ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪ್ರೊಪಗ್ಯಾಂಡಗಳ ವಿರುದ್ಧ ಟೊಂಕಕಟ್ಟಿ ನಿಂತಿರುವ ದೇಶದ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ, ಕನ್ನಡ ಸೇರಿ ಐದು ಭಾಷೆಗಳಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸುವ ಮೂಲಕ ಠಕ್ಕರ್ ನೀಡಲು ಮುಂದಾಗಿದ್ದಾರೆ.
ಧ್ರುವ್ ರಾಠಿಯವರು ಇತ್ತೀಚೆಗೆ ಬಿಡುಗಡೆಗೊಳಿಸಿದ್ದ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿತ್ತು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹಾಗೂ ವಿಪಕ್ಷಗಳ ನಡುವಿನ ಹಲವು ವಿಚಾರಗಳಿಗೆ ಸ್ಪಷ್ಟ ರೂಪವನ್ನು ಈ ವೀಡಿಯೊ ನೀಡಿತ್ತು. ವಿಡಿಯೋದಲ್ಲಿ ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆ ಗೆಲ್ಲಲು ವಿಪಕ್ಷಗಳನ್ನು ಹೇಗೆ ಕಟ್ಟಿ ಹಾಕಿದೆ? ಉನ್ನತ ತನಿಖಾ ಸಂಸ್ಥೆಗಳನ್ನು ಹೇಗೆ ದುರ್ಬಳಕೆ ಮಾಡಿದೆ ಎನ್ನುವ ಬಗ್ಗೆ ದಾಖಲೆ ಸಹಿತವಾಗಿ ವಿವರಿಸಿದ್ದರು.
ಕಾಂಗ್ರೆಸ್ ಪಕ್ಷದ ಖಾತೆಗಳನ್ನು ಬ್ಲಾಕ್ ಮಾಡಿರುವುದು, ರಾಹುಲ್ ಗಾಂಧಿ ಅವರನ್ನು ತಡೆಯಲು ಬಿಜೆಪಿ ಏನೇನು ಮಾಡಿದೆ. ಎಲೆಕ್ಷನ್ ಬಾಂಡ್‌ಗಳು ರಾಜಕೀಯ ನಾಯಕರ ಬಂಧನಕ್ಕೆ ಹೇಗೆ ಕಾರಣವಾಗಿದೆ ಎನ್ನುವುದನ್ನು ಸಾಕಷ್ಟು ಆಧಾರಗಳೊಂದಿಗೆ ತಮ್ಮ ಪ್ರಮುಖ ಹಿಂದಿ ಚಾನೆಲ್‌ನಲ್ಲಿ ವಿವರಿಸಿದ್ದರು.
Launching in 5 Indian Languages today!
Share with your friends from these states! The most important video is already live on these channels.
Tamil-https://t.co/iIAY46UONr
Telugu- https://t.co/uHUFmMWOY2
Bengali-https://t.co/Ps41JJ8VuC
Kannada-https://t.co/UTgIvoU8bf… pic.twitter.com/vuKfLctR8h
— Dhruv Rathee (@dhruv_rathee) April 18, 2024
ಆ ಬಳಿಕ ಬಲಪಂಥೀಯರು ಹಾಗೂ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಬೆಂಬಲಿಗರು ಇವರನ್ನು ಗುರಿಯಾಗಿರಿಸಿದ್ದರು. ಹೀಗಾಗಿ, ತನ್ನ ಸಂದೇಶಗಳು ದೇಶದ ಪ್ರತಿಯೊಬ್ಬ ಮತದಾರನಿಗೂ ತಲುಪಬೇಕು ಎನ್ನುವ ನಿಟ್ಟಿನಲ್ಲಿ ‘ಮಿಷನ್ 100 ಕೋಟಿ’ ಎಂಬ ಯೋಜನೆಯನ್ನು ಘೋಷಿಸಿದ್ದರು. ಇದರ ಬೆನ್ನಲ್ಲೇ ಎಐ ತಂತ್ರಜ್ಞಾನ ಬಳಸಿಕೊಂಡು ಇಂದು ಕನ್ನಡ ಸೇರಿ ಐದು ಭಾಷೆಗಳಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಧ್ರುವ್ ರಾಠಿ, “ತಮಿಳು, ತೆಲುಗು, ಬೆಂಗಾಳಿ, ಕನ್ನಡ, ಮರಾಠಿ ಸೇರಿ ಇಂದು 5 ಭಾರತೀಯ ಭಾಷೆಗಳಲ್ಲಿ ನನ್ನ ವಿಡಿಯೋ ಬಿಡುಗಡೆಯಾಗಿದೆ. ಈ ರಾಜ್ಯಗಳ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಪ್ರಮುಖ ವೀಡಿಯೊ ಈಗಾಗಲೇ ಈ ಚಾನಲ್‌ಗಳಲ್ಲಿ ಲೈವ್ ಆಗಿದೆ” ಎಂದು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
Reality of MODI KI GUARANTEE
More than 25 politicians who were accused of thousands of crores of corruption scam are now in BJP.
— Dhruv Rathee (@dhruv_rathee) April 16, 2024
ಈ ಟ್ವೀಟ್ ಸದ್ಯ ವೈರಲಾಗುತ್ತಿದ್ದು, ಜನರು ತಮ್ಮ ಇಷ್ಟದ ಭಾಷೆಗಳನ್ನು ಆಯ್ಕೆ ಮಾಡಿಕೊಂಡು Subscribers ಆಗುತ್ತಿದ್ದಾರೆ. ಧ್ರುವ್ ರಾಠಿಯವರ ಪ್ರಮುಖ ಹಿಂದಿ ಚಾನೆಲ್ ಈಗಾಗಲೇ ಒಂದು ಕೋಟಿ 78 ಲಕ್ಷ(17.8M) Subcribers ಹೊಂದಿದ್ದಾರೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸದ್ಯ ಜರ್ಮನಿಯಿಂದ ವಾಪಸ್ ಭಾರತಕ್ಕೆ ಆಗಮಿಸಿರುವ ಧ್ರುವ್ ರಾಠಿ, ಬಿಜೆಪಿ ಹರಡುತ್ತಿರುವ ನಿರಂತರ ಸುಳ್ಳುಗಳ ವಿರುದ್ಧ ಬಹಿರಂಗವಾಗಿಯೇ ಸಮರ ಸಾರಿದ್ದಾರೆ. ಇತ್ತೀಚೆಗೆ ಬಿಜೆಪಿ ಬಿಡುಗಡೆಗೊಳಿಸಿದ್ದಂತಹಾ ಚುನಾವಣಾ ಪ್ರಣಾಳಿಕೆಯು ಎಷ್ಟು ಸುಳ್ಳಿನಿಂದ ಕೂಡಿದೆ ಎಂಬುದನ್ನು ಜನರಿಗೆ ಮನಮುಟ್ಟುವಂತೆ ತಿಳಿಸಿದ್ದಾರೆ.
ದೇಶದ ಪ್ರಮುಖ ಟಿವಿ ಚಾನೆಲ್‌ಗಳು ಜನರ ಸಮಸ್ಯೆಗಳಿಗೆ ಕಿವಿಗೊಡದ ಹಿನ್ನೆಲೆಯಲ್ಲಿ ಜನರು ಧ್ರುವ್ ರಾಠಿಯಂತಹ ಹಲವಾರು ಯೂಟ್ಯೂಬರ್ಸ್‌ಗಳನ್ನು ನೆಚ್ಚಿಕೊಂಡು, ಅವರನ್ನು ಫಾಲೋ ಮಾಡುತ್ತಿದ್ದಾರೆ.

Congratulations to Dhruv Rathee 🙏
ಸತ್ಯಮೇವ ಜಯತೇ 💪