ಶ್ರೀಲಂಕಾದ ದಿಯಾತಲಾವಾದಲ್ಲಿ ಭಾನುವಾರ ನಡೆದ ಫಾಕ್ಸ್ ಹಿಲ್ ಸೂಪರ್ ಕ್ರಾಸ್ 2024 ರೇಸಿಂಗ್ ಈವೆಂಟ್ನಲ್ಲಿ ರೇಸಿಂಗ್ ಕಾರು ಪ್ರೇಕ್ಷಕರೆಡೆಗೆ ನುಗ್ಗಿದ್ದು ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಎಂಟು ವರ್ಷದ ಮಗುವೂ ಸೇರಿದೆ.
ಎರಡು ಅತಿವೇಗದ ರೇಸಿಂಗ್ ಕಾರುಗಳು ನಿಯಂತ್ರಣ ತಪ್ಪಿ ವೀಕ್ಷಕರ ಗುಂಪಿನೆಡೆಗೆ ನುಗ್ಗಿದೆ. ಈ ಕಾರಣದಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಮಾಧ್ಯಮ ವಕ್ತಾರ ಡಿಐಜಿ ನಿಹಾಲ್ ತಲ್ದುವಾ ತಿಳಿಸಿರುವುದಾಗಿ ಶ್ರೀಲಂಕಾ ಮೂಲದ ಡೈಲಿ ಮಿರರ್ ವರದಿ ಮಾಡಿದೆ.
UPDATE:
Apologies, it was a sports-related crash, with no connection to any political rally.
A racing car went off the track and drove into a crowd of spectators during the “Fox Hill Super Cross 2024” race in Sri Lanka.
Seven people were killed and at least 20 were injured. pic.twitter.com/fkHDgU3tTL— FlashFeed (@FlashFeed365) April 21, 2024
ಗಾಯಾಳುಗಳನ್ನು ದೀಯತಲಾವ ಮೂಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಗಂಭೀರ ಗಾಯಗೊಂಡ ಮೂವರನ್ನು ಬದುಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನು ಓದಿದ್ದೀರಾ? ಚುನಾವಣಾ ಪ್ರಚಾರದ ವೇಳೆ ಶೋಭಾ ಕರಂದ್ಲಾಜೆ ಕಾರು ಅಪಘಾತ: ಬಿಜೆಪಿ ಕಾರ್ಯಕರ್ತ ಸಾವು
ಮೃತರು ಶ್ರೀಲಂಕಾದ ಅವಿಸ್ಸಾವೆಲ್ಲಾ, ಮಾತಾರಾ, ಅಕುರೆಸ್ಸಾ ಮತ್ತು ಸೀದುವಾ ಪ್ರದೇಶದವರು ಆಗಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಇನ್ನು ಈ ಭೀಕರ ಅಪಘಾತದ ನಂತರ ಸಂಘಟಕರು ಎಲ್ಲಾ ಕಾರು ರೇಸ್ಗಳನ್ನು ರದ್ದುಗೊಳಿಸಿದ್ದಾರೆ ಎಂದು ಡೈಲಿ ಮಿರರ್ ವರದಿ ಹೇಳಿದೆ.
ಶ್ರೀಲಂಕಾ ಮಿಲಿಟರಿ ಅಕಾಡೆಮಿ ದಿಯಾತಲಾವಾ ಮತ್ತು ಶ್ರೀಲಂಕಾ ಆಟೋಮೊಬೈಲ್ ಸ್ಪೋರ್ಟ್ಸ್ನ ಸಹಯೋಗದಲ್ಲಿ ಫಾಕ್ಸ್ ಹಿಲ್ ಸೂಪರ್ ಕ್ರಾಸ್ನ ಅತ್ಯಾಕರ್ಷಕ 28 ನೇ ಆವೃತ್ತಿಯನ್ನು ಈ ಭಾನುವಾರ ದಯತಲಾವಾದಲ್ಲಿ ಆರಂಭಿಸಲಾಗಿತ್ತು.