ಮಂಡ್ಯ | ವಾಹನ ವ್ಯವಸ್ಥೆ ಇಲ್ಲದೇ ಮತದಾರರ ಪರದಾಟ

Date:

Advertisements

ಕೃಷ್ಣರಾಜಪೇಟೆ ಮತ ಹಾಕಿ ಎಂದು ಮನೆ ಮನೆ ಸುತ್ತುತ್ತಾರೆ. ನಾವು ಮತ ಹಾಕುತ್ತೇವೆಂದರೆ, ದೂರದಿಂದ ಬರುವವರಿಗೆ ಸರಿಯಾಗಿ ವಾಹನದ ವ್ಯವಸ್ಥೆಯೇ ಇಲ್ಲದಾಗಿದೆ. ಅಭ್ಯರ್ಥಿಗಳು ಅಬ್ಬರದ ಪ್ರಚಾರಗಳು, ಭಾಷಣಗಳು ಅವರವರ ಪಕ್ಷದ ಕರಪತ್ರಗಳು ಹಾಗೂ ಪ್ರಣಾಳಿಕೆಯನ್ನು ಹಂಚುತ್ತಾರೆ. ಮತ ಚಲಾಯಿಸಲು ಮತದಾರರಿಗೆ ಬೇಕಾಗುವ ಸವಲತ್ತುಗಳನ್ನು ಮಾಡಿ ಕೊಡುತ್ತಾರೆ. ಆದರೆ, ಆದರೆ, ಮಂಡ್ಯ ಲೋಕಸಭಾ ಕ್ಷೇತ್ರದ ಕೆ.ಆರ್ ಪೇಟೆ ತಾಲೂಕಿಗೆ ಸೇರುವ ರಾಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆಯಲ್ಲಿ ಮತ ಚಲಾಯಿಸಲು ಬರುಲು ಬೇರೆ ಬೇರೆ ಜಿಲ್ಲೆಗೆ ಕೆಲಸಕ್ಕೆಂದು ಹೋಗಿರುವ ಮತದಾರರಿಗೆ ಕಷ್ಟವಾಗುತ್ತಿದೆ.

ಇಂದು ಮತ ಚಲಾಯಿಸಲು ಬರುವವರಿಗೆ ಬಸ್ ಸಂಖ್ಯೆ ಕಡಿಮೆ ಇರುವುದರಿಂದ ಸಮಸ್ಯೆ ಉಂಟಾಗಿದೆ. ಈ ಮತಗಟ್ಟೆಯಲ್ಲಿ ಯಾವುದೇ ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯಿತಿಯಿಂದ ಯಾವುದೇ ಮಾಹಿತಿ ನೀಡಿಲ್ಲ ಹಾಗೂ ವ್ಯವಸ್ಥೆ ಕೂಡ ಸರಿಯಾಗಿ ನಿರ್ವಹಿಸಿಲ್ಲ ಎಂದು ಮತದಾರರು ಆರೋಪಿಸುತ್ತಿದ್ದಾರೆ.

ಕಳೆದ ಸಲ ವಿಧಾನಸಭಾ ಕ್ಷೇತ್ರದಲ್ಲಿ ಮತದಾನವಿದ್ದಾಗ ಆ ಸಮಯದಲ್ಲಿ ಕೂಡ ಒಂದು ಕುಟುಂಬದಲ್ಲಿ 3 ಜನ ಸದಸ್ಯರು ಮತ ಚಲಾಯಿಸಲು ಕಿಕ್ಕೇರಿಯಿಂದ ರಾಮನಹಳ್ಳಿ ಗ್ರಾಮ ಪಂಚಾಯಿತಿ ಸರ್ಕಾರಿ ಶಾಲೆಯಲ್ಲಿ ಮತ ಚಲಾಯಿಸಲೆಂದು 14-15 ಕಿ.ಮೀ ಕಾಲುನಡಿಗೆಯಲ್ಲಿ ಹೋಗಿ ಮತ ಹಾಕಿದ್ದೇವೆ ಎಂದು ಹೇಳುತ್ತಿದ್ದಾರೆ ಗ್ರಾಮಸ್ಥರು.

Advertisements

ಯಾವುದೇ ವಾಹನದ ವ್ಯವಸ್ಥೆ ಮಾಡಿ ಕೊಟ್ಟಿರದ ಕಾರಣ ಅನಾರೋಗ್ಯ ಇದ್ದ ನನ್ನ ಗಂಡ ಬಿಸಿನಲ್ಲಿಯೇ ನಡೆದುಕೊಂಡು ಹೋಗಿ ಮತ ಹಾಕಿದ್ದಾರೆ ಎಂದು ಮಹಿಳೆಯೊಬ್ಬರು ತಮ್ಮ ಅಳಲು ತೋಡಿಕೊಂಡರು.

ಪಕ್ಷದ ಕಾರ್ಯಕರ್ತರು ಹಾಗೂ ಜವಾಬ್ದಾರಿ ತೆಗೆದುಕೊಂಡಿರುವವರಿಗೆ ನೆನ್ನೆ ರಾತ್ರಿ ಗಮನಕ್ಕೆ ತಂದರೂ ಯಾವುದೇ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ನಾವು ಯಾವುದೇ ಪಕ್ಷದಿಂದ ಮತ ಹಾಕಲು ಹಣ ಹಾಗೂ ಆಮಿಷಗಳಿಗೆ ಆಸೆ ಪಡುವುದಿಲ್ಲ ಈ ಸಲ ಮತ ಹಾಕುವುದಕ್ಕೆ ಹೋಗುವುದೇ ಬೇಡ ಅಂದುಕೊಂಡಿದ್ದೆವು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಮತ ಹಾಕುವುದು ನಮ್ಮ ಹಕ್ಕು ಹಾಗೂ ನಾವು ಪ್ರಜಾಪ್ರಭುತ್ವದಲ್ಲಿದ್ದೇವೆಂದರೆ ನಾವು ನಮ್ಮ ಮತ ಹಾಕುವುದು ನಮ್ಮ ಹಕ್ಕು ಎಂದು ತಿಳಿದುಕೊಂಡಿದ್ದೇವೆ ಎಂದು ಗ್ರಾಮಸ್ಥರು ಈ ದಿನ.ಕಾಮ್‌ಗೆ ಹೇಳಿಕೊಂಡಿದ್ದಾರೆ.

ದೊರೆನಹಳ್ಳಿ ಗ್ರಾಮದ ಲಕ್ಷ್ಮಮ್ಮನವರು ಹಾಗೂ ಕುಟುಂಬದವರು  ಈದಿನ.ಕಾಮ್ ಜೊತೆ ಮಾತಾಡಿ, ಬೂತ್‌ಗಳಲ್ಲಿ ಕೆಲಸ ಮಾಡುವ ಪಕ್ಷದ ಅಧ್ಯಕ್ಷರು ಹಾಗೂ ಕಾರ್ಯಕರ್ತರಿಗೆ ಹಣ ಹಚ್ಚುವ ಬದಲು ಮತದಾರರಿಗೆ ಮತ ಹಾಕುವ ಅರಿವು ಹಾಗೂ ವಯಸ್ಸಾದ ವೃದ್ಧರಿಗೆ ಹಾಗೂ ಬಸ್ ವ್ಯವಸ್ಥೆ ಕಡಿಮೆ ಇರುವುದರಿಂದ ವಾಹನದ ವ್ಯವಸ್ಥೆ ಮಾಡಿ ಕೊಡಿ. ನಮ್ಮ ಹಾಗೆ ಬೇರೆ ಭಾಗದಿಂದ ಮತ ಹಾಕಲು ಬರುವವರಿಗೆ ಇಂತಹ ಪರಿಸ್ಥಿತಿ ಎದುರಾಗಬಾರದು ಎಂದರು.

ಇಂದು ಬೆಳಗ್ಗೆ ಗಾಡಿ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದ್ದರು. ಅವರಿಗೆ ಕರೆ ಮಾಡುವಂತೆ ಸ್ಥಳೀಯ ಮುಖಂಡರು ಹೇಳಿದ್ದರು. ಅವರಿಗೆ ಫೊನ್ ಮೂಲಕ ಮಾತಾಡಿ, ಪೆಟ್ರೋಲ್ ಬಂಕ್ ಸೂರಿ ಅಥವಾ ಸುರೇಶ್ ಅವರೆ ನೀವು ಗಾಡಿ ವ್ಯವಸ್ಥೆ ಮಾಡುತ್ತೇವೆಂದು ಹೇಳಿದ್ರಿ ಎಂದು ವಿಚಾರಿಸಿದಾಗ ʼmide ur tongueʼ ಎಂದು ಕೇಳಿ ಯಾವನು ಕೊಟ್ಟವನು ನಂಬರ್ ಎಂದು ಅವಾಚ್ಯವಾಗಿ ನಿಂದಿಸಿ ಫೋನ್ ಕಟ್ ಮಾಡಿದರು ಎಂದು ಕಿಕ್ಕೇರಿ ಹೋಬಳಿ ಮತದಾರರು ಈದಿನ.ಕಾಮ್‌ಗೆ ತಿಳಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಗಿರಿಜಾ ಎಸ್‌ ಜಿ
ಗಿರಿಜಾ ಎಸ್‌ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X