ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ರಕ್ತದಲ್ಲಿ ಸಕ್ಕರೆ ಪ್ರಮಾಣ ಅಧಿಕವಾದ ಕಾರಣ ಸೋಮವಾರ ರಾತ್ರಿ ತಿಹಾರ್ ಜೈಲಿನಲ್ಲಿ ಇನ್ಸುಲಿನ್ ನೀಡಲಾಗಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ತಿಹಾರ್ ಜೈಲಿನ ಅಧಿಕಾರಿ “ಏಮ್ಸ್ ವೈದ್ಯರ ಸಲಹೆಯಂತೆ ಕೇಜ್ರಿವಾಲ್ ಅವರಿಗೆ ಎರಡು ಯೂನಿಟ್ ಲೋ ಡೋಸ್ ಇನ್ಸುಲಿನ್ ನೀಡಲಾಗಿದೆ. ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ 217ರಷ್ಟಿತ್ತು. ಆ ಕಾರಣ ಇನ್ಸುಲಿನ್ ನೀಡುವ ನಿರ್ಧಾರ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
ಆದರೆ ಕೇಜ್ರಿವಾಲ್ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು 320ಕ್ಕೆ ತಲುಪಿತ್ತು. ಆದರೂ ಇನ್ಸುಲಿನ್ ನೀಡಿರಲಿಲ್ಲ. ಸಕ್ಕರೆ ಪ್ರಮಾಣ ನಿರಂತರವಾಗಿ ಹೆಚ್ಚಾಗಿ ಈಗ 320ಕ್ಕೆ ತಲುಪಿದಾಗ ಇನ್ಸುಲಿನ್ ನೀಡಲಾಗಿದೆ” ಎಂದು ಎಎಪಿ ಹೇಳಿದೆ.
ಇದನ್ನು ಓದಿದ್ದೀರಾ? ಜೈಲಿನಲ್ಲಿ ಇನ್ಸುಲಿನ್ ನಿರಾಕರಣೆ; ಬಿಜೆಪಿ ಕೇಜ್ರಿವಾಲ್‌ರನ್ನು ಕೊಲ್ಲಲು ಬಯಸುತ್ತಾ: ಸಂಜಯ್ ಸಿಂಗ್
“ಮುಖ್ಯಮಂತ್ರಿ ಹೇಳಿದ್ದು ಸರಿ, ಅವರಿಗೆ ಇನ್ಸುಲಿನ್ ಬೇಕು ಎಂಬುದು ಇಂದು ಸ್ಪಷ್ಟವಾಗಿದೆ. ಆದರೆ ಬಿಜೆಪಿಯ ಕೇಂದ್ರ ಸರ್ಕಾರದ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಅವರಿಗೆ ಚಿಕಿತ್ಸೆ ನೀಡುತ್ತಿಲ್ಲ. ಇನ್ಸುಲಿನ್ ಅಗತ್ಯವಿಲ್ಲದಿದ್ದರೆ ಈಗ ಏಕೆ ನೀಡುತ್ತಿದ್ದೀರಿ, ಹೇಳಿ ಬಿಪಿಯವರೇ” ಎಂದು ದೆಹಲಿ ಸಚಿವ ಮತ್ತು ಎಎಪಿ ನಾಯಕ ಸೌರಭ್ ಭಾರದ್ವಾಜ್ ಪ್ರಶ್ನಿಸಿದ್ದಾರೆ.
ಇನ್ನು ಕೇಜ್ರಿವಾಲ್ ಅವರ ವೈದ್ಯಕೀಯ ಅಗತ್ಯಗಳನ್ನು, ವಿಶೇಷವಾಗಿ ಇನ್ಸುಲಿನ್‌ಗೆ ಸಂಬಂಧಿಸಿದಂತೆ ನಿರ್ಣಯಿಸಲು ವೈದ್ಯಕೀಯ ಮಂಡಳಿಯನ್ನು ರಚಿಸುವಂತೆ ಸಿಟಿ ನ್ಯಾಯಾಲಯವು ಏಮ್ಸ್‌ಗೆ ನಿರ್ದೇಶನ ನೀಡಿತ್ತು. ಮನೆಯಲ್ಲಿ ತಯಾರಿಸಿದ ಆಹಾರ ಮತ್ತು ವೈದ್ಯರು ಸೂಚಿಸಿದ ಆಹಾರಕ್ರಮವನ್ನು ಪಾಲಿಸಲು ಕೇಜ್ರಿವಾಲ್ ಅವರಿಗೆ ತಿಳಿಸಲಾಗಿದೆ.
ಆದರೆ ಈ ಆಹಾರಕ್ರಮವನ್ನು ಪಾಲಿಸಲಾಗುತ್ತಿಲ್ಲ, ಸಕ್ಕರೆ ಇರುವ ಆಹಾರ ಸೇವಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಎಂದು ದೆಹಲಿ ನ್ಯಾಯಾಲಯದ ಮುಂದೆ ಆರೋಪವಿರಿಸಿದೆ.
ಇದನ್ನು ಓದಿದ್ದೀರಾ? ‘ನನ್ನ ಪತಿಯ ಹತ್ಯೆಗೆ ಸಂಚು’: ದೆಹಲಿ ಸಚಿವರ ನಂತರ ಕೇಜ್ರಿವಾಲ್ ಪತ್ನಿ ಆರೋಪ
ಇನ್ನು ಕೇಜ್ರಿವಾಲ್ ಅವರು ಇನ್ಸುಲಿನ್ ಅಗತ್ಯವಿದೆ ಎಂದು ಹೇಳಿದರೂ ಕೂಡಾ ಇನ್ಸುಲಿನ್ ನೀಡದರೆ ಕೇಜ್ರಿವಾಲ್ ಅವರಿಗೆ ಹಾನಿ ಮಾಡುವ ಪಿತೂರಿಯನ್ನು ಮಾಡಲಾಗುತ್ತಿದೆ ಎಂದು ಎಎಪಿ ಆರೋಪಿಸಿದೆ.
“ನನ್ನನ್ನು ನೋಡಲು ಬಂದ ಪ್ರತಿಯೊಬ್ಬ ವೈದ್ಯರಿಗೂ ನಾನು ನನ್ನ ಹೆಚ್ಚಿನ ಸಕ್ಕರೆ ಮಟ್ಟದ ಬಗ್ಗೆ ತಿಳಿಸಿದ್ದೇನೆ. ನಾನು ಅವರಿಗೆ ಪ್ರತಿದಿನ ಸಕ್ಕರೆ ಮಟ್ಟದಲ್ಲಿ 250-320ರ ನಡುವೆ ಏರಿಳಿತವಾಗುತ್ತಿದೆ ಎಂದು ತಿಳಿಸಿದ್ದೇನೆ. ಬಹುತೇಕ ಪ್ರತಿದಿನ, ನಾನು ಇನ್ಸುಲಿನ್‌ಗೆ ಬೇಡಿಕೆಯಿದ್ದೇನೆ. ಈಗ ನಾನು ಇನ್ಸುಲಿನ್ ಸಮಸ್ಯೆಯನ್ನು ಎಂದಿಗೂ ಪ್ರಸ್ತಾಪಿಸಲಿಲ್ಲ ಎಂದು ಹೇಗೆ ಹೇಳಿಕೆ ನೀಡುತ್ತಾರೆ” ಎಂದು ಕೇಜ್ರಿವಾಲ್ ಪತ್ರದ ಮೂಲಕ ತಿಳಿಸಿದ್ದಾರೆ.
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಇಡಿ ಬಂಧಿಸಿದೆ. ಏಪ್ರಿಲ್ 1ರಿಂದ ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಮೇ 15 ರಂದು ತನಿಖಾ ಸಂಸ್ಥೆ ತನಗೆ ನೀಡಿದ ಸಮನ್ಸ್‌ಗಳನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಕೇಜ್ರಿವಾಲ್ ಸಲ್ಲಿಸಿದ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.