ಬಿಜೆಪಿಗೆ 100 ಕೋಟಿ ರೂ. ಕೊಟ್ಟು 14,400 ಕೋಟಿ ರೂ. ಗುತ್ತಿಗೆ ಪಡೆದ ಮೇಘಾ ಇಂಜಿನಿಯರಿಂಗ್ ಕಂಪನಿ

Date:

ಚುನಾವಣಾ ಬಾಂಡ್‌ ರೂಪದಲ್ಲಿ 100 ಕೋಟಿ ರೂ. ದೇಣಿಗೆ ಕೊಟ್ಟ ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಟರ್ ಲಿಮಿಟೆಡ್ ಕಂಪನಿ(ಎಂಇಐಎಲ್) 14,400 ಕೋಟಿ ರೂ.ಗಳ ಗುತ್ತಿಗೆ ಪಡೆದಿದೆ ಎಂದು ಹಿರಿಯ ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿರುವ ಪ್ರಶಾಂತ್ ಭೂಷಣ್, ಏಪ್ರಿಲ್‌ 11, 2023ರಲ್ಲಿ ಚುನಾವಣಾ ಬಾಂಡ್‌ ರೂಪದಲ್ಲಿ ಮಹಾರಾಷ್ಟ್ರದ ಬಿಜೆಪಿ ಸರ್ಕಾರಕ್ಕೆ 100 ಕೋಟಿ ರೂ. ದೇಣಿಗೆ ನೀಡಿತ್ತು. ದೇಣಿಗೆ ನೀಡಿ ಒಂದು ತಿಂಗಳ ನಂತರ ಮಹಾರಾಷ್ಟ್ರ ಸರ್ಕಾರದಿಂದ ಥಾಣೆ-ಬೊರಿವಲಿಯಲ್ಲಿ 14,400 ಕೋಟಿ ರೂ. ವೆಚ್ಚದ ಅವಳಿ ಸುರಂಗ ಯೋಜನೆಯನ್ನು ಗುತ್ತಿಗೆ ಪಡೆದಿತ್ತು ಎಂದಿದ್ದಾರೆ.

ಎಸ್‌ಬಿಐ ಅಂಕಿಅಂಶಗಳಲ್ಲಿ ಬಾಂಡ್‌ಗಳ ಸಂಖ್ಯೆಗಳನ್ನು ಮುಚ್ಚಿಟ್ಟಿದೆ. ಕೆಲವು ದಾನಿಗಳು ಮತ್ತು ಪಕ್ಷಗಳ ಹೊಂದಾಣಿಕೆಯನ್ನು ಇಲ್ಲಿ ಊಹಿಸಬಹುದು. ಹಲವು ದೇಣಿಗೆದಾರರು ದೇಣಿಗೆ ಕೊಟ್ಟು ಲಾಭ ಪಡೆದುಕೊಂಡಿದ್ದಾರೆ ಎಂದು ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ ಘೋಷಿಸಿದ ಐದು ಗ್ಯಾರಂಟಿ ಮತ್ತು ಆರ್ಥಿಕತೆಯ ನಿಜನೋಟ

ಎಸ್‌ಬಿಐ ಬಿಡುಗಡೆ ಮಾಡಿರುವ ಅಂಕಿಅಂಶಗಳಲ್ಲಿ ಅತಿ ಹೆಚ್ಚು ದೇಣಿಗೆ ನೀಡಿದ ಪಕ್ಷಗಳಲ್ಲಿ ಮೇಘಾ ಇಂಜಿನಿಯರಿಂಗ್ ಕಂಪನಿ 966 ಕೋಟಿ ರೂ. ದೇಣಿಗೆ ನೀಡುವುದರೊಂದಿಗೆ ಎರಡನೇ ಸ್ಥಾನದಲ್ಲಿದೆ.

ಮೇ 11, 2023 ರಂದು ಮೇಘಾ ಇಂಜಿನಿಯರಿಂಗ್ ಕಂಪನಿ 7,464 ಕೋಟಿ ರೂ. ಬಿಡ್‌ ಮಾಡಿ ಥಾಣೆ-ಬೊರಿವಲಿಯಲ್ಲಿ 5.57 ಕಿ.ಮೀ ದೂರದ ಅವಳಿ ಸುರಂಗ ಯೋಜನೆಯನ್ನು ಗುತ್ತಿಗೆ ಪಡೆದಿತ್ತು.

ಸುರಂಗ ನಿರ್ಮಿಸಿದ ಎಂಇಐಎಲ್ ಕಂಪನಿ ಕಾರ್ಯವೈಖರಿ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಲೋಕಸಭೆಯಲ್ಲಿ ಹೊಗಳಿದ್ದರು.

ಹೈದರಾಬಾದ್‌ ಮೂಲದ ಎಂಇಐಎಲ್ ಕಂಪನಿ ಎಲ್‌ ಅಂಡ್‌ ಟಿ ಬಿಡ್‌ ಮಾಡಿದ 6,625 ಕೋಟಿ ರೂ. ಹೆಚ್ಚು ಬಿಡ್‌ ಮಾಡಿ 14,400 ಕೋಟಿ ರೂ. ಗುತ್ತಿಗೆಯನ್ನು ತನ್ನದಾಗಿಸಿಕೊಂಡಿತ್ತು. ಪಿ ಪಿ ರೆಡ್ಡಿ ಎಂಇಐಎಲ್‌ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದು, ಭಾರತದ ಶ್ರೀಮಂತರ ಪಟ್ಟಿಯಲ್ಲಿ ಪ್ರಮುಖ ಸ್ಥಾನದಲ್ಲಿದ್ದಾರೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೇ.10 ರಂದು ಸುಪ್ರೀಂನಿಂದ ಕೇಜ್ರಿವಾಲ್ ಮಧ್ಯಂತರ ಜಾಮೀನು ಆದೇಶ

ದೆಹಲಿ ಅಬಕಾರಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌...

ಅಯೋಧ್ಯೆ, ಕಾಶಿ, ಮಥುರಾ ನಂತರ ಅಜ್ಮೀರ್ ಮಸೀದಿ ಮೇಲೆ ಸಂಘಿಗಳ ಕಣ್ಣು

ಸಂಘ ಪರಿವಾರದ ಮುಖಂಡರು, ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸದಸ್ಯರು ಹಾಗೂ...

ಖಾಸಗಿಯವರಿಗೆ ನೀಡಿದ ಗುತ್ತಿಗೆಗಳನ್ನು ಕಾರಣಗಳನ್ನು ನೀಡದೆ ರದ್ದುಗೊಳಿಸಬಾರದು: ಸುಪ್ರೀಂ ಕೋರ್ಟ್

ಖಾಸಗಿಯವರೆಗೆ ನೀಡಿರುವ ಗುತ್ತಿಗೆಗಳನ್ನು ಕಾರಣಗಳನ್ನು ನೀಡದೆ ರದ್ದುಗೊಳಿಸಬಾರದು ಎಂದು ಹೇಳಿರುವ ಸುಪ್ರೀಂ...