ಒಂದು ವಾರದ ಹಿಂದಷ್ಟೆ ಎಟಿಎಂ ಯಂತ್ರವನ್ನು ಹಾಳುಗೆಡವಿ ಜನರಿಗೆ ಮೋಸ ಮಾಡಿದ್ದ ಮೂವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.
ಪೊಲೀಸರ ಮಾಹಿತಿಯ ಪ್ರಕಾರ ವಂಚಕರು ಎಟಿಎಂ ಕಾರ್ಡ್ ಸ್ವೈಪ್ ಮಾಡುವ ರೀಡರ್ ಅನ್ನು ಹಾಳು ಮಾಡಿ ಹಣ ದೊಚಿದ್ದರು.
ವಂಚಕರು ಮೋಸ ಮಾಡುವ ವಿಧಾನ
ಮೊದಲಿಗೆ ವಂಚಕರು ಎಟಿಎಂ ಯಂತ್ರದಲ್ಲಿ ಕಾರ್ಡ್ ರೀಡ್ ಮಾಡುವ ಭಾಗವನ್ನು ಕಾರ್ಡ್ ವಾಪಸ್ ಬರದ ರೀತಿ ಹಾಳು ಮಾಡಿರುತ್ತಾರೆ
ಗ್ರಾಹಕರು ಹಣ ಪಡೆಯಲು ಎಂಟಿಎಂ ಕೇಂದ್ರದೊಳಗೆ ಪ್ರವೇಶಿಸಿ ಎಟಿಎಂ ಯಂತ್ರದಲ್ಲಿನ ಕಾರ್ಡ್ ರೀಡಿಂಗ್‌ನಲ್ಲಿ ಹಣ ಸ್ವೈಪ್ ಮಾಡಿದಾಗ ಕಾರ್ಡ್ ಯಂತ್ರದೊಳಗೆ ಸಿಲುಕಿಕೊಳ್ಳುತ್ತದೆ
ಎಟಿಎಂ ಬಳಿಯಲ್ಲೇ ಇದ್ದು ಹಣ ಪಡೆಯುವ ಹಾಗೆ ಎಟಿಎಂ ಕೇಂದ್ರದೊಳಗೆ ಪ್ರವೇಶಿಸುವ ವಂಚಕರು ಯಂತ್ರದಲ್ಲಿ ಕಾರ್ಡ್ ಸಿಲುಕಿರುವುದನ್ನು ತೆಗೆಯಲು ಸಹಾಯ ಮಾಡುವಂತೆ ನಟಿಸಿ ಪಿನ್ ನಂಬರ್‌ಅನ್ನು ಪಡೆಯುತ್ತಾರೆ
ಪಿನ್ ನಂಬರ್‌ಅನ್ನು ಪಡೆದ ವಂಚಕರು, ಯಂತ್ರದಲ್ಲಿ ಸಂಖ್ಯೆಗಳನ್ನು ಒತ್ತಿದವರಂತೆ ನಟಿಸುತ್ತಾರೆ. ಸಮಸ್ಯೆ ಸರಿಯಾಗಿಲ್ಲ ತಾವು ಬ್ಯಾಂಕ್ ಸಿಬ್ಬಂದಿಯನ್ನು ಭೇಟಿ ಮಾಡಿ ಎಂದು ಗ್ರಾಹಕರಿಗೆ ಹೇಳಿ ಕಳುಹಿಸುತ್ತಾರೆ
ಗ್ರಾಹಕರು ತೆರಳಿದ ನಂತರ, ವಂಚಕರು ಯಂತ್ರದೊಳಗೆ ಸಿಲುಕಿದ ಕಾರ್ಡ್‌ಅನ್ನು ಪಡೆದುಕೊಂಡು ಹಣವನ್ನು ವಿತ್‌ಡ್ರಾ ಮಾಡಿಕೊಳ್ಳುತ್ತಾರೆ
ಈ ಸುದ್ದಿ ಓದಿದ್ದೀರಾ? ಎಟಿಎಂ ಕಾರ್ಡ್ ಬಳಸದೆಯೇ, ಇನ್ನು ಮುಂದೆ ಯುಪಿಐ ಬಳಸಿ ನಗದು ವಿತ್ ಡ್ರಾ ಮಾಡಬಹುದು
ಗ್ರಾಹಕರು ವಂಚಕರಿಂದ ರಕ್ಷಿಸಿಕೊಳ್ಳುವುದು ಹೇಗೆ?
ಗ್ರಾಹಕರು ಎಟಿಎಂ ಯಂತ್ರಕ್ಕೆ ಕಾರ್ಡ್ ಹಾಕುವ ಮುನ್ನ ಯಂತ್ರವನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಯಂತ್ರವು ಹಾಳಾಗಿದೆಯೆ,ಸ್ವೈಪ್ ಮಾಡುವ ಭಾಗಗಳು ದುರಸ್ಥಿಯ ರೀತಿಯಲ್ಲಿವೆಯೆ ಅಥವಾ ಅನುಮಾನಸ್ಪದ ರೀತಿಯಲ್ಲಿ ವೈರ್‌ಗಳು, ಸಲಕರಣೆಯನ್ನು ಜೋಡಿಸಲಾಗಿದೆಯೆ ಎಂಬುದನ್ನು ಪರಿಶೀಲಿಸಿ.
ಎಟಿಎಂ ಪಿನ್ ಅನ್ನು ಒತ್ತುವ ಸಂದರ್ಭದಲ್ಲಿ ನಿಮ್ಮ ಕೈಅನ್ನು ನಂಬರ್ ಮೇಲೆ ಅಡ್ಡ ಇಟ್ಟು ಒತ್ತಿರಿ. ಇದು ಗುಪ್ತ ಕ್ಯಾಮರಾಗಳಿಂದ ನಿಮ್ಮ ಪಿನ್ ಸಂಖ್ಯೆಗಳನ್ನು ರಕ್ಷಿಸುತ್ತದೆ
ಬ್ಯಾಂಕ್ ಬಳಿಯಿರುವ ಎಟಿಎಂ ಯಂತ್ರಗಳು ಅಥವಾ ಸಿಸಿಟಿವಿಗಳಿರುವ ಎಟಿಎಂ ಯಂತ್ರಗಳನ್ನು ಬಳಸಿ
ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಹಾಗೂ ವಹಿವಾಟುಗಳನ್ನು ಪರಿಶೀಲಿಸಿ. ಎಲ್ಲ ವಹಿವಾಟುಗಳು ಸರಿಯಾಗಿವೆ ಎಂದು ಖಚಿತಪಡಿಸಿಕೊಳ್ಳಿ
ಮೋಸದ ವಹಿವಾಟುಗಳನ್ನು ತಡೆಯಲು ನಿಯಮಿತವಾಗಿ ನಿಮ್ಮ ಮೊಬೈಲ್‌ನ ಎಸ್‌ಎಂಎಸ್ ಸಂದೇಶವನ್ನು ಪರೀಕ್ಷಿಸುತ್ತಿರಿ