ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಳವಾಗುತ್ತಿದೆ. ಭೀಕರ ಬಿಸಿಲಿನ ತಾಪಕ್ಕೆ ಜನರು ಕಂಗಾಲಾಗಿದ್ದಾರೆ. ನಿರ್ಜಲೀಕರಣ ಉಂಟಾಗಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಆರತಿ (9) ಮತ್ತು ಪ್ರಿಯಾಂಕಾ (7) ಮೃತ ದುರ್ದೈವಿಗಳು. ಇಬ್ಬರೂ ರಾಯಚೂರು ಜಿಲ್ಲೆಯ ಚಿಕ್ಕಸುಗೂರು ಗ್ರಾಮದ ಹುಸೇನಮ್ಮ ಹಾಗೂ ಮಾರುತಿ ದಂಪತಿಯ ಮಕ್ಕಳು. ಅಲ್ಲದೆ, ದಂಪತಿಯ ಮಗ ಲಕ್ಕಪ್ಪ (5)ಮತ್ತು ಮಾರುತಿ ಅವರ ತಂದೆ ಲಕ್ಷ್ಮಣ ಅವರ ಆರೋಗ್ಯ ಪರಿಸ್ಥಿತಿಯೂ ಹದಗಟ್ಟಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಏಪ್ರಿಲ್ 27ರ ಸಾಯಂಕಾಲ ಏಕಾಏಕಿ ನಿರ್ಜಲೀಕರಣ ಸಮಸ್ಯೆ ಕಾಣಿಸಿಕೊಂಡಿದೆ. ಸದ್ಯ ಪುತ್ರ ಲಕ್ಕಪ್ಪ ರಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುಟುಂಬದವರು ಕೃಷ್ಣಾ ನದಿ ನೀರನ್ನ ಕುಡಿಯುತ್ತಿದ್ದರು ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಸಂಸದ ಭಗವಂತ ಖೂಬಾ, ಬಿಜೆಪಿಗೆ ಬಾಯ್ ಬಾಯ್ ಎಂದು ಮನೆಗೆ ಕಳುಹಿಸಿ : ಈಶ್ವರ ಖಂಡ್ರೆ
ದೇಹ ಅತಿಯಾದ ಉಷ್ಣತೆ ಸಹಿಸಿಕೊಳ್ಳೋದು ತುಂಬಾ ಕಷ್ಟ
ಹವಾಮಾನ ವೈಪರಿತ್ಯದಿಂದ ಪ್ರತೀ ವರ್ಷದಂತೆ ಈ ವರ್ಷವು ಬಿಸಿಲಿನ ತಾಪ ಹೆಚ್ಚಾಗಿದೆ. ಈಗಾಗಲೇ ಬೇಸಿಗೆ ಕಾಲ ಪ್ರಾರಂಭವಾಗಿ ದಿನಗಳು ಕಳೆದಿವೆ. ಇನ್ನೂ ಒಂದು ತಿಂಗಳಿಗಿಂತಲೂ ಹೆಚ್ಚು ಬೇಸಿಗೆ ಕಾಲ ಇದೆ. ದೇಹ ಅತಿಯಾದ ಉಷ್ಣತೆಯನ್ನು ಸಹಿಸಿಕೊಳ್ಳೋದು ತುಂಬಾ ಕಷ್ಟ.
ಬೇಸಿಗೆಯಲ್ಲಿ ಬಿಸಿಲಿನ ಶಾಖ ಹೆಚ್ಚಾಗಿರುವುದರಿಂದ ದೇಹದಲ್ಲಿರುವ ನೀರಿನ ಪೋಷಕಾಂಶಗಳೆಲ್ಲವೂ ಶಾಖದಿಂದ ಹೀರಿಕೊಂಡು ಸುಸ್ತು ಉಂಟಾಗುತ್ತದೆ. ಇದರಿಂದ ನೀರಿನಾಂಶದ ಕೊರತೆ ಮಾತ್ರವಲ್ಲ, ಉಪ್ಪಿನಾಂಶದ ಕೊರತೆಯೂ ಉಂಟಾಗುತ್ತದೆ. ಹಾಗಾಗಿ, ಬೇಸಿಗೆಯಲ್ಲಿ ನಾವು ಸೇವಿಸುವ ಆಹಾರ, ಹಣ್ಣು-ತರಕಾರಿಗಳಲ್ಲಿ ನೀರು ಸಮೃದ್ಧವಾಗಿರುವಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ.
ಬೇಸಿಗೆ ಕಾಲದಲ್ಲಿ ನಿರ್ಜಲೀಕರಣ ಉಂಟಾಗುವುದು ಸಾಮಾನ್ಯವಾಗಿದೆ. ಇದಕ್ಕಾಗಿಯೇ ಹಸಿರು ತರಕಾರಿಗಳು, ಹಣ್ಣುಗಳು ಸೇವಿಸುವುದು ದೇಹ ಅದರ ಹೈಡ್ರೇಶನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅದರೊಂದಿಗೆ ಚರ್ಮವನ್ನು ರಕ್ಷಿಸುತ್ತದೆ. ಬೇಸಿಗೆಯಲ್ಲಿ ನಮ್ಮ ದೇಹದ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅಗತ್ಯ.