“ಲೋಕಸಭೆ ಚುನಾವಣೆಯ ಮೊದಲ ಹಂತದ ಬಗ್ಗೆ ಮಾತನಾಡಿದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರು “ಬಿಜೆಪಿಯ ‘400 ಪಾರ್’ ಸಿನಿಮಾವು ಮೊದಲ ದಿನವೇ ಸೂಪರ್ ಫ್ಲಾಪ್ ಆಗಿದೆ” ಎಂದು ಶನಿವಾರ ವ್ಯಂಗ್ಯವಾಡಿದ್ದಾರೆ.
“ಮಹಾಘಟಬಂಧನ್ ಮೊದಲ ಹಂತದಲ್ಲಿ ಎಲ್ಲಾ ನಾಲ್ಕು ಸ್ಥಾನಗಳನ್ನು ಗೆಲ್ಲುತ್ತಿದೆ. ನಾವು ಬ್ಲಾಕ್ವಾರು ಸಭೆಗಳನ್ನು ನಡೆಸಿದ್ದೇವೆ ಮತ್ತು ಪ್ರತಿಕ್ರಿಯೆ ತುಂಬಾ ಚೆನ್ನಾಗಿದೆ. ಬಿಜೆಪಿಯ ‘400 ಪಾರ್’ ಚಿತ್ರವು ಮೊದಲ ದಿನವೇ ಸೂಪರ್ ಫ್ಲಾಪ್ ಆಗಿದೆ. ಬಿಹಾರದ ಜನರು ಜಾಗೃತರಾಗಿದ್ದು, ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ” ಎಂದಿದ್ದಾರೆ.
#WATCH | Patna, Bihar: Former Deputy CM of Bihar RJD leader Tejashwi Yadav says, “We are winning all 4 seats (of the first phase) and we are in a good position. We have got a good feedback. BJP’s ‘400 Paar’ film became a super flop on the very first day…the people of Bihar are… pic.twitter.com/GY1lvKtwdi
— ANI (@ANI) April 20, 2024
“ಮೊದಲ ಹಂತದಲ್ಲಿ ಯಾವುದೇ ಪೈಪೋಟಿ ಇಲ್ಲ. ಬಿಹಾರ ಈ ಬಾರಿ ಆಘಾತಕಾರಿ ಫಲಿತಾಂಶ ನೀಡಲಿದೆ ಎಂದು ನಾವು ಮೊದಲೇ ಸಾಕಷ್ಟು ಬಾರಿ ಹೇಳಿದ್ದೆವು” ಎಂದು ತೇಜಸ್ವಿ ಯಾದವ್ ತಿಳಿಸಿದರು.
ಇದನ್ನು ಓದಿದ್ದೀರಾ? 400 ಸ್ಥಾನ ಗೆಲ್ಲುತ್ತೇವೆ ಅಂತಿದ್ದಾರೆ 420 ನಂಬರ್‌ನವರು: ನಟ ಪ್ರಕಾಶ್ ರಾಜ್
“ಅವರು (ಬಿಜೆಪಿ) ಬಿಹಾರದ ಜನರಿಗೆ ಏನನ್ನೂ ಮಾಡಿಲ್ಲ. 2014 ಮತ್ತು 2019 ರಲ್ಲಿ ಮೋದಿ ಅವರು ನೀಡಿದ ಭರವಸೆಗಳನ್ನು ಈಡೇರಿಸಲಿಲ್ಲ. ಈಗ ಅವರ ಹೇಳಿಕೆಗಳು ಮತ್ತು ಸುಳ್ಳು ಭರವಸೆಗಳಿಂದ ಸಾರ್ವಜನಿಕರು ಬೇಸತ್ತಿದ್ದಾರೆ. ನಾವು ಬಿಹಾರಕ್ಕೆ ವಿಶೇಷ ಸ್ಥಾನಮಾನದ ಜೊತೆಗೆ ವಿಶೇಷ ಪ್ಯಾಕೇಜ್ ನೀಡುತ್ತೇವೆ ಎಂದು ಭರವಸೆ ನೀಡಿದ್ದೇವೆ” ಎಂದು ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದರು.
“ಮಹಾಘಟಬಂಧನ್ ಮತ್ತು ಇಂಡಿಯಾ ಬಣ ಒಟ್ಟಾಗಿ ಕೆಲಸ ಮಾಡುತ್ತಿವೆ. ಹಣದುಬ್ಬರ, ಬಡತನ ಮತ್ತು ಹೂಡಿಕೆಯ ಜೊತೆಗೆ ಬಿಹಾರದಲ್ಲಿ ನಿರುದ್ಯೋಗವು ದೊಡ್ಡ ಸಮಸ್ಯೆಯಾಗಿದೆ. ವಲಸೆ ಮತ್ತು ಪ್ರವಾಹದ ಸಮಸ್ಯೆಯೂ ಇದೆ. ಈ ಬಾರಿ ಬಿಜೆಪಿ ತುಂಬಾ ಚಿಂತೆಗೆ ಒಳಗಾಗಿದೆ” ಎಂದರು.
“ಅವರು (ಬಿಜೆಪಿ) ಸಂವಿಧಾನ ರದ್ದು ಮಾಡುವುದಾಗಿ ಹೇಳುತ್ತಾರೆ. ಯಾರು ಸಂವಿಧಾನವನ್ನು ನಾಶಪಡಿಸುತ್ತಾರೋ ಅವರೇ ನಾಶವಾಗುತ್ತಾರೆ” ಎಂದು ಯಾದವ್ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಬಿಜೆಪಿಗೆ 100 ಕೋಟಿ ರೂ. ಕೊಟ್ಟು 14,400 ಕೋಟಿ ರೂ. ಗುತ್ತಿಗೆ ಪಡೆದ ಮೇಘಾ ಇಂಜಿನಿಯರಿಂಗ್ ಕಂಪನಿ
ಚುನಾವಣಾ ಆಯೋಗದ ಪ್ರಕಾರ, ಬಿಹಾರದಲ್ಲಿ ಮೊದಲ ಹಂತದಲ್ಲಿ ಶೇಕಡ 48.88ರಷ್ಟು ಮತದಾನವಾಗಿದೆ. ಜಮುಯಿ, ನವಾಡ, ಗಯಾ ಮತ್ತು ಔರಂಗಾಬಾದ್ ಎಂಬ ನಾಲ್ಕು ಸ್ಥಾನಗಳಿಗೆ ಶುಕ್ರವಾರ ಮತದಾನ ನಡೆದಿದೆ.
2019 ರ ಲೋಕಸಭಾ ಚುನಾವಣೆಯಲ್ಲಿ, ಜೆಡಿಯು ಮತ್ತು ಎಲ್‌ಜೆಪಿ ಒಳಗೊಂಡಿರುವ ಬಿಜೆಪಿ ನೇತೃತ್ವದ ಎನ್‌ಡಿಎ 40 ಸ್ಥಾನಗಳಲ್ಲಿ 39 ಸ್ಥಾನಗಳನ್ನು ಪಡೆದುಕೊಂಡಿದ್ದರೆ, ಮಹಾಘಟಬಂಧನ್ ಕೇವಲ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.