ಪೊಲೀಸ್ ಅಧಿಕಾರಿ ಆಗಬೇಕೆಂಬ ರಾಜ್ಯದ ಯುವಜನರ ಭವಿಷ್ಯವನ್ನೇ ಹಾಳು ಮಾಡಿದ್ದ ಪಿಎಸ್‌ಐ ಹಗರಣದ ಕಿಂಗ್‌ಪಿನ್ ಆರ್.ಡಿ ಪಾಟೀಲ್ ಮನೆಗೆ ಕಲಬುರಗಿ ಬಿಜೆಪಿ ಅಭ್ಯರ್ಥಿ, ಸಂಸದ ಉಮೇಶ್ ಜಾಧವ್ ಭೇಟಿ ನೀಡಿದ್ದಾರೆ. ಆರ್.ಡಿ ಪಾಟೀಲ್ ಮನೆಯಲ್ಲಿ ಊಟೋಪಚಾರ ಮಾಡಿದ್ದಾರೆ. ಸಂದ ಜಾಧವ್ ನಡೆಯ ವಿರುದ್ಧ ಕಲಬುರ್ಗಿ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಪಿಎಸ್‌ಐ ನೇಮಕಾತಿ ಹಗರಣದಿಂದಾಗಿ 58,000ಕ್ಕೂ ಹೆಚ್ಚು ಯುವಜನರ ಪೊಲೀಸ್ ಆಗುವ ಕನಸು ಕಮರಿ ಹೋಗಿದೆ. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಆರ್.ಡಿ ಪಾಟೀಲ್ ಜೈಲು ಸೇರಿದ್ದಾರೆ. ಇದೀಗ, ಆತನ ಮನೆಗೆ ಉಮೇಶ್ ಜಾಧವ್ ಭೇಟಿ ನೀಡಿದ್ದು, ಬೆಂಬಲ ಕೇಳಿದ್ದಾರೆ.
ಉಮೇಶ್ ಜಾಧವ್ ಭೇಟಿಯು ಬಿಜೆಪಿಗೆ ತಿರುಗು ಬಾಣವಾಗಿ ಪರಿಣಮಿಸಿದೆ. ಭೇಟಿಯನ್ನು ಸಮರ್ಥಸಿಕೊಳ್ಳುವುದು ಜಿಲ್ಲೆಯ ಬಿಜೆಪಿ ಕಾರ್ಯಕರ್ತರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಆರೋಪಿ ಮನೆಗೆ ಭೇಟಿ ನೀಡಿರುವ ಜಾಧವ್, ಯಾವ ನೀಡಲು ಮುಂದಾಗಿದ್ದಾರೆ? ಎಂಬ ಪ್ರಶ್ನೆ ಕ್ಷೇತ್ರದಲ್ಲಿ ಎದುರಾಗಿದೆ.