ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ನಿನ್ನೆ(ಏ.10) ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭಮನ್ ಗಿಲ್ ಆರ್‌ಸಿಬಿಯ ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ.
ಶುಭಮನ್ ಗಿಲ್ ಅರ್ಧಶತಕ ಸಿಡಿಸುವ ಮೂಲಕ ಐಪಿಎಲ್‌ನಲ್ಲಿ 3000 ರನ್‌ಗಳನ್ನು ಪೂರ್ಣಗೊಳಿಸಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿದಿದ್ದಾರೆ.
ಆ ಮೂಲಕ ಶುಭಮನ್ ಗಿಲ್ ಅತ್ಯಂತ ಕಿರಿಯ ವಯಸ್ಸಿನಲ್ಲಿ ಈ ದಾಖಲೆ ಬರೆದ ಬ್ಯಾಟ್ಸ್‌ಮನ್ ಎನಿಸಿಕೊಳ್ಳುವ ಮೂಲಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. 26ನೇ ವರ್ಷ, 816 ದಿನಗಳ ವಯಸ್ಸಿನಲ್ಲಿ ಕೊಹ್ಲಿ 3000 ಐಪಿಎಲ್ ರನ್‌ಗಳನ್ನು ಪೂರ್ಣಗೊಳಿಸಿದ್ದರು. ಇದೀಗ ಗಿಲ್ ತನ್ನ 24ನೇ ವಯಸ್ಸಿನಲ್ಲಿ ಇಷ್ಟು ರನ್‌ಗಳನ್ನು ಕಲೆ ಹಾಕಿದ್ದಾರೆ.
ಶುಭಮನ್ ಗಿಲ್ 3000 ಐಪಿಎಲ್ ರನ್‌ಗಳನ್ನು 94 ಇನಿಂಗ್ಸ್‌ಗಳಲ್ಲಿ ಗಳಿಸಿದ್ದಾರೆ. ಕೆಎಲ್ ರಾಹುಲ್ ಬಳಿಕ ಎರಡನೇ ಅತ್ಯಂತ ವೇಗವಾಗಿ ಗಿಲ್ ಈ ಸಾಧನೆ ಮಾಡಿದ್ದಾರೆ.
ಜೈಪುರದ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ನೀಡಿದ್ದ 197 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಗುಜರಾತ್ ಟೈಟನ್ಸ್ ಪರ ಅತ್ಯುತ್ತಮ ಬ್ಯಾಟ್ ಮಾಡಿದ ಶುಭಮನ್ ಗಿಲ್ ಸ್ಪೋಟಕ ಅರ್ಧಶತಕವನ್ನು ಸಿಡಿಸಿದರು. ಎದುರಿಸಿದ ಕೇವಲ 44 ಎಸೆತಗಳಲ್ಲಿ 6 ಬೌಂಡರಿಗಳು ಹಾಗೂ ಎರಡು ಸಿಕ್ಸರ್‌ಗಳ ಮೂಲಕ 72 ರನ್‌ಗಳನ್ನು ಪೇರಿಸಿದರು.
3000 ಐಪಿಎಲ್ ರನ್ ಗಳಿಸಿ ಅತ್ಯಂತ ಕಿರಿಯ ಆಟಗಾರರು
ಶುಭಮನ್ ಗಿಲ್ : 24 ವರ್ಷ, 215 ದಿನಗಳು
ವಿರಾಟ್ ಕೊಹ್ಲಿ : 26 ವರ್ಷ, 186 ದಿನಗಳು
ಸಂಜು ಸ್ಯಾಮ್ಸನ್ : 26 ವರ್ಷ 320 ದಿನಗಳು
ಸುರೇಶ್ ರೈನಾ : 27 ವರ್ಷ 161 ದಿನಗಳು
ರೋಹಿತ್ ಶರ್ಮಾ : 27 ವರ್ಷ, 342 ದಿನಗಳು
ಬಟ್ಲರ್ ದಾಖಲೆ ಹಿಂದಿಕ್ಕಿದ ಸ್ಯಾಮ್ಸನ್
ಗುಜರಾತ್ ಟೈಟನ್ಸ್ ವಿರುದ್ಧ ಅಬ್ಬರದ ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ಮೈಲಿಗಲ್ಲು ತಲುಪಿದ್ದಾರೆ.
ರಾಜಸ್ಥಾನ ರಾಯಲ್ಸ್ ಪರ ಈವರೆಗೆ ಅತಿ ಹೆಚ್ಚು ಅರ್ಧ ಶತಕಗಳನ್ನು ದಾಖಲಿಸಿರುವ ಆಟಗಾರ ಎಂಬ ಹೆಗ್ಗಳಿಕೆಗೆ ಸಂಜು ಸಾಮ್ಸನ್ ಪಾತ್ರರಾಗಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ ತಮ್ಮ ಉತ್ತಮ ಆಟ ಮುಂದುವರೆಸಿರುವ ಸಂಜು ಸಾಮ್ಸನ್, ಆಂಗ್ಲ ಬ್ಯಾಟರ್ ಜಾಸ್ ಬಟ್ಲರ್ ಅವರನ್ನು ಹಿಂದಿಕ್ಕಿದ್ದಾರೆ.
ಇದುವರೆಗೆ ರಾಜಸ್ಥಾನದ ಪರ 131 ಪಂದ್ಯಗಳನ್ನು ಆಡಿರುವ ಸಂಜು 31.45 ಸರಾಸರಿಯಲ್ಲಿ ಮತ್ತು 139.86 ಸ್ಟ್ರೈಕ್ ರೇಟ್‌ನಲ್ಲಿ 3 ಶತಕ ಮತ್ತು 23 ಅರ್ಧಶತಕಗಳೊಂದಿಗೆ 3,649 ರನ್ ಗಳಿಸಿದ್ದಾರೆ. ಈ ಅಂಕಿ ಅಂಶಗಳನ್ನು ಪರಿಗಣಿಸಿದಾಗ ಅರ್ಧ ಶತಕ ದಾಖಲಿಸಿರುವ ಪಟ್ಟಿಯಲ್ಲಿ ಸಂಜು ಮೊದಲಿಗರಾಗಿದ್ದಾರೆ. ಇನ್ನೊಂದಡೆ, ಬಟ್ಲರ್ ಆರ್ಆರ್ ಪರವಾಗಿ 25 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಇದರಲ್ಲಿ ಆರು ಶತಕಗಳು ಮತ್ತು 18 ಅರ್ಧಶತಕಗಳು ಸೇರಿವೆ. ಹಾಗಾಗಿ ಎರಡನೇ ಸ್ಥಾನದಲ್ಲಿ ಬಟ್ಲರ್ ಇದ್ದಾರೆ.
ಗುಜರಾತ್ಗೆ 3 ವಿಕೆಟ್ ರೋಚಕ ಜಯ
ಶುಭಮನ್ ಗಿಲ್ (72) ಅರ್ಧಶತಕ ಹಾಗೂ ರಶೀದ್ ಖಾನ್ (24 ರನ್, 18ಕ್ಕೆ 1) ಆಲ್‌ರೌಂಡರ್ ಪ್ರದರ್ಶನದ ಬಲದಿಂದ ಗುಜರಾತ್ ಟೈಟನ್ಸ್ ತಂಡ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯದ ಕೊನೆಯ ಚೆಂಡಿನಲ್ಲಿ 3 ವಿಕೆಟ್ ರೋಚಕ ಗೆಲುವು ಪಡೆಯಿತು. ಆ ಮೂಲಕ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
