ಚಿಕ್ಕಬಳ್ಳಾಪುರದಲ್ಲಿ ಶೇ.72 ರಷ್ಟು ಶಾಂತಿಯುತ ಮತದಾನ; ಯಲಹಂಕದಲ್ಲಿ ಡಲ್, ಹೊಸಕೋಟೆಯಲ್ಲಿ ಬಹುತೇಕ ಫುಲ್

Date:

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಶುಕ್ರವಾರ ಶೇ.72 ರಷ್ಟು ಮಂದಿ ಮತ ಚಲಾವಣೆ ಮಾಡಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದ ಶಾಂತಿಯುತ ಮತದಾನಕ್ಕೆ ಕ್ಷೇತ್ರ ಸಾಕ್ಷಿಯಾಯಿತು.

ಬೆಳಿಗ್ಗೆ 7 ಗಂಟೆಯಿಂದ ಆರಂಭವಾದ ಮತದಾನ ಪ್ರಕ್ರಿಯೆಯಲ್ಲಿ ಕ್ಷೇತ್ರದ ಜನತೆ ಸಕ್ರಿಯವಾಗಿ ಪಾಲ್ಗೊಂಡು ಮತದಾನ ಮಾಡುವ ಮೂಲಕ ಹಕ್ಕು ಚಲಾಯಿಸಿದರು.

ಬಿಸಿಲಿನ ಕಾರಣ ಕೆಲವರು ಬೆಳಗ್ಗೆಯೇ ಬಂದು ಮತ ಚಲಾಯಿಸಿದರು. ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.50ರಷ್ಟು ಮತದಾನ ಪೂರ್ಣಗೊಂಡಿತು. ಬಿಸಿಲಿನ ಕಾರಣ ಮಧ್ಯಾಹ್ನ 3 ಗಂಟೆವರೆಗೂ ಮತದಾನ ನಿಧಾನಗತಿಯಲ್ಲಿ ಸಾಗಿತು. 3 ಗಂಟೆ ಬಳಿಕ ಬಿಸಿಲಿನ ತಾಪಮಾನ ತುಸು ಕಡಿಮೆಯಾದ ಬಳಿಕ ಜನ ಹೊರಬಂದು ಮತದಾನಕ್ಕೆ ಮುಂದಾದರು. ಮಧ್ಯಾಹ್ನ 3 ಗಂಟೆ ವೇಳೆಗೆ ಶೇಕಡ 55.90ರಷ್ಟು ಮತದಾನ ಪೂರ್ಣಗೊಂಡಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

5 ಗಂಟೆಗೆ ಬಿಸಿಲಿನ ಧಗೆ ಕಡಿಮೆಯಾದ ಹಿನ್ನೆಲೆ ಮತದಾನಕ್ಕೆ ಬರುವವರ ಸಂಖ್ಯೆ ಹೆಚ್ಚಾಯಿತು. ನಂತರ ಶೇಕಡ 55 ರಷ್ಟಿದ್ದ ಮತದಾನ, 5 ಗಂಟೆ ವೇಳೆಗೆ ಶೇಕಡ 70.97ಕ್ಕೆ ತಲುಪಿತು. ಕೆಲ ಮಂದಿ ಹೊರ ಜಿಲ್ಲೆ ಹಾಗೂ ದೂರದ ಊರುಗಳಿಂದ ಕೊನೆ ಕ್ಷಣದಲ್ಲಿ ಬಂದು ಮತದಾನಕ್ಕೆ ಮುಂದಾದರು. ಕೊನೆ ಕ್ಷಣದಲ್ಲಿ ಬಂದವರಿಗೂ ಮತಗಟ್ಟೆ ಅಧಿಕಾರಿಗಳು ಮತದಾನಕ್ಕೆ ಅವಕಾಶ ಮಾಡಿಕೊಟ್ಟರು. ಸಂಜೆ 6 ರ ಬಳಿಕ ಶೇಕಡ 71.85 ರಷ್ಟು ಮತದಾನವಾಗುವ ಮೂಲಕ ಮತದಾನ ಸುಖಾಂತ್ಯ ಕಂಡಿತು.

ಕರ್ನಾಟಕ ಸರಕಾರದ ವೋಟರ್ ಟರ್ನ್ ಔಟ್ ಆಪ್ ಅಂಕಿ ಅಂಶಗಳ ಪ್ರಕಾರ ಸಂಜೆ 6 ಗಂಟೆ ವೇಳೆಗೆ ಬಾಗೇಪಲ್ಲಿಯಲ್ಲಿ 74%, ಚಿಕ್ಕಬಳ್ಳಾಪುರದಲ್ಲಿ 79.25%, ದೇವನಹಳ್ಳಿಯಲ್ಲಿ 70.63%, ದೊಡ್ಡಬಳ್ಳಾಪುರದಲ್ಲಿ 74.50%, ಗೌರಿಬಿದನೂರಲ್ಲಿ 73.31%, ಹೊಸಕೋಟೆಯಲ್ಲಿ 81.02%, ನೆಲಮಂಗಲದಲ್ಲಿ 73.23%, ಯಲಹಂಕದಲ್ಲಿ 60.69% ಮತದಾನ ನಡೆದಿದೆ.

ಹೊಸಕೋಟೆಯಲ್ಲಿ ಹೆಚ್ಚು ಮತದಾನ : ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬೆಳಗ್ಗೆ ನಿಧಾನಗತಿಯಲ್ಲಿ ಸಾಗಿದ ಮತದಾನವು ಮಧ್ಯಾಹ್ನ 3 ಗಂಟೆ ಸುಮಾರಿಗೆ ಶೇಕಡ 63.84ಕ್ಕೆ ಏರಿಕೆಯಾಯಿತು. ಸಂಜೆ 6 ಗಂಟೆಗೆ ಶೇಕಡ 81.02ಕ್ಕೆ ತಲುಪುವ ಮೂಲಕ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಮತದಾನವಾದ ಕ್ಷೇತ್ರ ಇದಾಯಿತು.

ಯಲಹಂಕದಲ್ಲಿ ಡಲ್ : ಬಿಜೆಪಿ ಶಾಸಕ ಎಸ್ ಆರ್.ವಿಶ್ವನಾಥ್ ಅವರ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 3 ಗಂಟೆಗೆ ಶೇಕಡ 46.18 ರಷ್ಟು ಮತದಾನ ಪೂರ್ಣಗೊಂಡಿದ್ದು, ಸಂಜೆ 5ರ ವೇಳೆಗೆ ಶೇಕಡ 58 ಮತದಾನವಾಯಿತು. ಬಳಿಕ 6 ಗಂಟೆಗೆ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಶೇಕಡ 60.69 ರಷ್ಟು ಮತದಾನ ನಡೆಯಿತು. ಇಡೀ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾನವಾಗಿದ್ದು ಕಂಡುಬಂತು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಿವಿ ಕೇಳಿಸದ, ಮಾತು ಬಾರದ ಮಹಿಳೆಯ 8 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ : ದೂರು ದಾಖಲು

ಒಟ್ಟಾರೆಯಾಗಿ ಅಬ್ಬರದ ಪ್ರಚಾರದ ನಡುವೆ ಚಿಕ್ಕಬಳ್ಳಾಪುರ ಲೋಕಸಭಾ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದೆ ಬಹುತೇಕ ಶಾಂತಿಯುತ ಮತದಾನ ನಡೆಯಿತು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ನೆರೆ ಪೀಡಿತ ಪ್ರದೇಶಗಳಿಗೆ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ

ಮಳೆ, ಪ್ರವಾಹದಿಂದ ಯಾವುದೇ ಅನಾಹುತ ಸಂಭವಿಸದಂತೆ ಉಡುಪಿ ಜಿಲ್ಲಾಡಳಿತ ದಿನದ 24...

ರಾಯಚೂರು | ಗಬ್ಬೂರು ಗ್ರಾಮಕ್ಕೆ ಪದವಿ ಕಾಲೇಜು ನೀಡುವಂತೆ ಪ್ರಗತಿಪರ ಸಂಘಟನೆಗಳ ಒತ್ತಾಯ

ಸರ್ಕಾರ, ನಿರ್ಲಕ್ಷ್ಯ ಧೋರಣೆ ಬಿಟ್ಟು ಗಬ್ಬೂರು ಗ್ರಾಮಕ್ಕೆ ಪದವಿ ಕಾಲೇಜು ನೀಡುವಂತೆ...

ಕಲಬುರಗಿ | ಸಿಮೆಂಟ್‌ ಕಾರ್ಖಾನೆಯಲ್ಲಿ ಕಾರ್ಮಿಕ ಸಾವು; 2 ತಿಂಗಳಲ್ಲಿ 4ನೇ ದುರಂತ

ಸಿಮೆಂಟ್‌ ಕಾರ್ಖಾನೆಯಲ್ಲಿ ಬೃಹತ್ ಟ್ಯಾಂಕರ್ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ,...

ಬೀದರ್‌ | ವಿದ್ಯುತ್‌ ಸ್ಪರ್ಶ: ಸ್ಥಳದಲ್ಲೇ ವ್ಯಕ್ತಿ ಸಾವು

ವಿದ್ಯುತ್‌ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬಸವಕಲ್ಯಾಣ ತಾಲೂಕಿನ ಲಾಡವಂತಿ...