ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಭಾನುವಾರ ವಾಗ್ದಾಳಿ ನಡೆಸಿದ್ದು, “ಬಿಜೆಪಿ ಪಕ್ಷವು ರಾಜಕೀಯ ಪಕ್ಷವಾಗಿ ಉಳಿದಿಲ್ಲ, ಬದಲಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆರಾಧಿಸುವ ಭಕ್ತಗಣವಾಗಿದೆ” ಎಂದು ಹೇಳಿದ್ದಾರೆ.
“ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ” ಎಂದು ಹೇಳಿದ ಚಿದಂಬರಂ ಅವರು, ಪ್ರಜಾಪ್ರಭುತ್ವವನ್ನು ಮತ್ತೆ ನಮ್ಮ ದೇಶದಲ್ಲಿ ಸ್ಥಾಪಿಸಿ ಎಂದು ಆಗ್ರಹಿಸಿದ್ದಾರೆ.
#WATCH | Thiruvananthapuram, Kerala: Congress leader P Chidambaram says, “…We will repeal, amend and review the following sets of laws- CAA 2019, it is top of the list. The Farmers Produce, Trade and Commerce Promotion of Facilitation Act 2020, the Bharatiya Nyaya (Second)… pic.twitter.com/jKu7k2cGfE
— ANI (@ANI) April 21, 2024
ಇನ್ನು ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಉಲ್ಲೇಖಿಸದಿದ್ದರೂ, ಇಂಡಿಯಾ ಬಣ ಅಧಿಕಾರಕ್ಕೆ ಬಂದ ನಂತರ ಸಿಎಎ ರದ್ದುಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಇದನ್ನು ಓದಿದ್ದೀರಾ? ಕಾಂಗ್ರೆಸ್‌ಗೆ ನೀಡಿರುವ ಐಟಿ ನೋಟಿಸ್ ಎಲ್ಲ ವಿಪಕ್ಷಗಳಿಗೆ ಎಚ್ಚರಿಕೆ ಸಂದೇಶ: ಪಿ ಚಿದಂಬರಂ
ತಮಿಳುನಾಡಿನ ಎಲ್ಲಾ 39 ಸ್ಥಾನಗಳು ಮತ್ತು ಚುನಾವಣೆ ಮುಗಿದ ಪಾಂಡಿಚೇರಿಯ ಒಂದು ಸ್ಥಾನವನ್ನು ಇಂಡಿಯಾ ಒಕ್ಕೂಟ ಗೆಲ್ಲಲಿದೆ ಎಂದು ಚಿದಂಬರಂ ಭರವಸೆ ವ್ಯಕ್ತಪಡಿಸಿದರು.
“ಪ್ರಣಾಳಿಕೆ ಎಂಬ ಹೆಸರಿಲ್ಲದ ಪ್ರಣಾಳಿಕೆಯನ್ನು ಬಿಜೆಪಿಯು 14 ದಿನಗಳಲ್ಲಿ ರಚಿಸಿದೆ. ಅವರು ಅದನ್ನು ಮೋದಿ ಗ್ಯಾರಂಟಿ ಎಂದು ಕರೆದಿದ್ದಾರೆ. ಬಿಜೆಪಿ ಇನ್ನು ಮುಂದೆ ರಾಜಕೀಯ ಪಕ್ಷವಾಗಿ ಉಳಿದಿಲ್ಲ. ಬದಲಾಗಿ ಭಕ್ತಗಣವಾಗಿ ಬದಲಾಗಿದೆ. ನರೇಂದ್ರ ಮೋದಿ ಅವರನ್ನು ಆರಾಧಿಸುವ ಭಕ್ತಗಣವಾಗಿದೆ” ಎಂದು ಚಿದಂಬರಂ ಟೀಕಿಸಿದರು.
ಇದನ್ನು ಓದಿದ್ದೀರಾ? ಬಿಜೆಪಿ ಅಜೆಂಡಾದಂತೆ ಸಂವಿಧಾನಕ್ಕೆ ತಿದ್ದುಪಡಿ ತಂದರೆ ಸಂಸದೀಯ ಪ್ರಜಾಪ್ರಭುತ್ವ ಉಳಿಯಲ್ಲ: ಪಿ ಚಿದಂಬರಂ
“ಬಿಜೆಪಿಯಲ್ಲಿರುವ ವ್ಯಕ್ತಿ ಆರಾಧನೆಯನ್ನು ‘ಮೋದಿ ಕಿ ಗ್ಯಾರಂಟಿ’ ಎಂಬುವುದು ಎತ್ತಿ ತೋರಿಸುತ್ತದೆ. ಭಾರತದಲ್ಲಿ ಆ ಆರಾಧನೆಯು ಬಲಗೊಳ್ಳಲು ಪ್ರಾರಂಭಿಸಿದೆ ಮತ್ತು ಸರ್ವಾಧಿಕಾರಕ್ಕೆ ಕಾರಣವಾಗುತ್ತದೆ” ಎಂದು ಅಭಿಪ್ರಾಯಿಸಿದರು.
“ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಭಾರೀ ಧಕ್ಕೆ ಉಂಟು ಮಾಡಿದೆ. ಮೋದಿ ಮೂರನೇ ಬಾರಿಗೆ ಮತ್ತೆ ಅಧಿಕಾರಕ್ಕೆ ಬಂದರೆ, ಅವರು ಸಂವಿಧಾನವನ್ನು ತಿದ್ದುಪಡಿ ಮಾಡಬಹುದು. ಹಾಗಿರುವಾಗ ನಾವು ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಬೇಕಾಗಿದೆ” ಎಂದು ಚಿದಂಬರಂ ಪುನರುಚ್ಛರಿಸಿದರು.