ಪ್ರಜ್ವಲ್‌ ಪ್ರಕರಣ | ಕಾಂಗ್ರೆಸ್‌ನ ಮಹಾನ್ ನಾಯಕನ ಕೈವಾಡದಿಂದ ಪೆನ್‌ಡ್ರೈವ್ ಬಹಿರಂಗ: ಕುಮಾರಸ್ವಾಮಿ

Date:

Advertisements

ಹಾಸನದ ಸಂಸದ ಪ್ರಜ್ವಲ್ ರೇವಣ್ಣನವರ ಅಶ್ಲೀಲ ವಿಡಿಯೋ ಸಂಗ್ರಹದ ಪೆನ್ ಡ್ರೈವ್ ಪ್ರಕರಣದಲ್ಲಿ ಕಾಂಗ್ರೆಸ್‌ನ ಮಹಾನ್ ನಾಯಕನ ಕೈವಾಡವಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಪರೋಕ್ಷವಾಗಿ ಡಿಸಿಎಂ ಡಿಕೆ ಶಿವಕುಮಾರ್‌ ವಿರುದ್ಧ ಆರೋಪಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, “ಇಡೀ ಪ್ರಕರಣದ ಮೂಲ ಪ್ರಜ್ವಲ್ ರೇವಣ್ಣನವರ ಕಾರ್ ಡ್ರೈವರ್ ಕಾರ್ತಿಕ್. ಅವರು ಏಕೆ ಪೆನ್ ಡ್ರೈವ್ ನಲ್ಲಿ ಪ್ರಜ್ವಲ್ ವಿಡಿಯೋಗಳನ್ನು ಹಾಕಿಕೊಂಡರು? ಆನಂತರ ಅವರು ಯಾರನ್ನು ಸಂಪರ್ಕಿಸಿದರು ಎಂಬಿತ್ಯಾದಿ ಮಾಹಿತಿ ಕೆದಕಿದರೆ ಅದರ ಹಿಂದೆ ದೊಡ್ಡ ಕಥೆಯೇ ಇದೆ. ಇದು ಕೂಡ ಎಸ್ಐಟಿ ತನಿಖೆಯಿಂದ ತಿಳಿದುಬರಲಿ” ಎಂದರು.

“ಪ್ರಜ್ವಲ್ ವಿರುದ್ಧ ದೇವರಾಜೇಗೌಡರು ಕೇಸ್ ಹಾಕಿದ್ದು ಅದಕ್ಕಾಗಿ ವರ್ಷಗಟ್ಟಲೆ ಹೋರಾಟ ಮಾಡಿದ್ದಾರೆ. ಹಾಗಾಗಿ, ಕಾರ್ತಿಕ್ ಅವರು ದೇವರಾಜೇ ಗೌಡರ ಬಳಿಗೆ ಹೋಗಿದ್ದಾರೆ. ಅದಕ್ಕೂ ಮೊದಲು ಅವರು ಕಾಂಗ್ರೆಸ್ಸಿನ ಆ ಮಹಾನ್ ನಾಯಕನಿಗೆ ಪೆನ್ ಡ್ರೈವ್ ಮುಟ್ಟಿಸಿ, ಅವರಿಗೆ ವಿಷಯ ತಿಳಿಸಿದ್ದರು” ಎಂದರು.

Advertisements

“ಕಾರ್ತಿಕ್ ಎಂಬ ಕಾರು ಚಾಲಕನಿಗೂ, ಪ್ರಜ್ವಲ್ ರೇವಣ್ಣನವರಿಗೂ ಮೊದಲೇ ದ್ವೇಷವಿತ್ತು. ಆ ಹಿನ್ನೆಲೆಯಲ್ಲಿ ಕಾರ್ತಿಕ್ ಅವರು ಹಳೆಯ ವಿಡಿಯೋಗಳನ್ನು ಪೆನ್ ಡ್ರೈವ್ ನಲ್ಲಿ ಇಟ್ಟಿದ್ದರು. ಆ ಪೆನ್ ಡ್ರೈವ್ ಅವರನ್ನು ಹಾಸನದಲ್ಲಿರುವ ಬಿಜೆಪಿ ನಾಯಕ ದೇವರಾಜೇಗೌಡರಿಗೆ ತೋರಿಸಿದ್ದರು” ಎಂದು ಹೇಳಿದರು.

“ಕಾಂಗ್ರೆಸ್‌ನ ಆ ಮಹಾನ್ ನಾಯಕ ಪೆನ್ ಡ್ರೈವ್ ನಲ್ಲಿರುವ ಎಲ್ಲಾ ವಿಡಿಯೋಗಳನ್ನು ಗಮನಿಸಿ ಸಮಯ ಬಂದಾಗ ಅದನ್ನು ಹೊರತರಲು ಪ್ಲ್ಯಾನ್ ಮಾಡಿದ್ದರು. ಅದರಂತೆ, ಚುನಾವಣೆ ಬಂದಾಗ ಅದನ್ನು ರಿಲೀಸ್ ಮಾಡಿದ್ದಾರೆ. ಅದಕ್ಕಾಗಿ ಬಾರೀ ಹಣವನ್ನೂ ಖರ್ಚು ಮಾಡಿದ್ದಾರೆ” ಎಂದು ಕಿಡಿಕಾರಿದರು.

“ಆ ಮಹಾನ್ ನಾಯಕ ಹೀಗೆ ಸಂತ್ರಸ್ತ ಮಹಿಳೆಯರ ವಿಡಿಯೋಗಳನ್ನು ಹಂಚುವ ಮೂಲಕ ಆ ಮಹಿಳೆಯರಿಗೆ ಎಂಥ ಗೌರವ ಕೊಟ್ಟಿದ್ದಾರೆ ಎಂಬುದು ಇಲ್ಲೇ ಗೊತ್ತಾಗುತ್ತೆ. ಪೆನ್ ಡ್ರೈವ್ ಗಳನ್ನು ಯಾವ ರೀತಿ ಹಾಸನದಲ್ಲಿ ಚರ್ಚೆ ಮಾಡಿದರು, ಇಂತಹ ಎಲ್ಲಾ ವಿಚಾರಗಳನ್ನು ಎಸ್ ಐಟಿ ತನಿಖೆ ನಡೆಸಬೇಕು” ಎಂದು ಒತ್ತಾಯಿಸಿದರು.

“ಪ್ರಜ್ವಲ್‌ ರೇವಣ್ಣ ಅವರ ಸಂಗತಿಯನ್ನು ಅಮಿತ್‌ ಶಾ ಅವರು ನಮಗೆ ಬಿಟ್ಟಿದ್ದಾರೆ. ಈ ಬಗ್ಗೆ ಗೊಂದಲ ಬೇಡ. ಕಾಂಗ್ರೆಸ್‌ನವರು ನಮ್ಮ ಮನೆ ಮುಂದೆ ಬಂದು ಯಾಕೆ ಪ್ರತಿಭಟಿಸ್ತಾರೆ? ಮಹಾನ್‌ ನಾಯಕನ ಮುಂದೆ ಹೋಗಿ ಪ್ರತಿಭಟಿಸಲಿ. ನಾವು ಸಂತ್ರಸ್ತ ಮಹಿಳೆಯರ ಪರವಾಗಿ ಇದ್ದೇನೆ. ನರೇಂದ್ರ ಮೋದಿ ಅವರನ್ನು ಸುಮ್ಮನೇ ಯಾಕೆ ಎಳೆದು ತರುತ್ತೀರಿ?” ಎಂದು ಪ್ರಶ್ನಿಸಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ, ಬೆಂಕಿ ಹಚ್ಚಿ ಸುಟ್ಟ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಎಸ್ ಎಫ್ ಐ ಆಗ್ರಹ

ಚಿತ್ರದುರ್ಗದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಹಿರಿಯೂರು ತಾಲೂಕಿನ 19 ವರ್ಷದ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಆಹ್ವಾನ ಸಂಪೂರ್ಣ ಸುಳ್ಳು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಈ ಬಾರಿಯ ದಸರಾ ಉದ್ಘಾಟನೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಆಹ್ವಾನಿಸಲಾಗಿದೆ...

Download Eedina App Android / iOS

X