ಖಾಸಗಿ ಸಂಪತ್ತಿನ ಬಗ್ಗೆ ರಾಹುಲ್ ಮಾತನಾಡಿಲ್ಲ; ಬಿಜೆಪಿ ಗೊಂದಲ ಸೃಷ್ಟಿಸುತ್ತಿದೆ: ಸಿಎಂ ರೇವಂತ್ ರೆಡ್ಡಿ

Date:

Advertisements

ತೆಲಂಗಾಣದಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿ, ಅಧಿಕಾರ ಹಿಡಿದ ಕೆಲ ತಿಂಗಳುಗಳಲ್ಲೇ ಲೋಕಸಭಾ ಚುನಾವಣೆ ನಡೆಯುತ್ತಿದೆ. ತೆಲಂಗಾಣದಲ್ಲಿ ಕಾಂಗ್ರೆಸ್‌ ಪ್ರಚಾರವನ್ನು ಮುಖ್ಯಮಂತ್ರಿ ರೇವಂತ್ ರೆಡ್ಡಿ ಮುನ್ನಡೆಸುತ್ತಿದ್ದಾರೆ. ದಕ್ಷಿಣ ರಾಜ್ಯಗಳಲ್ಲಿ ತನ್ನ ಪ್ರಾಬಲ್ಯವನ್ನು ಮರಳಿ ಗಟ್ಟಿ ಮಾಡಿಕೊಳ್ಳಲು ಕಾಂಗ್ರೆಸ್‌ ಮುಂದಾಗಿದ್ದು, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಸ್ಥಳೀಯ ನಾಯಕರ ನೇತೃತ್ವದಲ್ಲಿ ಚುನವಣೆಯನ್ನು ಎದುರಿಸುತ್ತಿದೆ. ಆಂಧ್ರ, ಕೇರಳ, ತಮಿಳುನಾಡಿನಲ್ಲಿ ಮೈತ್ರಿ ಪಕ್ಷಗಳೊಂದು ಮುನ್ನಡೆಯುತ್ತಿದೆ.

ತೆಲಂಗಾಣದಲ್ಲಿ ಕಾಂಗ್ರೆಸ್‌ಅನ್ನು ಮುನ್ನಡೆಸುತ್ತಿರುವ ರೇವಂತ್ ರೆಡ್ಡಿ ಅವರನ್ನು ‘ದಿ ಇಂಡಿಯನ್ ಎಕ್ಸ್‌ಪ್ರೆಸ್‌‘ ಸಂದರ್ಶನ ಮಾಡಿದೆ. ಅವರು ಜಾತಿ ಗಣತಿ, ಉತ್ತರ-ದಕ್ಷಿಣ ವಿಭಜನೆ, ಸಂಪತ್ತು ಮರುಹಂಚಿಕೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಪ್ರಶ್ನೆ: ನೀವು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದೀರಿ. ಆ ಪ್ರಾಬಲ್ಯವನ್ನು ಕಾಪಾಡಿಕೊಳ್ಳಲು ನೀವು ಹೇಗೆ ಯೋಜಿಸುತ್ತಿದ್ದೀರಿ?

Advertisements

ಉ: ದ್ವಿಮುಖ ತಂತ್ರವಿದೆ. ಒಂದು ನಮ್ಮ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದು. ತೆಲಂಗಾಣ ಜನತೆಗೆ ಏನು ಭರವಸೆ ನೀಡಿದ್ದೇವೋ ಅದನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ಆರು ಪ್ರಮುಖ ಗ್ಯಾರಂಟಿಗಳಲ್ಲಿ, ನಾವು ಐದು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ರಾಜ್ಯ ಚುನಾವಣೆಯಲ್ಲಿ ನಾವು ಕೆಸಿಆರ್ ಮತ್ತು ಅವರ ರಾಜಕೀಯವನ್ನು ಸೋಲಿಸಿದ್ದೇವೆ.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 10 ವರ್ಷಗಳ ಕಾಲ ಅಡಳಿತ ನಡೆಸಿದ್ದಾರೆ. ಆದರೆ, ಅವರು ಭರವಸೆಗಳನ್ನು ಈಡೇರಿಸಿಲ್ಲ. ಆಂಧ್ರಪ್ರದೇಶ ಮರುಸಂಘಟನೆ ಕಾಯ್ದೆ-2014ರ ಅಡಿಯಲ್ಲಿ ತೆಲಂಗಾಣದ ಅಭಿವೃದ್ಧಿಗಾಗಿ ಕೆಲವು ಭರವಸೆಗಳನ್ನು ಕೇಂದ್ರ ಸರ್ಕಾರ ನೀಡಿತ್ತು. ಆದರೆ, ಯಾವುದನ್ನೂ ಜಾರಿಗೆ ತಂದಿಲ್ಲ. ಕೇಂದ್ರ ಸರ್ಕಾರದ ನಿರ್ಣಯಗಳನ್ನು ಮೋದಿ ಎಂದಿಗೂ ಗೌರವಿಸಿಲ್ಲ. ಮೋದಿ ಅವರು ತೆಲಂಗಾಣ ವಿರೋಧಿಯಾಗಿದ್ದಾರೆ. ತೆಲಂಗಾಣ ರಚನೆ ಕಾರಣಕ್ಕೆ ಅವರು ಕಾಂಗ್ರೆಸ್ ಅನ್ನು ನಿಂದಿಸಿದ್ದಾರೆ. ತೆಲಂಗಾಣ ರಚನೆ ಮಸೂದೆಯನ್ನು ಅಂಗೀಕರಿಸಿದ್ದು ಕಾಂಗ್ರೆಸ್. ತೆಲಂಗಾಣ ರಚನೆಯನ್ನು ವಿರೋಧಿಸಿದ ಮೋದಿ, ಈಗ ಇಲ್ಲಿಗೆ ಬಂದು ಹೇಗೆ ಮತ ಹೇಳುತ್ತಾರೆ?

ಪ್ರಶ್ನೆ: ಈ ಚುನಾವಣೆಯಲ್ಲಿ ನೀವು ಯಾವುದರ ಗಮನಹರಿಸುತ್ತೀರಿ? ನೀವು ಬಿಜೆಪಿಯನ್ನು ಹಿಮ್ಮೆಟ್ಟಲು ಬಯಸುವಿರಾ ಅಥವಾ ನಿಮ್ಮ ಸ್ಥಾನವನ್ನು ಗಟ್ಟಿಗೊಳಿಸಲು ಬಯಸುವಿರಾ?

ಉ: ರಾಜ್ಯ ಚುನಾವಣೆಯಲ್ಲಿ ಕೆಸಿಆರ್ ವಿರುದ್ಧ ಕಾಂಗ್ರೆಸ್ ಹೋರಾಡಿದೆ. ರಾಷ್ಟ್ರೀಯ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿ ಮತ್ತು ನರೇಂದ್ರ ಮೋದಿ ವಿರುದ್ಧ ಹೋರಾಟವಿದೆ. ಹಾಗಾಗಿ, ಮೋದಿ ಮತ್ತು ಬಿಜೆಪಿ ವಿರುದ್ಧ ನಾನು ಹೋರಾಡಬೇಕಾಗಿದೆ ಎಂಬುದು ಸ್ಪಷ್ಟವಾಗಿದೆ.

ಪ್ರಶ್ನೆ: ಉತ್ತರ-ದಕ್ಷಿಣ ವಿಭಜನೆಯ ಬಗ್ಗೆ ಮಾತುಗಳಿವೆ. ಎರಡೂ ಭಾಗಗಳಲ್ಲಿನ ಭಾಷಾ ವ್ಯತ್ಯಾಸಗಳನ್ನು ಹೊರತುಪಡಿಸಿ ಬೇರೆ ಸಮಸ್ಯೆಗಳಿವೆ ಎಂದು ನೀವು ಭಾವಿಸುತ್ತೀರಾ?

ಉ: ಖಂಡಿತವಾಗಿಯೂ ಹೌದು. ಸಂಸತ್ತಿನ ಚುನಾಯಿತ ಸದಸ್ಯನಾಗಿ ನಾನು ನರೇಂದ್ರ ಮೋದಿಯನ್ನು ಗಮನಿಸಿದ್ದೇನೆ. ಲೋಕಸಭೆಯಲ್ಲಿ ಗುಜರಾತ್ 26 ಪ್ರತಿನಿಧಿಗಳನ್ನು ಹೊಂದಿದೆ. ಆದರೆ, ಅವರು ತಮ್ಮ ಕ್ಯಾಬಿನೆಟ್‌ನಲ್ಲಿ 7 ಮಂದಿಗೆ ಮಂತ್ರಿ ಸ್ಥಾನ ನೀಡಿದ್ದಾರೆ. ಒಟ್ಟಾರೆಯಾಗಿ, ಆಂಧ್ರಪ್ರದೇಶ ಮತ್ತು ತೆಲಂಗಾಣ ಲೋಕಸಭೆಯಲ್ಲಿ 42 ಪ್ರತಿನಿಧಿಗಳನ್ನು ಹೊಂದಿದೆ. ಆದರೆ, ಈ ಎರಡೂ ರಾಜ್ಯಗಳು ಕೇಂದ್ರ ಸರ್ಕಾರದಲ್ಲಿ ಕೇವಲ ಒಬ್ಬ ಸಚಿವರನ್ನು ಮಾತ್ರ ಹೊಂದಿದೆ. ಭಾರತದಲ್ಲಿ ಹಿಂದಿಯ ನಂತರ ತೆಲುಗು ಎರಡನೇ ಅತಿದೊಡ್ಡ ಮಾತನಾಡುವ ಭಾಷೆಯಾಗಿದೆ. ಆದರೆ, ತೆಲುಗು ಕೇವಲ ಒಂದು ಪ್ರಾತಿನಿಧ್ಯವನ್ನು ಪಡೆದುಕೊಂಡಿದೆ ಅಷ್ಟೇ. ಅವರು ಉತ್ತರ ಪ್ರದೇಶಕ್ಕೆ 12 (ಸಚಿವರು) ನೀಡಿದ್ದಾರೆ, ರಾಜಸ್ಥಾನ ಮತ್ತು ಬಿಹಾರಕ್ಕೆ ಉತ್ತಮ ಪ್ರಾತಿನಿಧ್ಯವನ್ನು ನೀಡಿದ್ದಾರೆ – ಎಲ್ಲವೂ ಹಿಂದಿ ಮಾತನಾಡುವ ರಾಜ್ಯಗಳು.

ಬಜೆಟ್ ಹಂಚಿಕೆಯನ್ನೂ ನೋಡಿ. ಕೇಂದ್ರದ ಹಂಚಿಕೆಯ ಒಂದು ರೂಪಾಯಿಯಲ್ಲಿ, ನಾವು ಕೇವಲ 43 ಪೈಸೆಗಳನ್ನು ಪಡೆಯುತ್ತಿದ್ದರೆ, ಬಿಹಾರಕ್ಕೆ 7.05 ರೂ., ಉತ್ತರ ಪ್ರದೇಶಕ್ಕೆ 6 ರೂ. ನೀಡಲಾಗುತ್ತಿದೆ. ಇದೇನು ತಾರತಮ್ಯ ಅಲ್ಲವೇ? ಸಂಪನ್ಮೂಲ ವಿತರಣೆಯು ನ್ಯಾಯಯುತ ನಿಯಮಗಳ ಮೇಲಿಲ್ಲ ಎಂಬುದು ಸಷ್ಟ.

ಪ್ರಶ್ನೆ: ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಲು ಹಿಂದುಳಿದ ವರ್ಗಗಳ ಕೋಟಾವನ್ನು ಕೈಬಿಡಲು ಕಾಂಗ್ರೆಸ್ ಬಯಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಜಾತಿ ಗಣತಿಯನ್ನು ಜನರಿಗೆ ವಿವರಿಸುವುದು ನಿಮಗೆ ಕಷ್ಟವೇ?

ಉ: ಸುಳ್ಳು ಮತ್ತು ಅಸತ್ಯವನ್ನು ಹೇಳುವುದರಲ್ಲಿ ಮೋದಿ ಡಾಕ್ಟರೇಟ್ ಪಡೆದಿದ್ದಾರೆ. ಜಾತಿ ಗಣತಿ ನಂತರ ನಾವು ಆಸ್ತಿ ಮೌಲ್ಯಮಾಪನಕ್ಕೆ ಹೋಗುತ್ತಿಲ್ಲ. ಇದು ಜನಸಂಖ್ಯೆಯ ಎಣಿಕೆ, ಸಂಪತ್ತು ಹಂಚಿಕೆ ಅಲ್ಲ. ನಮ್ಮ ಪಕ್ಷವು ಎಲ್ಲ ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿದೆ – ಅದು ನಮ್ಮ ದಾಖಲೆಯಾಗಿದೆ. ನಮ್ಮ ಸರ್ಕಾರಗಳು ಎಸ್‌ಸಿ/ಎಸ್‌ಟಿ ಮೀಸಲಾತಿ ಮತ್ತು ಒಬಿಸಿಗಳಿಗೆ ಮೀಸಲಾತಿ ಕೋಟಾ ನೀಡಿವೆ. ಮಂಡಲ್ ಆಯೋಗದ ವರದಿಯು ಮೀಸಲಾತಿಯನ್ನು 52%ಗೆ ಸೀಮಿತಗೊಳಿಸಿ ಶಿಫಾರಸು ಮಾಡಿದ ನಂತರ ಮತ್ತು ಸಂಖ್ಯೆಗಳಿಲ್ಲದೆ ಮೀಸಲಾತಿಯನ್ನು ಹೇಗೆ ನೀಡಬಹುದು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದ ನಂತರ, 50% ಮಿತಿಯೊಂದಿಗೆ ಮೀಸಲಾತಿಯನ್ನು ಹೊಂದಿಸಲಾಗಿದೆ. 50% ಮಿತಿಯನ್ನು ವಿಸ್ತರಿಸಬೇಕೆಂದರೆ, ಒಬಿಸಿ ಸಮುದಾಯಗಳು ಎಷ್ಟಿವೆ – ಎಷ್ಟು ಜನರಿದ್ದಾರೆ ಎಂಬುದನ್ನು ತಿಳಿಯಬೇಕು. ಅದಕ್ಕಾಗಿ, ನಾವು ಜನಗಣತಿಯನ್ನು ಮಾಡಲು ಬಯಸುತ್ತೇವೆ. ಜನಸಂಖ್ಯೆಯ ಆಧಾರದ ಮೇಲೆ ನಾವು ಮೀಸಲಾತಿ ನೀಡಲು ಬಯಸುತ್ತೇವೆ. ಜನಸಂಖ್ಯೆಗೆ ಆಧಾರವಾಗಿ ಸಮುದಾಯಗಳಿಗೆ ಹೆಚ್ಚಿನ ಹಣವನ್ನು ಮೀಸಲಿಡಲು ನಾವು ಬಯಸುತ್ತೇವೆ. – ಇದನ್ನೇ ನಾವು ಹೇಳಿದ್ದೆವು. ಆದರೆ, ಮೋದಿ ಅವರು ಮಂಗಳಸೂತ್ರ ಮತ್ತು ಎರಡನೇ ಮನೆಯನ್ನು ಕಿತ್ತುಕೊಳ್ಳುತ್ತೇವೆಂದು ಜನರನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ. ಜನರ ಮನೆಗಳನ್ನು ಕಸಿದುಕೊಳ್ಳಲು ಸಾಧ್ಯವೇ? 13 ವರ್ಷ ಮುಖ್ಯಮಂತ್ರಿ, 10 ವರ್ಷ ಪ್ರಧಾನಿಯಾಗಿದ್ದ ಮೋದಿ ಅವರಿಗೆ ಇಷ್ಟೂ ಅರ್ಥವಾಗಿಲ್ಲವೇ. ಅವರು ಸುಮ್ಮನೆ ಮಾತನಾಡುತ್ತಿದ್ದಾರೆ.

ಮೋದಿ ಅವರು ಜನರ ಹಣವನ್ನು ಕಾರ್ಪೊರೇಟ್‌ಗಳಿಗೆ ಕೊಡಲು ಬಯಸುತ್ತಿದ್ದಾರೆ. ಅವರು ಕ್ರೋನಿ ಬಂಡವಾಳಶಾಹಿಯನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ. ಬಿಜೆಪಿ ಕಾರ್ಪೊರೇಟ್ ರಾಜಕೀಯ ಪಕ್ಷವಾಗಿದ್ದು, ಕಾರ್ಪೊರೇಟ್‌ಗಳನ್ನು ರಕ್ಷಿಸುವುದು ಅವರ ಆಸಕ್ತಿಯಾಗಿದೆ.

ಪ್ರಶ್ನೆ: ಸಂಪತ್ತು ಮರುವಿಂಗಡಣೆ ಕುರಿತು ರಾಹುಲ್ ಗಾಂಧಿಯವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದೀರಿ. ನೀವು ಇದನ್ನು ಹೇಗೆ ವಿವರಿಸುತ್ತೀರಿ?

ಉ: ರಾಹುಲ್ ಗಾಂಧಿ ಹೇಳಿದ್ದಕ್ಕೂ ಖಾಸಗಿ ಸಂಪತ್ತು ಅಥವಾ ಆಸ್ತಿಗಳಿಗೂ ಯಾವುದೇ ಸಂಬಂಧವಿಲ್ಲ. ಅದರಲ್ಲಿ ಯಾವುದೇ ಗೊಂದಲವೂ ಇಲ್ಲ. ಆದರೆ, ಬಿಜೆಪಿಯವರು ನಮ್ಮ ಪಕ್ಷದ ಬಗ್ಗೆ ಮತದಾರರಲ್ಲಿ ಗೊಂದಲ ಮೂಡಿಸಲು ಯತ್ನಿಸುತ್ತಿದ್ದಾರೆ. ರಾಜ್ಯದ ಖಜಾನೆ, ಭಾರತ ಸರ್ಕಾರದ ಖಜಾನೆಗಳು ಖಾಸಗಿ ಸಂಪತ್ತಿಗಿಂತ ಭಿನ್ನವಾಗಿದೆ. ರಾಹುಲ್ ಗಾಂಧಿ ಸರ್ಕಾರದ ಸಂಪತ್ತಿನ ಬಗ್ಗೆ ಮಾತನಾಡುತ್ತಿದ್ದಾರೆ. ಸರ್ಕಾರದ ಸಂಪತ್ತನ್ನು ಹೆಚ್ಚು ಅಗತ್ಯವಿರುವವರು ಮತ್ತು ಅರ್ಹರಿಗೆ ವಿತರಿಸಲು ರಾಹುಲ್‌ ಬಯಸುತ್ತಾರೆ.  ಅದರೆ, ಈಗ ಬಿಜೆಪಿ ಆ ಸಂಪತ್ತನ್ನು ಕಾರ್ಪೊರೇಟ್‌ಗಳಿಗೆ ಮಾತ್ರ ಹಂಚುತ್ತಿದೆ. ಅದೇ ರಾಹುಲ್ ಗಾಂಧಿಗೂ ಬಿಜೆಪಿಗೂ ಇರುವ ವ್ಯತ್ಯಾಸ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಸರ್ಕಾರಿ ಸಂಪತ್ತನ್ನು ಅದಾನಿ, ಅಂಬಾನಿ ಅಥವಾ ಮೋದಿಯವರ ಇತರ ಕಾರ್ಪೊರೇಟ್ ಸ್ನೇಹಿತರಿಗೆ ನೀಡುವುದಿಲ್ಲ ಎಂದು ಬಿಜೆಪಿ ಹೆದರುತ್ತಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಅಡಿಯಲ್ಲಿ 16 ಲಕ್ಷ ಕೋಟಿ ರೂಪಾಯಿ ಮೌಲ್ಯದ ಪಿಎಸ್‌ಯುಗಳು ಮತ್ತು ನವರತ್ನಗಳು ಕೇವಲ 6 ಲಕ್ಷ ಕೋಟಿ ರೂಪಾಯಿಗಳಿಗೆ ಕಾರ್ಪೊರೇಟ್‌ಗಳ ಪಾಲಾಗಿದೆ. ಮೋದಿ ಸರ್ಕಾರ ಕಾರ್ಪೊರೇಟ್‌ಗಳಿಗೆ ಅತಿ ಕಡಿಮೆ ಬೆಲೆ ಸರ್ಕಾರಿ ಸಂಪತ್ತನ್ನು ಮಾರಾಟ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅದು ನಡೆಯುವುದಿಲ್ಲ. ‘ಅದಯಂ ಪೆಂಚು, ಪೆಡಲುಕು ಪಂಚು’ (ಸರ್ಕಾರದ ಆದಾಯವನ್ನು ಹೆಚ್ಚಿಸಿ ಮತ್ತು ಅರ್ಹ ಬಡವರಿಗೆ ಹಂಚುವುದು) – ಇದು ಕಾಂಗ್ರಸ್‌ನ ಉದ್ದೇಶವಾಗಿದೆ.

ಪ್ರಶ್ನೆ: ಹಿಂದುಳಿದವರಿಗೆ ಬಿಜೆಪಿ ಹಣ ನೀಡುವುದಿಲ್ಲ ಎಂದು ಏಕೆ ಆರೋಪ ಮಾಡುತ್ತೀರಿ?

ಉ: ಆರ್‌ಎಸ್‌ಎಸ್‌ನ ಅಂಗಸಂಸ್ಥೆಗಳಲ್ಲಿ ಬಿಜೆಪಿಯೂ ಒಂದು. ಮೀಸಲಾತಿ ವಿಚಾರದಲ್ಲಿ ಆರ್‌ಎಸ್‌ಎಸ್‌ ನಿಲುವು ಏನೆಂಬುದು ಎಲ್ಲರಿಗೂ ಗೊತ್ತು. ಬಿಜೆಪಿಯ ಮೂಲ ಸಿದ್ಧಾಂತ ಆರೆಸ್ಸೆಸ್ ಮಾತ್ರ. ಅವರಿಗೆ ಮೀಸಲಾತಿ ಬೇಕಾಗಿಲ್ಲ. ಯಾಕೆಂದರೆ, ಅವರು ಮನುಸ್ಮೃತಿ ಆಧಾರದಲ್ಲಿ ವರ್ಗಗಳನ್ನು ಜಾರಿಗೆ ಗೊಳಿಸಲು ಬಯಸುತ್ತಾರೆ.

ಪ್ರಶ್ನೆ: ತೆಲಂಗಾಣದಲ್ಲಿ ಬಿಆರ್‌ಎಸ್ ತನ್ನ ನೆಲೆ ಕಳೆದುಕೊಳ್ಳುತ್ತಿರುವಂತೆ ಕಾಣುತ್ತಿದೆ. ಆ ಜಾಗವನ್ನು ಬಿಜೆಪಿ ಅತಿಕ್ರಮಿಸಲು ಯತ್ನಸುತ್ತಿದೆ. ಇದನ್ನು ನೀವು ಹೇಗೆ ಎದುರಿಸುತ್ತಿದ್ದೀರಿ?

ಉ: ಇದು ರಾಷ್ಟ್ರೀಯ ಚುನಾವಣೆಯಾಗಿದ್ದು, ಬಿಆರ್‌ಎಸ್‌ಗೆ ಇದರಲ್ಲಿ ಹೆಚ್ಚಿನ ಪಾಲು ಇಲ್ಲ. ಇದೀಗ ಜೈಲಿನಲ್ಲಿರುವ ಕೆಸಿಆರ್ ಪುತ್ರಿ ಕೆ ಕವಿತಾ ಅವರ ಬಿಡುಗಡೆಗಾಗಿ ಐದು ಸ್ಥಾನಗಳಲ್ಲಿ ಬಿಜೆಪಿ ಜತೆ ಬಿಆರ್‌ಎಸ್ ಚೌಕಾಸಿ ನಡೆಸಿದೆ. ಬಿಜೆಪಿಗೆ ಸಹಾಯ ಮಾಡಲು ಬಿಆರ್‌ಎಸ್ ಐದು ಸ್ಥಾನಗಳಲ್ಲಿ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆ ಕ್ಷೇತ್ರಗಳಲ್ಲೂ ಕೆಸಿಆರ್ ಪ್ರಚಾರ ನಡೆಸುತ್ತಿಲ್ಲ. ಕವಿತಾಗೆ ಜಾಮೀನು ಪಡೆಯಲು 17 ಸಂಸದೀಯ ಸ್ಥಾನಗಳ ಪೈಕಿ ಕೆಸಿಆರ್ ಐದು ಸ್ಥಾನಗಳಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಇದನ್ನು ಜನರಿಗೆ ವಿವರಿಸಬೇಕು. ತಾರತಮ್ಯ, ಉತ್ತರ-ದಕ್ಷಿಣ ವಿಭಜನೆ ಹಾಗೂ ಬಿಜೆಪಿ/ಮೋದಿಯ ತೆಲುಗು ವಿರೋಧಿ ನಿಲುವಿನ ಬಗ್ಗೆ ಜನರೊಂದಿಗೆ ನಾನು ಮಾತನಾಡುತ್ತೇನೆ. ನಾವು ಬಿಜೆಪಿ-ಬಿಆರ್‌ಎಸ್ ಮೈತ್ರಿ ಬಗ್ಗೆ ಮಾತನಾಡುತ್ತೇವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X