ಹಿಂದೂ ಹಾಗೂ ಸಿಖ್ ದೇವತೆಗಳು ಹಾಗೂ ಪೂಜಾ ಸ್ಥಳಗಳ ಹೆಸರಿನಲ್ಲಿ ಬಿಜೆಪಿ ಪರವಾಗಿ ಮತಯಾಚಿಸಿದ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು 6 ವರ್ಷಗಳ ಕಾಲ ಉಚ್ಚಾಟಿಸಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ಪ್ರಕರಣವನ್ನು ವಿಚಾರಣೆಗೊಳಿಸಿದ ನ್ಯಾಯಮೂರ್ತಿ ಸಚಿನ್ ಮೂರ್ತಿ ಅವರು, ನೀತಿ ಸಂಹಿತೆಯ ಉಲ್ಲಂಘನೆಯಡಿಯಲ್ಲಿ ಈ ಅರ್ಜಿಯನ್ನು ಅರ್ಜಿದಾರರು ಸಂಪೂರ್ಣವಾಗಿ ತಪ್ಪಾಗಿ ಭಾವಿಸಿದ್ದಾರೆ. ಚುನಾವಣಾ ಆಯೋಗಕ್ಕೆ ಇಂತಹ ಯಾವುದೇ ನಿರ್ದಿಷ್ಟ ದೂರನ್ನು ಪರಿಗಣಿಸುವಂತೆ ನ್ಯಾಯಾಲಯವು ಅನುಮತಿಸುವುದಿಲ್ಲ ಎಂದು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ನ್ಯಾಯಾಲಯದಲ್ಲಿ ಹಾಜರಿದ್ದ ಚುನಾವಣಾ ಆಯೋಗದ ಪರ ವಕೀಲ ಸಿದ್ಧಾಂತ್ ಕುಮಾರ್,ಪ್ರಧಾನಿಯವರು ತಾವು ಪ್ರಾತಿನಿಧಿಸಿದ ನಂತರ ಏ.21 ರಂದು ಭಾಷಣ ಮಾಡಿದ್ದು, ಚುನಾವಣಾ ಆಯೋಗವು ದಿನನಿತ್ಯದ ಆಧಾರದ ಮೇಲೆ ದೂರುಗಳನ್ನು ಸ್ವೀಕರಿಸಲಿದೆ. ಅರ್ಜಿದಾರರು ದೂರು ಸಲ್ಲಿಸಿದ್ದು, ನಾವು ಇದನ್ನು ಪ್ರಕ್ರಿಯೆಗೊಳಿಸುತ್ತಿದ್ದೇವೆ. ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸುಳ್ಳುಗಾರರನ್ನು ಸೋಲಿಸುವ ಸಮಯ ಬಂದಿದೆ; ಮತದಾರರೇ ಮುಂದಾಗಬೇಕಿದೆ
ವಕೀಲರಾದ ಆನಂದ್ ಎಸ್ ಜೋದಾಲೆ ಅವರು ಪ್ರಜಾಪ್ರತಿನಿಧಿ ಕಾಯ್ದೆಯಡಿ ಪ್ರಧಾನಿ ಅವರನ್ನು 6 ವರ್ಷಗಳ ಕಾಲ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ನಿಷೇಧಿಸಲು ಕ್ರಮ ಕೈಗೊಳ್ಳುವಂತೆ ಅರ್ಜಿ ಸಲ್ಲಿಸಿದ್ದರು.
ಪ್ರಧಾನಿ ಅವರು ಏ.9 ರಂದು ಜಾತಿ ಹಾಗೂ ದ್ವೇಷ ಆಧಾರಿತದ ಮೇಲೆ ಭಾಷಣ ಮಾಡಿರುವುದು ಪ್ರಚೋದನಾಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.
