ರಾಯಚೂರು | ಬಿಸಿಲಿನ ತಾಪಕ್ಕೆ ನಿರ್ಜಲೀಕರಣ; ಇಬ್ಬರು ಮಕ್ಕಳು ಸಾವು

Date:

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಳವಾಗುತ್ತಿದೆ. ಭೀಕರ ಬಿಸಿಲಿನ ತಾಪಕ್ಕೆ ಜನರು ಕಂಗಾಲಾಗಿದ್ದಾರೆ. ನಿರ್ಜಲೀಕರಣ ಉಂಟಾಗಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

- Advertisement -

ಆರತಿ (9) ಮತ್ತು ಪ್ರಿಯಾಂಕಾ (7) ಮೃತ ದುರ್ದೈವಿಗಳು. ಇಬ್ಬರೂ ರಾಯಚೂರು ಜಿಲ್ಲೆಯ ಚಿಕ್ಕಸುಗೂರು ಗ್ರಾಮದ ಹುಸೇನಮ್ಮ ಹಾಗೂ ಮಾರುತಿ ದಂಪತಿಯ ಮಕ್ಕಳು. ಅಲ್ಲದೆ, ದಂಪತಿಯ ಮಗ ಲಕ್ಕಪ್ಪ (5)ಮತ್ತು ಮಾರುತಿ ಅವರ ತಂದೆ ಲಕ್ಷ್ಮಣ ಅವರ ಆರೋಗ್ಯ ಪರಿಸ್ಥಿತಿಯೂ ಹದಗಟ್ಟಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಲಕ್ಷ್ಮಣ್ @ 89: ‘ಅಚಲ’ ಆಶಾವಾದಿ – ಹಸಿರು...

89ನೇ ವಸಂತಕ್ಕೆ ಕಾಲಿಡುತ್ತಿರುವ ಎ.ಸಿ. ಲಕ್ಷ್ಮಣ್ ಅವರು ಭರವಸೆ ಮತ್ತು ಆಶಾವಾದದ ಸಂಕೇತವಾಗಿದ್ದಾರೆ. ತಮ್ಮ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ ಎಂಬ ದೃಢ ನಂಬಿಕೆಯೊಂದಿಗೆ, ಅವರು ರೈತರಿಗೆ ಮಾರ್ಗದರ್ಶನ ನೀಡುತ್ತಾ, ಪರಿಸರವನ್ನು ರಕ್ಷಿಸುತ್ತಾ, ಮುಂದಿನ...

ಟಾಟಾ ಸನ್ಸ್ ಬೋರ್ಡ್ ರೂಮ್ ಕಲಹದ ಆಳ ಅಗಲವೇನು...

ಭಾರತದ ಭಾರೀ ಉದ್ಯಮ ಬ್ರ್ಯಾಂಡ್‌ಗಳಲ್ಲಿ ಒಂದು ಟಾಟಾ. ಉಪ್ಪಿನಿಂದ ಹಿಡಿದು ಉಕ್ಕು, ಕಾರು, ಐಟಿ, ಹೋಟೆಲ್, ವಿಮಾನಯಾನ, ಎಲೆಕ್ಟ್ರಿಕ್ ವಾಹನ, ಈಗ ಸೆಮಿಕಂಡಕ್ಟರ್‌ವರೆಗೆ ಟಾಟಾ ಸಾಮ್ರಾಜ್ಯ ವ್ಯಾಪಿಸಿದೆ. ಆದರೆ, ಈಗ ಇದೇ ಟಾಟಾ ಸಾಮ್ರಾಜ್ಯದ...

ESA ತೂಗುಗತ್ತಿ: ಕಸ್ತೂರಿ ರಂಗನ್ ವರದಿ ಕುರಿತು ಅರಣ್ಯ...

“ಗ್ರಾಮದ ಕನಿಷ್ಠ 20 ಪ್ರತಿಶತದಷ್ಟು ಪ್ರದೇಶವು ‘ಪರಿಸರ ಸೂಕ್ಷ್ಮ ಪ್ರದೇಶ’ (ESA) ಎಂದು ಕಂಡುಬಂದರೆ, ಉಳಿದ 80% ಪ್ರದೇಶ ನಗರೀಕರಣಗೊಂಡಿದ್ದರೂ ಇಡೀ ಗ್ರಾಮವನ್ನು ESA ಎಂದು ಪರಿಗಣಿಸುವ ನೀತಿಯನ್ನು ಕಸ್ತೂರಿ ರಂಗನ್ ವರದಿ...

ಏಪ್ರಿಲ್ 27ರ ಸಾಯಂಕಾಲ ಏಕಾಏಕಿ ನಿರ್ಜಲೀಕರಣ ಸಮಸ್ಯೆ ಕಾಣಿಸಿಕೊಂಡಿದೆ. ಸದ್ಯ ಪುತ್ರ ಲಕ್ಕಪ್ಪ ರಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ‌ ಪಡೆಯುತ್ತಿದ್ದಾರೆ. ಈ ಕುಟುಂಬದವರು ಕೃಷ್ಣಾ ನದಿ ನೀರನ್ನ ಕುಡಿಯುತ್ತಿದ್ದರು ಎಂದು ತಿಳಿದುಬಂದಿದೆ.

ಈ ಸುದ್ದಿ ಓದಿದ್ದೀರಾ? ಬೀದರ್‌ | ಸಂಸದ ಭಗವಂತ ಖೂಬಾ, ಬಿಜೆಪಿಗೆ ಬಾಯ್ ಬಾಯ್ ಎಂದು ಮನೆಗೆ ಕಳುಹಿಸಿ : ಈಶ್ವರ ಖಂಡ್ರೆ

ದೇಹ ಅತಿಯಾದ ಉಷ್ಣತೆ ಸಹಿಸಿಕೊಳ್ಳೋದು ತುಂಬಾ ಕಷ್ಟ

ಹವಾಮಾನ ವೈಪರಿತ್ಯದಿಂದ ಪ್ರತೀ ವರ್ಷದಂತೆ ಈ ವರ್ಷವು ಬಿಸಿಲಿನ ತಾಪ ಹೆಚ್ಚಾಗಿದೆ. ಈಗಾಗಲೇ ಬೇಸಿಗೆ ಕಾಲ ಪ್ರಾರಂಭವಾಗಿ ದಿನಗಳು ಕಳೆದಿವೆ. ಇನ್ನೂ ಒಂದು ತಿಂಗಳಿಗಿಂತಲೂ ಹೆಚ್ಚು ಬೇಸಿಗೆ ಕಾಲ ಇದೆ. ದೇಹ ಅತಿಯಾದ ಉಷ್ಣತೆಯನ್ನು ಸಹಿಸಿಕೊಳ್ಳೋದು  ತುಂಬಾ ಕಷ್ಟ.

ಬೇಸಿಗೆಯಲ್ಲಿ ಬಿಸಿಲಿನ ಶಾಖ ಹೆಚ್ಚಾಗಿರುವುದರಿಂದ ದೇಹದಲ್ಲಿರುವ ನೀರಿನ ಪೋಷಕಾಂಶಗಳೆಲ್ಲವೂ ಶಾಖದಿಂದ ಹೀರಿಕೊಂಡು ಸುಸ್ತು ಉಂಟಾಗುತ್ತದೆ. ಇದರಿಂದ ನೀರಿನಾಂಶದ ಕೊರತೆ ಮಾತ್ರವಲ್ಲ, ಉಪ್ಪಿನಾಂಶದ ಕೊರತೆಯೂ ಉಂಟಾಗುತ್ತದೆ. ಹಾಗಾಗಿ, ಬೇಸಿಗೆಯಲ್ಲಿ ನಾವು ಸೇವಿಸುವ ಆಹಾರ, ಹಣ್ಣು-ತರಕಾರಿಗಳಲ್ಲಿ ನೀರು ಸಮೃದ್ಧವಾಗಿರುವಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ.

ಬೇಸಿಗೆ ಕಾಲದಲ್ಲಿ ನಿರ್ಜಲೀಕರಣ ಉಂಟಾಗುವುದು ಸಾಮಾನ್ಯವಾಗಿದೆ. ಇದಕ್ಕಾಗಿಯೇ ಹಸಿರು ತರಕಾರಿಗಳು, ಹಣ್ಣುಗಳು ಸೇವಿಸುವುದು ದೇಹ ಅದರ ಹೈಡ್ರೇಶನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅದರೊಂದಿಗೆ ಚರ್ಮವನ್ನು ರಕ್ಷಿಸುತ್ತದೆ. ಬೇಸಿಗೆಯಲ್ಲಿ ನಮ್ಮ ದೇಹದ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅಗತ್ಯ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಕರ್ತವ್ಯಲೋಪ ಆರೋಪದಡಿ ಡಿಎಚ್‌ಒ ಡಾ. ರಾಜಕುಮಾರ್ ಯರಗಲ್ ಅಮಾನತು

ಕರ್ತವ್ಯಲೋಪ, ಆಡಳಿತಾತ್ಮಕ ನಿರ್ಲಕ್ಷ್ಯ ಹಾಗೂ ಇಲಾಖೆಯ ಸೂಚನೆಗಳನ್ನು ಪಾಲಿಸದೆ ಕಾರ್ಯನಿರ್ವಹಿಸಿದ ಆರೋಪದ...

ಅ.15ರಿಂದ ಬಾಗಲಕೋಟೆ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ತರಗತಿ ಆರಂಭ

ಬಾಗಲಕೋಟೆ ಜಿಲ್ಲೆಯ ಬಹು ವರ್ಷಗಳ ಬೇಡಿಕೆಯ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ...

ರಾಯಚೂರು | ಅನಧಿಕೃತ ವಿದ್ಯುತ್ ಬಳಕೆ; ಜೆಸ್ಕಾಂನಿಂದ ₹18.95 ಲಕ್ಷ ದಂಡ

ಜೆಸ್ಕಾಂ ಇಲಾಖೆಯಿಂದ ಜಿಲ್ಲೆಯಲ್ಲಿ ಆಗಸ್ಟ್‌ನಲ್ಲಿ ಜೆಸ್ಕಾಂ ಅಧಿಕಾರಿಗಳು, ಜಾಗೃತದಳದವರು ದಾಳಿ ಮಾಡಿ...