ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅಮೋಘ ಆಟದಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಲಖನೌ ಸೂಪರ್ ಜೈಂಟ್ಸ್ ವಿರುದ್ಧ 8 ವಿಕೆಟ್‌ಗಳ ಜಯ ಸಾಧಿಸಿತು.
ಈಡನ್ ಗಾರ್ಡನ್‌ನಲ್ಲಿ ನಡೆದ ಐಪಿಎಲ್ 2024ನೇ ಆವೃತ್ತಿಯ 28ನೇ ಪಂದ್ಯದಲ್ಲಿ ಲಖನೌ ನೀಡಿದ್ದ 162 ಗುರಿಯನ್ನು ಬೆನ್ನಟ್ಟಿದ ಕೆಕೆಆರ್ 15.4 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು.
ಮೊದಲ ಮೂರು ಓವರ್‌ಗಳಲ್ಲಿ ಸ್ಪೋಟಕ ಆಟಗಾರರಾದ ಸುನಿಲ್ ನರೈನ್ ಹಾಗೂ ಆಂಗ್ಕ್ರಿಶ್ ರಘುವಂಶಿ ಅವರ ವಿಕೆಟ್ ಕಳೆದುಕೊಂಡು ಕೆಕೆಆರ್ ಆರಂಭಿಕ ಆಘಾತ ಅನುಭವಿಸಿತ್ತು. ಆರಂಭಿಕ ಆಟಗಾರ ಫಿಲ್ ಸಾಲ್ಟ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅವರ ಮೂರನೇ ವಿಕೆಟ್‌ಗೆ ಪೇರಿಸಿದ 120 ರನ್‌ಗಳ ಜೊತೆಯಾಟ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಬಿರುಸಿನ ಆಟವಾಡಿದ ಫಿಲ್ ಸಾಲ್ಟ್ 47 ಚೆಂಡುಗಳಲ್ಲಿ 14 ಬೌಂಡರಿ ಹಾಗೂ 3 ಸಿಕ್ಸ್‌ರ್‌ಗಳೊಂದಿಗೆ 89 ರನ್ ಚಚ್ಚಿದರು. ಫಿಲ್‌ಗೆ ಜೊತೆ ನೀಡಿದ ನಾಯಕ ಶ್ರೇಯಸ್ ಅಯ್ಯರ್ 38 ಚೆಂಡುಗಳಲ್ಲಿ 6 ಬೌಂಡರಿಗಳೊಂದಿಗೆ 38 ರನ್ ಗಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಯಲಾಗುತ್ತಿರುವ ಸುಳ್ಳುಗಳು, ಬೆತ್ತಲಾಗುತ್ತಿರುವ ಬಿಜೆಪಿ
ಈ ಗೆಲುವಿನೊಂದಿಗೆ ಕೆಕೆಆರ್ 4 ಬಾರಿ ಜಯದ ನಗೆ ಬೀರಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಲಖನೌ 3 ಗೆಲುವು ಹಾಗೂ ಮೂರು ಸೋಲಿನೊಂದಿಗೆ 5ನೇ ಸ್ಥಾನದಲ್ಲಿದೆ.
ಇದಕ್ಕೂ ಮುನ್ನ ಟಾಸ್ ಗೆದ್ದ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಲಖನೌ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು.
ಕೆಕೆಆರ್ ಬೌಲರ್‌ಗಳ ಎದುರು ಲಖನೌ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಡಿದರು. ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ (10) ಹೆಚ್ಚು ಹೊತ್ತು ನಿಲ್ಲಲಿಲ್ಲ. ದೀಪಕ್ ಹೂಡ(8) ಕೂಡ ಸ್ಟಾರ್ಕ್ ಬೌಲಿಂಗ್‌ನಲ್ಲಿ ಔಟಾದರು.
ಬಿರುಸಿನ ಆಟವಾಡುವ ಮಾರ್ಕಸ್ ಸ್ಟೋನಿಸ್ 10 ರನ್ ಗಳಿಸಿ ವರುಣ್ ಚಕ್ರವರ್ತಿ ಬೌಲಿಂಗ್‌ನಲ್ಲಿ ಪೆವಿಲಿಯನ್‌ಗೆ ತೆರಳಿದರು.
ಕೊನೆಯಲ್ಲಿ 32 ಚೆಂಡುಗಳಲ್ಲಿ 4 ಸಿಕ್ಸರ್, 2 ಸಿಕ್ಸರ್‌ಗಳಿಂದಿಗೆ ಬಿರುಸಿನ ಆಟವಾಡಿದ ನಿಕಲೊಸ್ ಪೋರನ್, 39 ರನ್ ಗಳಿಸಿದ ನಾಯಕ ಕೆ ಎಲ್ ರಾಹುಲ್(27 ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂ 29 ರನ್ ಗಳಿಸಿದ ಆಯೂಶ್ ಬದೋನಿ ಅವರ ಆಟದ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್ ಕಲೆ ಹಾಕಿತು.
ಕೆಕೆಆರ್ ಪರ ಮಿಷಲ್ ಸ್ಟಾರ್ಕ್ 28/3, ವೈಭವ್ ಅರೋರಾ, ಸುನಿಲ್ ನರೈನ್, ವರುಣ್ ಚಕ್ರವರ್ತಿ ಹಾಗೂ ಆಂಡ್ರೆ ರಸೆಲ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
