ಕರ್ನಾಟಕ ರಾಜ್ಯ ಅಹಿಂದ (ಅಲ್ಪಸಂಖ್ಯಾತರ, ಹಿಂದುಳಿದವರ, ದಲಿತ ಒಕ್ಕೂಟ) ಶಿವಮೊಗ್ಗ ಜಿಲ್ಲಾ ಘಟಕದ ಶಿವಮೊಗ್ಗ ನಗರ ಸಾಮಾಜಿಕ ಜಾಲತಾಣದ ಅಧ್ಯಕ್ಷರನ್ನಾಗಿ ಸೈಯದ್ ಜಮೀಲ್‌ರನ್ನು ನೇಮಕ ಮಾಡಿದೆ.
ಕರ್ನಾಟಕ ಅಹಿಂದ ಸಂಘಟನೆಯ ರಾಜ್ಯ ಅಧ್ಯಕ್ಷ ಪ್ರಭುಲಿಂಗ ಎಲ್. ದೊಡ್ಡಣಿ ನಿರ್ದೇಶನ ಮೇರೆಗೆ ನೇಮಕಾತಿ ಮಾಡಲಾಗಿದ್ದು, ಅವರಿಗೆ, ಅಹಿಂದ ಒಕ್ಕೂಟದ ಸಿದ್ಧಾಂತಗಳಿಗೆ ಬದ್ದರಾಗಿ ಅಹಿಂದ ಸಂಘಟನೆಗೆ ಹೆಚ್ಚಿನ ಒತ್ತುಕೊಟ್ಟು ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರತವಾಗಿ ಅಹಿಂದ ಸಂಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತಷ್ಟು ಸದೃಡವಾಗಿ ಮುನ್ನಡೆಸಲು ಕಾರ್ಯನಿರ್ವಹಿಸಬೇಕೆಂದು ಸೂಚನೆ ನೀಡಲಾಗಿದೆ.
ಅಹಿಂದ ಶಿವಮೊಗ್ಗ ಜಿಲ್ಲಾ ಘಟಕ ನೀಡುವ ಸೂಚನೆ ಮತ್ತು ಆದೇಶಗಳ ಅನುಸಾರವಾಗಿ ಜವಾಬ್ದಾರಿ ಮತ್ತು ನೀತಿ ನಿರೋಪನೆಗಳು ಉಲ್ಲಂಘನೆಯಾಗದಂತೆ ಕರ್ತವ್ಯ ನಿರ್ವಹಿಸಲು ಅಹಿಂದ ಸಂಘಟನೆಗೆ ಇಂದಿನಿಂದಲೇ ತೊಡಗಿಸಿಕೊಂಡು ಕಾರ್ಯೋನ್ಮುಖರಾಗಬೇಕೆಂದು ಹಾಗೂ ಅಹಿಂದ ಶಿವಮೊಗ್ಗ ಜಿಲ್ಲಾ ಘಟಕದ ಜೊತೆಯಲ್ಲಿ ನಿರಂತರ ಸಂಪರ್ಕದಲ್ಲಿರುವಂತೆ ಸೂಚಿಸಲಾಗಿದೆ ಎಂದು ಅಹಿಂದ ಸಂಘಟನೆ ಶಿವಮೊಗ್ಗ ಜಿಲ್ಲಾ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.
