ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್‌ಗೆ ಜಮೀನು ಒತ್ತುವರಿ ತೆರವು ಮಾಡುವಂತೆ ನೋಟಿಸ್ ಜಾರಿ

Date:

Advertisements
  • 15 ದಿನಗಳಲ್ಲಿ ಜಮೀನು ಒತ್ತುವರಿ ತೆರವುಗೊಳಿಸಲು ಆದೇಶ
  • ತೆರವುಗೊಳಿಸದಿದ್ದರೆ ಬಲಪ್ರಯೋಗ ಮಾಡಲಾಗುವುದು ಎಂದು ಸೂಚನೆ

ವಿಶ್ವಭಾರತಿ ವಿಶ್ವವಿದ್ಯಾಲಯವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಅವರಿಗೆ ಜಮೀನು ಒತ್ತುವರಿ ತೆರವು ಆದೇಶ ಜಾರಿಗೊಳಿಸಿದ್ದು, ಅನಧಿಕೃತವಾಗಿ ಬಳಸುತ್ತಿದ್ದಾರೆ ಎನ್ನಲಾದ 13 ದಶಮಾಂಶ ಜಮೀನನ್ನು ಮೇ 6ರೊಳಗೆ ತೆರವುಗೊಳಿಸಬೇಕೆಂದು ಸೂಚಿಸಿದೆ.

“ಅಮರ್ತ್ಯ ಕುಮಾರ್ ಸೇನ್ ಮತ್ತು ಇತರ ಎಲ್ಲ ಸಂಬಂಧಿತರನ್ನು ತೆರವುಗೊಳಿಸಲು ಅಗತ್ಯವಿದ್ದರೆ ಬಲ ಪ್ರಯೋಗ ಮಾಡಲಾಗುವುದು. 13 ದಶಮಾಂಶ ಜಮೀನು 50 ಅಡಿ ಉದ್ದ ಹಾಗೂ 111 ಅಡಿ ಅಗಲದ ವಿಸ್ತೀರ್ಣ ಹೊಂದಿದ್ದು, ವಿವಿಯ ವಾಯುವ್ಯ ಪ್ರದೇಶದಲ್ಲಿದೆ,” ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಅಮರ್ತ್ಯ ಸೇನ್ ಕಾನೂನುಬದ್ಧವಾಗಿ 1.25 ಎಕರೆ ಜಮೀನು ಮಾತ್ರ ಹೊಂದಿರಬಹುದಾಗಿದೆ (ಗುತ್ತಿಗೆ ಅವಧಿಯ ಉಳಿದ ಸಮಯಕ್ಕಾಗಿ). ಅವರು ಆ ಜಾಗದಲ್ಲಿ 1.38 ಎಕರೆ ಜಮೀನು ಬಳಸುವಂತಿಲ್ಲ. ಭಾರತ ಸರ್ಕಾರದ ಸುತ್ತೋಲೆಗಳು ಮತ್ತು ಸಿಎಜಿ ವರದಿಗಳ ಪಾಲನೆ ಮಾಡುವ ದೃಷ್ಟಿಯಿಂದ ಈ ಶತಮಾನದಷ್ಟು ಹಳೆಯದಾದ ವಿಶ್ವವಿದ್ಯಾಲಯವು ಒತ್ತುವರಿಗಳನ್ನು ತೆರವುಗೊಳಿಸಿ ಸಚಿವಾಲಯಕ್ಕೆ ವರದಿ ಸಲ್ಲಿಸುವ ಅಗತ್ಯವಿದೆ” ಎಂದು ಜಂಟಿ ರಿಜಿಸ್ಟ್ರಾರ್ ಆಶಿಷ್ ಮಹತೊ ಅವರು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ? 10 ವರ್ಷಗಳ ನಂತರ ಪಾಕ್ ಸಚಿವ ಭಾರತಕ್ಕೆ ಭೇಟಿ; ಜೈಶಂಕರ್‌ ಆಹ್ವಾನ ಹಿನ್ನೆಲೆ ಆಗಮನ

ಸೇನ್ ಅವರ ಪೂರ್ವಜರ ಮನೆ ʻಪ್ರತಿಚಿʼ ಶಾಂತಿನಿಕೇತನದಲ್ಲಿದ್ದು, ಅವರು ಶಾಂತಿನಿಕೇತನಕ್ಕೆ ಬಂದಾಗ ಅಲ್ಲಿಯೇ ಉಳಿದುಕೊಳ್ಳುತ್ತಾರೆ. ಕೆಲ ದಿನಗಳ ಹಿಂದೆ ವಿಶ್ವಭಾರತಿ ವಿಶ್ವವಿದ್ಯಾಲಯವು ಸೇನ್ ಅವರಿಗೆ ನೋಟಿಸ್ ಜಾರಿಗೊಳಿಸಿತ್ತು. ಆದರೆ ಇದಕ್ಕೆ ಅವರು ನೀಡಿದ್ದ ಉತ್ತರ ಸಮರ್ಪಕವಾಗಿಲ್ಲ ಹಾಗೂ ಈ ಜಮೀನಿನ ಕಾನೂನುಬದ್ಧ ಒಡೆತನ ವಿಶ್ವಭಾರತಿಗೆ ಸೇರಿದ್ದು ಎಂದು ಸಂಸ್ಥೆ ಹೇಳಿದೆ.

ವಿವಿಯ ಆರೋಪವನ್ನು ಅಮರ್ತ್ಯ ಸೇನ್ ನಿರಾಕರಿಸಿದ್ದಾರೆ. 1.25 ಎಕರೆ ಜಮೀನನ್ನು ವಿಶ್ವಭಾರತಿ ಸಂಸ್ಥೆಯು ಅಮರ್ತ್ಯ ಸೇನ್‌ ಅವರ ತಂದೆಗೆ ನಿರ್ದಿಷ್ಟ ಅವಧಿಗೆ ಗುತ್ತಿಗೆ ನೀಡಿದ್ದರೆ, ಈಗ ಪ್ರಸ್ತಾಪಿಸಲಾಗಿರುವ 13 ದಶಮಾಂಶ ಜಮೀನನ್ನು ತಮ್ಮ ತಂದೆ ಖರೀದಿಸಿದ್ದರು. ಇದಕ್ಕೆ ಪೂರಕವಾದ ಎಲ್ಲಾ ದಾಖಲೆಗಳು ತಮ್ಮ ಬಳಿ ಇವೆ ಎಂದು ಅವರು ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X