೂರಿನನ್ವಯ ಪರಿಶೀಲಿಸಿ 24 ಗಂಟೆಯೊಳಗೆ ಮಾಹಿತಿ ನೀಡುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಕೆ ಟಿ ಶಾಂತಲಾ ಡಿಡಿಪಿಐಗೆ ನೋಟಿಸ್ ನೀಡಿದ್ದರು.
ಅದರಂತೆ ಡಿಡಿಪಿಐ ಅವರು, ಮಂಜುನಾಥ್ ಅವರ ವಿವರಣೆ ಕೇಳಿದ್ದರು. ಮಂಜುನಾಥ್ ಪ್ರತಿಕ್ರಿಯೆ ಜತೆಗೆ, ಸಹಾಯಕ ಚುನಾವಣಾಧಿಕಾರಿಗೆ ಡಿಡಿಪಿಐ ವರದಿ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಹಾಸನ | ಕಾಂಗ್ರೆಸ್ ಅಭ್ಯರ್ಥಿ ಪರ ಕರಪತ್ರ ಮುದ್ರಣ; ಅನುಮತಿ ಪಡೆಯದ ಪ್ರಿಂಟಿಂಗ್ ಪ್ರೆಸ್‌ಗೆ ಬೀಗಮುದ್ರೆ
ಪ್ರಕರಣದ ಬಗ್ಗೆ ಮಂಜುನಾಥ್ ನೀಡಿದ ವಿವರಣೆ ಹಾಗೂ ಡಿಡಿಪಿಐ ವರದಿ ಆಧರಿಸಿ, ಇಲಾಖಾ ವಿಚಾರಣೆ ಕಾಯ್ದಿರಿಸಿ ಬಿ ಎಚ್ ಮಂಜುನಾಥ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
