ವಿದ್ಯಾರ್ಥಿಗಳು ಕೇಸರಿ ಉಡುಪು ಧರಿಸಿದ್ದನ್ನು ಪ್ರಾಂಶುಪಾಲರು ಪ್ರಶ್ನಿಸಿದ ನಂತರ ಗುಪೊಂದು ಶಾಲೆಯ ಮೇಲೆ ದಾಳಿ ಮಾಡಿ ಇಬ್ಬರು ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಘಟನೆ ತೆಲಂಗಾಣ ದ ಮಂಚರಿಯಲ್ ಜಿಲ್ಲೆಯ ಮಿಷನರಿ ಶಾಲೆಯಲ್ಲಿ ಎರಡು ದಿನಗಳ ಹಿಂದೆ(ಏ.15) ನಡೆಸಿದೆ
ಈ ನಡುವೆ ವಿದ್ಯಾರ್ಥಿಗಳ ಪೋಷಕರು ಕೂಡ ಪ್ರಾಂಶುಪಾಲರು ಒಳಗೊಂಡು ಶಾಲೆಯ ಇಬ್ಬರು ಸಿಬ್ಬಂದಿ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ಹಾಗೂ ಧರ್ಮಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.
ಹೈದರಾಬಾದ್‌ನಿಂದ 250 ಕಿಮೀ ದೂರದಲ್ಲಿರುವ ಕನ್ನೆಪಲ್ಲಿ ಗ್ರಾಮದಲ್ಲಿ ಇರುವ ಮದರ್ ತೆರೇಸಾ ಪ್ರೌಢಶಾಲೆಯಲ್ಲಿ ಪ್ರಾಂಶುಪಾಲರಾದ ಜೈಮೊನ್ ಜೋಸೆಫ್ ಅವರು ಕೆಲವು ವಿದ್ಯಾರ್ಥಿಗಳು ಕೇಸರಿ ಉಡುಪು ಧರಿಸಿದ್ದನ್ನು ಪ್ರಶ್ನಿಸಿದ್ದರು.
ಪ್ರಾಂಶುಪಾಲರ ಪ್ರಶ್ನೆಗೆ ಉತ್ತರಿಸಿದ ವಿದ್ಯಾರ್ಥಿಗಳು ಹನುಮಾನ್ ಧೀಕ್ಷ ಕಾರ್ಯಕ್ರಮದ ಅಂಗವಾಗಿ ಉಡುಪು ಧರಿಸಿರುವುದಾಗಿ ತಿಳಿಸಿದ್ದರು. ಈ ವಿಷಯದ ಬಗ್ಗೆ ಚರ್ಚಿಸಲು ತಮ್ಮ ಪೋಷಕರನ್ನು ಕರೆದುಕೊಂಡು ಬರುವಂತೆ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಸೂಚಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ
ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಗುಂಪೊಂದು ಶಾಲೆಯ ಮೇಲೆದಾಳಿ ನಡೆಸಿ ಶಾಲೆಯ ಕೆಲವು ಆಸ್ತಿಪಾಸ್ತಿಗಳನ್ನು ನಾಶಪಡಿಸಿದೆ. ಇಬ್ಬರು ಸಿಬ್ಬಂದಿ ಮೇಲೆಯೂ ದಾಳಿ ನಡೆಸಲಾಗಿದೆ.
ಗಲಭೆ ನಡೆದ ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಸ್ಥಳದಿಂದ ಆಚೆ ಕಳಿಸಿದ್ದಾರೆ. ವೈರಲ್ ಆಗುತ್ತಿರುವ ಒಂದು ವಿಡಿಯೋದಲ್ಲಿ ಗುಂಪು ಮದರ್ ತೆರೇಸಾ ಶಾಲೆಯ ಆವರಣದಲ್ಲಿ ಕಲ್ಲುಗಳನ್ನು ಎಸೆಯುತ್ತಿರುವುದು ಕಂಡುಬಂದಿದೆ.
ಗುಂಪಿನಲ್ಲಿದ್ದ ಕೆಲವರು ಪ್ರಾಂಶುಪಾಲರನ್ನು ಸುತ್ತುವರಿದು ಹಣೆಗೆ ಕುಂಕುಮ ಇಡುವಂತೆ ಒತ್ತಾಯಿಸಿದ್ದು, ಕ್ಷಮೆ ಕೇಳುವಂತೆ ಆಗ್ರಹಿಸಿದ ಫೋಟೋ ಹಾಗೂ ಭಾವಚಿತ್ರಗಳು ವೈರಲ್ ಆಗಿವೆ.
The school principal found a few students attending class wearing religious dress ( Hanuman deeksha, part of a 21-day special religious ritual) instead of uniform on April 15. He didn't allow them to wear Hanuman deeksha, This escalated after it was informed to elders at… pic.twitter.com/i9d3zkdMb1
— Mohammed Zubair (@zoo_bear) April 17, 2024
